AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಗತಿಕ ಸಂಚಾರ ದಟ್ಟಣೆಯ ಶ್ರೇಯಾಂಕದಲ್ಲಿ 2 ರಿಂದ 6ನೇ ಸ್ಥಾನಕ್ಕೆ ಇಳಿದ ಬೆಂಗಳೂರು

ಬೆಂಗಳೂರಿನಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಟ್ರಾಫಿಕ್​ ಜಾಮ್​ ಕಿರಿಕಿರಿ ತಪ್ಪಿದ್ದಲ್ಲ. ಒಂದಲ್ಲಾ ಒಂದು ಸ್ಥಳದಲ್ಲಿ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಳ್ಳುತ್ತಾರೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನಗರ ಸಂಚಾರಿ ಪೊಲೀಸ್​ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಟ್ರಾಫಿಕ್​ ಪೊಲೀಸರ ಪರಿಶ್ರಮಕ್ಕೆ ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ ನೀಡಿದ ವರದಿ ಸಂತಸ ಉಂಟುಮಾಡಿದೆ. ಅದೇನೆಂದರೆ ಜಾಗತಿಕ ಸಂಚಾರ ದಟ್ಟಣೆ ಶ್ರೇಯಾಂಕದಲ್ಲಿ ಬೆಂಗಳೂರು 2022ಕ್ಕಿಂತ 2023ರಲ್ಲಿ ಇಳಿಕೆ ಕಂಡಿದೆ.

ಜಾಗತಿಕ ಸಂಚಾರ ದಟ್ಟಣೆಯ ಶ್ರೇಯಾಂಕದಲ್ಲಿ 2 ರಿಂದ 6ನೇ ಸ್ಥಾನಕ್ಕೆ ಇಳಿದ ಬೆಂಗಳೂರು
ಬೆಂಗಳೂರು ಟ್ರಾಫಿಕ್​
ವಿವೇಕ ಬಿರಾದಾರ
|

Updated on:Feb 05, 2024 | 7:58 AM

Share

ಬೆಂಗಳೂರು, ಫೆಬ್ರವರಿ 2023: ಇತ್ತೀಚೆಗೆ ಬಿಡುಗಡೆಯಾದ ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ 2023 ರ ಪ್ರಕಾರ ಜಾಗತಿಕ ಸಂಚಾರ ದಟ್ಟಣೆಯ (Traffic Congestion) ಶ್ರೇಯಾಂಕದಲ್ಲಿ ಬೆಂಗಳೂರು (Bengaluru) ಎರಡನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಇಳಿದಿದೆ. ಇದೆ ಸಂಸ್ಥೆ 2022ರಲ್ಲಿ ನೀಡಿದ್ದ ವರದಿ ಪ್ರಕಾರ ಸಂಚಾರ ದಟ್ಟಣೆಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿತ್ತು. ಇದೀಗ 2023ರಲ್ಲಿ ಆರನೇ ಸ್ಥಾನಕ್ಕೆ ಇಳಿದಿದ್ದು, ಸಂಚಾರ ದಟ್ಟಣೆಯನ್ನು ನಿರ್ವಹಿಸುವಲ್ಲಿ ಬೆಂಗಳೂರು ಸಕಾರಾತ್ಮಕ ಪ್ರವೃತ್ತಿಯನ್ನು ಪ್ರದರ್ಶಿಸಿದೆ.

ಆದರೆ 2023 ರಲ್ಲಿ ಭಾರತದ ಅತ್ಯಂತ ಜನದಟ್ಟಣೆ ನಗರಗಳ ಪೈಕಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ವರದಿಯ ಪ್ರಕಾರ, ಬೆಂಗಳೂರಿನಲ್ಲಿ 2023 ರಲ್ಲಿ 10 ಕಿಮೀ ಕ್ರಮಿಸಲು 28 ನಿಮಿಷ 10 ಸೆಕೆಂಡು ಬೇಕಾಗುತ್ತದೆ. 2022 ರಲ್ಲಿ ಇದೇ 10 ಕಿಮೀ ಕ್ರಮಿಸಲು 29 ನಿಮಿಷ ಸಮಯ ಬೇಕಾಗುತ್ತದೆ. 2023ರಲ್ಲಿ ಪೀಕ್ ಸಮಯದಲ್ಲಿ ಗಂಟೆಗೆ 18 ಕಿಮೀ ಕ್ರಮಿಸಲಾಗಿದೆ. ಅದೇ 2022ರಲ್ಲಿ ಗಂಟೆಗೆ ಕೇವಲ 14 ಕಿಮೀ ಸಾಗಬಹುದಿತ್ತು.

ಇನ್ನು ವೀಕೆಂಡ್​​ನಲ್ಲಿ, ವಿಶೇಷವಾಗಿ ಶುಕ್ರವಾರ ಸಾಯಂಕಾಲ 6-7 ಗಂಟೆಯ ನಡುವೆ ಬೆಂಗಳೂರಿನಲ್ಲಿ 10 ಕಿಮೀ ಪ್ರಯಾಣಿಸಲು 36 ನಿಮಿಷ 20 ಸೆಕೆಂಡುಗಳು ಬೇಕಾಗುತ್ತದೆ. 2022 ಕ್ಕೆ ಹೋಲಿಸಿದರೆ ಒಂದು ನಿಮಿಷಕ್ಕೆ ಕಡಿಮೆಯಾಗಿದೆ.

2023ರಲ್ಲಿ 10 ಕಿ.ಮೀ ದೂರವನ್ನು ಕ್ರಮಿಸಲು ಸರಾಸರಿ 27 ನಿಮಿಷ 50 ಸೆಕೆಂಡುಗಳ ಪ್ರಯಾಣದ ಸಮಯದೊಂದಿಗೆ ಭಾರತದ ಪುಣೆ ಕೂಡ ವಿಶ್ವದ ಟಾಪ್ 10 ಜನದಟ್ಟಣೆಯ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಹಿಂದಿನ ವರ್ಷಕ್ಕಿಂತ 30 ಸೆಕೆಂಡ್‌ಗಳಷ್ಟು ಹೆಚ್ಚಳ ಕಂಡುಬಂದಿದೆ. ಟಾಪ್ 10ರಲ್ಲಿ ಪುಣೆ ಸೇರ್ಪಡೆಯಾಗುವ ಮುಖಾಂತರ ಭಾರತದ ಪ್ರಮುಖ ನಗರಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗಳನ್ನು ಬಿಂಬಿಸುತ್ತದೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್​​ ನಿವಾರಣೆಗೆ ಕೃತಕ ಬುದ್ಧಿಮತ್ತೆ ಮೊರೆ ಹೋಗಲಿದ್ದಾರೆ ಪೊಲೀಸರು: ಏನಿದರ ಪ್ರಯೋಜನ? ಇಲ್ಲಿದೆ ವಿವರ

ನವ ದೆಹಲಿಯು 44ನೇ ಸ್ಥಾನದಲ್ಲಿದೆ. 10 ಕಿಮೀ ದೂರವನ್ನು ಕ್ರಮಿಸಲು ಸರಾಸರಿ 21 ನಿಮಿಷಗಳು ಮತ್ತು 40 ಸೆಕೆಂಡುಗಳು ಬೇಕಾಗುತ್ತದೆ. 2023 ರಲ್ಲಿ ಮುಂಬೈನಲ್ಲಿ 10 ಕಿಮೀ ಕ್ರಮಿಸಲು ಸರಾಸರಿ ಪ್ರಯಾಣದ ಸಮಯ 21 ನಿಮಿಷ ಮತ್ತು 20 ಸೆಕೆಂಡು ಬೇಕಾಗಿತ್ತು. ಈ ಮೂಲಕ ಮುಂಬೈ 54ನೇ ಸ್ಥಾನದಲ್ಲಿದೆ.

ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ 55 ದೇಶಗಳಲ್ಲಿ 387 ನಗರಗಳಲ್ಲಿನ ಟ್ರಾಫಿಕ್ ಪರಿಸ್ಥಿತಿಗಳನ್ನು ವಿಶ್ಲೇಷಿಸಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ವಾಹನಗಳು (EV) ನಂತಹ ವಿಭಿನ್ನ ರೀತಿಯ ವಾಹನಗಳ ವೇಗವನ್ನು ಅಧ್ಯಯನ ಮಾಡಿ ಈ ವರದಿ ನೀಡಿದೆ.

ವಿಶ್ವದ ಅತ್ಯಂತ ಜನದಟ್ಟಣೆಯ ನಗರಗಳು 2023

  1. ಲಂಡನ್
  2. ಡಬ್ಲಿನ್
  3. ಟೊರೊಂಟೊ
  4. ಮಿಲನ್
  5. ಲಿಮಾ
  6. ಬೆಂಗಳೂರು
  7. ಪುಣೆ
  8. ಬುಕಾರೆಸ್ಟ್
  9. ಮನಿಲಾ
  10. ಬ್ರಸೆಲ್ಸ್

ವಿಶ್ವಾದ್ಯಂತ ಪ್ರಮುಖ ನಗರಗಳು ಎದುರಿಸುತ್ತಿರುವ ದಟ್ಟಣೆ ಸವಾಲುಗಳನ್ನು ಪರಿಹರಿಸಲು ನಗರ ಯೋಜನೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ನವೀನ ಸಂಚಾರ ನಿರ್ವಹಣೆ ಪರಿಹಾರ ಅಗತ್ಯವಾಗಿದೆ. ಬೆಂಗಳೂರಿನ ಸುಧಾರಣೆಯು ಶ್ಲಾಘನೀಯವಾಗಿದ್ದರೂ, ಪೀಕ್​​ ಅವರ್​ಗಳಲ್ಲಿ ಉಂಟಾಗುವ ಸಂಚಾರ ದಟ್ಟಣೆ ಜನರನ್ನು ಹೈರಾಣು ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:42 am, Mon, 5 February 24

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!