ರಾಜ್ಯದ ಅತಿ ದೊಡ್ಡ ಕಬ್ಬನ್ ಪಾರ್ಕ್ ಸೆಂಟ್ರಲ್ ಲೈಬ್ರರಿಗೆ ಅನುದಾನ ಕೊರತೆ; ನಿರ್ವಹಣೆಗೆ ಪರದಾಡುತ್ತಿರುವ ಅಧಿಕಾರಿಗಳು
ರಾಜ್ಯದ ಅತಿ ದೊಡ್ಡ ಗ್ರಂಥಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿರುವ ಸೆಂಟ್ರಲ್ ಲೈಬ್ರೆರಿಗೆ ಅನುದಾನದ ಕೊರತೆ ಎದುರಾಗಿದೆ. ಗ್ರಂಥಾಲಯ ನಿರ್ವಹಣೆಗೆಂದೇ ರಾಜ್ಯ ಗ್ರಂಥಾಲಯ ಇಲಾಖೆಯಿಂದ 24 ಕೋಟಿಯಷ್ಟು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರ್ಕಾರದಿಂದ ಕೇವಲ 10 ಕೋಟಿಯಷ್ಟು ಹಣವನ್ನ ಮಾತ್ರ ಘೋಷಣೆ ಮಾಡಿದ್ದು, ಅದ್ರಲ್ಲಿ 7ಕೋಟಿಯಷ್ಟು ಹಣ ಮಾತ್ರ ಬಿಡುಗಡೆಯಾಗಿದೆ.
ಬೆಂಗಳೂರು, ಫೆ.06: ಕಬ್ಬನ್ ಪಾರ್ಕ್ ನಲ್ಲಿರುವ ಸೆಂಟ್ರಲ್ ಲೈಬ್ರೆರಿಗೆ (Cubbon Park Central Library) ಲಕ್ಷಾಂತರ ಮಂದಿ ಭೇಟಿ ನೀಡಿ ಜ್ಞಾನ ವೃದ್ಧಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಲೈಬ್ರೆರಿಗೆ ಸರ್ಕಾರ ಅನುಧಾನ ಕಡಿಮೆ ಬಿಡುಗಡೆ ಮಾಡಿದೆ. ಈ ಕಾರಣದಿಂದ ನಿಗಧಿತ ಪುಸ್ತಕಗಳನ್ನ ಖರೀದಿ ಮಾಡಲು ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಸೆಂಟ್ರಲ್ ಲೈಬ್ರೆರಿ ಅಂದ್ರೆ ತುಂಬಾ ಫೇಮಸ್. ಯಾಕಂದ್ರೆ ಇಲ್ಲಿ ಭಾರತ ರಚನೆಯಾದ ಸಂದರ್ಭದಲ್ಲಿದ್ದ ಲೇಖಕರಿಂದ ಹಿಡಿದು, ಲೇಟೆಸ್ಟ್ ಯುವ ಲೇಖಕರ ಪುಸ್ತಕಗಳು ಇಲ್ಲಿ ಸಿಗುತ್ತವೆ. ಅಲ್ಲದೇ ಯಾವುದೇ ಪುಸ್ತಕಗಳು ಹೊಸದಾಗಿ ಬಂದ್ರೆ ಮೊದಲ ಪ್ರತಿಗಳು ಈ ಲೈಬ್ರೆರಿಯಲ್ಲಿಯೇ ಸಿಗುತ್ವೆ. ಆದರೆ ಇತ್ತೀಚೆಗೆ ಈ ಗ್ರಂಥಾಲಯಕ್ಕೆ ಹಣ ಬಿಡುಗಡೆ ಮಾಡದ ಹಿನ್ನೆಲೆ ಗ್ರಂಥಾಲಯಗಳ ನಿರ್ವಹಣೆಯೇ ಕಷ್ಟವಾಗಿ ಹೋಗಿದೆ.
ಗ್ರಂಥಾಲಯ ನಿರ್ವಹಣೆಗೆಂದೇ ರಾಜ್ಯ ಗ್ರಂಥಾಲಯ ಇಲಾಖೆಯಿಂದ 24 ಕೋಟಿಯಷ್ಟು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರ್ಕಾರದಿಂದ ಕೇವಲ 10 ಕೋಟಿಯಷ್ಟು ಹಣವನ್ನ ಮಾತ್ರ ಘೋಷಣೆ ಮಾಡಿದ್ದು, ಅದ್ರಲ್ಲಿ 7ಕೋಟಿಯಷ್ಟು ಹಣ ಮಾತ್ರ ಬಿಡುಗಡೆಯಾಗಿದೆ. ಹೀಗಾಗಿ ಮೂರು ವರ್ಷಗಳಿಂದ ಗ್ರಂಥಾಲಯದಲ್ಲಿ ಯಾವುದೇ ಹೊಸ ಪುಸ್ತಕಗಳನ್ನ ಖರೀದಿಸುವಲ್ಲಿ ತಡವಾಗುತ್ತಿದೆ. ಇದರ ಜೊತೆಗೆ ಗ್ರಂಥಾಲಯಕ್ಕೆ ಬರಬೇಕಾದ ಕರವನ್ನ ಬಿಬಿಎಂಪಿ ಬಾಕಿ ಉಳಿಸಿಕೊಂಡಿದ್ದು, ಅದು ಕೂಡ ಸಮಸ್ಯೆಯಾಗುತ್ತಿದೆ. ಇದರಿಂದ ಓದುಗರಿಗೆ ಅಗತ್ಯ ಪುಸ್ತಕಗಳು ತಕ್ಷಣಕ್ಕೆ ಸಿಗುತ್ತಿಲ್ಲ.
ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರಿಗಾಗಿ ವಾರ್ಷಿಕ ಬಜೆಟ್ ಮಂಡನೆ: ಸಾರ್ವಜನಿಕರಿಂದ ಸಲಹೆ ಆಹ್ವಾನಿಸಿದ ಬಿಬಿಎಂಪಿ
ಇನ್ನು, ಸೆಸ್ ವಿಚಾರ ಸಂಬಂಧ ಬಿಬಿಎಂಪಿ ಅಧಿಕಾರಿಗಳನ್ನ ಪ್ರಶ್ನಿಸಿದ್ದಕ್ಕೆ ಗ್ರಂಥಾಲಯಕ್ಕೆ 638 ಕೋಟಿ ರೂ ಬಾಕಿ ಉಳಿದಿದ್ದು, ಈ ವರ್ಷ 64 ಕೋಟಿ ಹಣವನ್ನ ಸಧ್ಯ ಪಾವತಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಹಣವನ್ನ ಪಾವತಿಮಾಡಲಾಗುತ್ತೆ ಅಂತ ಮಾಹಿತಿ ನೀಡಿದ್ದಾರೆ.ಒಟ್ನಲ್ಲಿ, ಸಾರ್ವಜನಿಕ ಗ್ರಂಥಾಲಯದಲ್ಲಿ ಓದುಗರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಸರ್ಕಾರ ಹೆಚ್ಚಿನ ಅನುಧಾನ ಹಾಗೂ ಬಿಬಿಎಂಪಿ ನಿಗದಿನ ಸೆಸ್ ನೀಡಿದ್ದೇ ಆಗಿದ್ದಲ್ಲಿ ಓದುಗರಿಗೆ ಹೆಚ್ಚು ಉಪಯೋಗವಾಗುವುದು ಮಾತ್ರ ಸತ್ಯ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ