ಬ್ರ್ಯಾಂಡ್ ಬೆಂಗಳೂರಿಗಾಗಿ ವಾರ್ಷಿಕ ಬಜೆಟ್‌ ಮಂಡನೆ: ಸಾರ್ವಜನಿಕರಿಂದ ಸಲಹೆ ಆಹ್ವಾನಿಸಿದ ಬಿಬಿಎಂಪಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತನ್ನ ಮುಂಬರುವ ವಾರ್ಷಿಕ ಬಜೆಟ್‌ಗೆ ಸಾರ್ವಜನಿಕ ಸಲಹೆಗಳನ್ನ ಆಹ್ವಾನಿಸಿದೆ. ಫೆ.10ರವರೆಗೆ ಜನರು ತಮ್ಮ ಸಲಹೆಗಳನ್ನ ನೀಡಬಹುದಾಗಿದೆ. ಬೆಂಗಳೂರಿಗೆ ಏನು ಬೇಕು? ಯಾವೆಲ್ಲ ಕೊರತೆಗಳ ಬಗ್ಗೆ ಬಜೆಟ್​ನಲ್ಲಿ ಹಣ ಮೀಸಲಿಡಬೇಕೆಂಬ ಬಗ್ಗೆ ಜನರು ಬಿಬಿಎಂಪಿಗೆ ಸಲಹೆ ನೀಡಬಹುದು. ಜನರ ಸಲಹೆ ಮೇರೆಗೆ ಬಜೆಟ್ ಮಾಡಲು ಬಿಬಿಎಂಪಿ ಮುಂದಾಗಿದೆ.

ಬ್ರ್ಯಾಂಡ್ ಬೆಂಗಳೂರಿಗಾಗಿ ವಾರ್ಷಿಕ ಬಜೆಟ್‌ ಮಂಡನೆ: ಸಾರ್ವಜನಿಕರಿಂದ ಸಲಹೆ ಆಹ್ವಾನಿಸಿದ ಬಿಬಿಎಂಪಿ
ಬಿಬಿಎಂಪಿ
Follow us
TV9 Web
| Updated By: ಆಯೇಷಾ ಬಾನು

Updated on:Feb 06, 2024 | 10:48 AM

ಬೆಂಗಳೂರು, ಫೆ.06: 2024-25ನೇ ಸಾಲಿನ ಬಜೆಟ್ (BBMP Budget) ಮಂಡನೆಗೆ ಪಾಲಿಕೆ ಸಕಲ ಸಿದ್ಧತೆ ನಡೆಸಿದೆ. ಬಜೆಟ್ ತಯಾರಿಗೆ ಸಾರ್ವಜನಿಕರಿಂದ ಸಲಹೆಗಳನ್ನ ಆಹ್ವಾನಿಸಲಾಗಿದ್ದು, ಇದೀಗ 20 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಮತ್ತೊಂದೆಡೆ ಬಜೆಟ್ ಹೇಗಿರಬೇಕು, ಬೆಂಗಳೂರಿಗೆ ಏನೇನು ಬೇಕು? ಅಂತಾ ಇನ್ನೂ ಐದು ದಿನಗಳ ಸಲಹೆ ನೀಡಲು ಸಿಟಿ ಜನರಿಗೆ BBMP ಟೈಮ್ ನೀಡಿದೆ.

ನಗರವನ್ನು ಉತ್ತಮಗೊಳಿಸಲು ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳಲು ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತನ್ನ ಮುಂಬರುವ ವಾರ್ಷಿಕ ಬಜೆಟ್‌ಗೆ ಸಾರ್ವಜನಿಕ ಸಲಹೆಗಳನ್ನ ಆಹ್ವಾನಿಸಿದೆ. ಬಿಬಿಎಂಪಿ ಕೇಂದ್ರ ಕಚೇರಿಯ ಪ್ರವೇಶ ದ್ವಾರದಲ್ಲಿ ಅಧಿಕಾರಿಗಳು ಸಲಹೆ ಪೆಟ್ಟಿಗೆ ಇರಿಸಿದ್ದು, ಫೆ.10ರವರೆಗೆ ಜನರು ತಮ್ಮ ಸಲಹೆಗಳನ್ನ ನೀಡಬಹುದಾಗಿದೆ. ಸದ್ಯ ಪಾಲಿಕೆಯ ಎಲ್ಲಾ ವಲಯದ RO, ARO, ಇಂಜಿನಿಯರ್ ನೇತೃತ್ವದಲ್ಲಿ ಸಲಹೆ ಸಂಗ್ರಹವಾಗಿದೆ. ಈಗಾಗಲೇ 20 ಸಾವಿರಕ್ಕೂ ಹೆಚ್ಚು ಸಲಹೆ. ಆನ್ ಲೈನ್ ಮುಖಾಂತರವೂ ಹರಿದು ಬಂದಿದೆ. ಸಿಟಿಯಲ್ಲಿ ರಸ್ತೆ, ಒಳಚರಂಡಿ, ರಾಜಕಾಲುವೆ, ನೀರಿನ ಸಮಸ್ಯೆಗಳ ಬಗ್ಗೆಯೇ ಹೆಚ್ಚು ಸಲಹೆಗಳು ಬಂದಿದ್ದು, ಬಜೆಟ್ ತಯಾರಿಗೆ ಸಾರ್ವಜನಿಕರ ಸಲಹೆಗಳನ್ನ ಕೂಡ ಅಳವಡಿಸಿಕೊಳ್ಳಲು ಪಾಲಿಕೆ ಪ್ಲಾನ್ ಮಾಡಿದೆ.

ಇದನ್ನೂ ಓದಿ: ಜಾಗತಿಕ ಸಂಚಾರ ದಟ್ಟಣೆಯ ಶ್ರೇಯಾಂಕದಲ್ಲಿ 2 ರಿಂದ 6ನೇ ಸ್ಥಾನಕ್ಕೆ ಇಳಿದ ಬೆಂಗಳೂರು

ಇತ್ತ ಪಾಲಿಕೆ ಬಜೆಟ್ ಜೊತೆಗೆ ಬ್ರ್ಯಾಂಡ್ ಬೆಂಗಳೂರಿನ ಕನಸಿಗೂ ಸಾರ್ವಜನಿಕರು ಸಲಹೆ ನೀಡ್ತಿದ್ದಾರೆ. ಸದ್ಯ ಬ್ರ್ಯಾಂಡ್ ಬೆಂಗಳೂರಿನ ಪರಿಕಲ್ಪನೆಗೂ ಸುಮಾರು 70 ಸಾವಿರ ಸಲಹೆಗಳು ಹರಿದುಬಂದಿದೆ. ಸದ್ಯ ಬಜೆಟ್ ಗಾತ್ರ, ಬಜೆಟ್ ನಲ್ಲಿ ಯಾವೆಲ್ಲ ಸಲಹೆಗಳನ್ನ ಅಳವಡಿಸಬೇಕು ಅನ್ನೋ ಬಗ್ಗೆ ಸರ್ಕಾರದ ಮಾರ್ಗದರ್ಶನ ಪಡೆಯಲು ಸಜ್ಜಾಗಿರೋ ಪಾಲಿಕೆ, ಬಜೆಟ್ ಗೆ ಭರ್ಜರಿಯಾಗೇ ರೆಡಿಯಾಗ್ತಿದೆ.

ಒಟ್ಟಿನಲ್ಲಿ ರಾಜ್ಯ ಬಜೆಟ್‌ನ ಒಂದು ವಾರದ ನಂತರ ಪಾಲಿಕೆ ತನ್ನ ಬಜೆಟ್ ಮಂಡಿಸಲಿದ್ದು, ಬ್ರ್ಯಾಂಡ್ ಬೆಂಗಳೂರಿಗೆ ಯಾವ ರೀತಿಯಾಗಿ ಹೊತ್ತು ಕೊಡ್ತಾರೆ, ಜನರ ಸಲಹೆಗಳನ್ನ ಎಷ್ಟರ ಮಟ್ಟಿಗೆ ಅಳವಡಿಸಿಕೊಳ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:30 am, Tue, 6 February 24