AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಆರ್ ಪುರಂನಲ್ಲಿ ನಡೆದಿದ್ದ ಮಗನಿಂದ ತಾಯಿ ಕೊಲೆಗೆ ಟ್ವಿಸ್ಟ್; ಕೊಲೆ ಮಾಡಿ ಅಪ್ಪನನ್ನು ಎಸ್ಕೇಪ್ ಮಾಡಿಸಿ ಸರೆಂಡರ್ ಆಗಿದ್ದ ಅಪ್ರಾಪ್ತ ಮಗ

ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತಾಯಿಯನ್ನು ತಾನೇ ಕೊಂದಿದ್ದಾಗಿ ಅಪ್ರಾಪ್ತ ಮಗ ಪೊಲೀಸ್ ಠಾಣೆಗೆ ಸರೆಂಡರ್ ಆಗಿದ್ದ. ಆದರೆ 2 ರೀತಿಯ ಫಿಂಗರ್ ಪ್ರಿಂಟ್ ಪತ್ತೆಯಾದ ಹಿನ್ನೆಲೆ ತನಿಖೆ ನಡೆಸಿದ್ದ ಪೊಲೀಸರು ಕೊಲೆಯಲ್ಲಿ ತಂದೆ ಕೂಡ ಶಾಮೀಲಾಗಿರೋದು ಪತ್ತೆಯಾಗಿದೆ. ತಂದೆ-ಮಗ ಸೇರಿಕೊಂಡು ಕೊಲೆ ಮಾಡಿದ್ದು ಅಪ್ಪನನ್ನು ಉಳಿಸಲು ಮಗ ಸರೆಂಡರ್ ಆದ ಬಗ್ಗೆ ತನಿಖೆ ವೇಳೆ ಸತ್ಯಾಂಶ ಬಯಲಾಗಿದೆ.

ಕೆಆರ್ ಪುರಂನಲ್ಲಿ ನಡೆದಿದ್ದ ಮಗನಿಂದ ತಾಯಿ ಕೊಲೆಗೆ ಟ್ವಿಸ್ಟ್; ಕೊಲೆ ಮಾಡಿ ಅಪ್ಪನನ್ನು ಎಸ್ಕೇಪ್ ಮಾಡಿಸಿ ಸರೆಂಡರ್ ಆಗಿದ್ದ ಅಪ್ರಾಪ್ತ ಮಗ
ಹೆಂಡತಿ ಕೊಲೆ ಮಾಡಿದ ಆರೋಪಿ ಚಂದ್ರಪ್ಪ
ಜಗದೀಶ ಬಿ.
| Edited By: ಆಯೇಷಾ ಬಾನು|

Updated on: Feb 06, 2024 | 9:26 AM

Share

ಬೆಂಗಳೂರು, ಫೆ.06: ಕ್ಷುಲ್ಲಕ ವಿಚಾರಕ್ಕೆ ತಾಯಿಯೊಂದಿಗೆ (Mother) ಜಗಳವಾಡಿದ ಮಗ ರಾಡಿನಿಂದ ಹೊಡೆದು ಕೊಲೆ (Murder) ಮಾಡಿದ್ದ ಘಟನೆ 3-4 ದಿನಗಳ ಹಿಂದೆ ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಈ ಕೊಲೆಗೆ ಈಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ಈ ಕೊಲೆಯಲ್ಲಿ ತಂದೆಯೂ ಶಾಮೀಲಾಗಿದ್ದ ಅಂಶ ಬಯಲಾಗಿದೆ. ಕೊಲೆಗೆ ಬಳಸಲಾಗಿದ್ದ ರಾಡ್​ನಲ್ಲಿ 2 ರೀತಿಯ ಫಿಂಗರ್ ಪ್ರಿಂಟ್ ಪತ್ತೆಯಾಗಿದ್ದು ತಂದೆ-ಮಗ ಸೇರಿಕೊಂಡು ಮಹಿಳೆಯನ್ನು ಕೊಲೆ ಮಾಡಿರುವುದು ಬಯಲಾಗಿದೆ.

ಫೆಬ್ರವರಿ 2ರಂದು ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ನಡೆದಿತ್ತು. ಕ್ಷುಲ್ಲಕ ವಿಚಾರಕ್ಕೆ ತಾಯಿಯೊಂದಿಗೆ ಜಗಳವಾಡಿದ ಮಗ ರಾಡಿನಿಂದ ಹೊಡೆದು ಕೊಲೆ ಮಾಡಿದ್ದ. ಕೊಲೆಯ ತನಿಖೆ ನಡೆಸಿದ ಪೊಲೀಸರಿಗೆ ಮತ್ತೋರ್ವ ಕೊಲೆ ಆರೋಪಿ ಇರುವುದು ಬಯಲಾಗಿದೆ. ಕೊಲೆಗೆ ಬಳಸಲಾಗಿದ್ದ ರಾಡ್ ಮೇಲೆ 2 ರೀತಿಯ ಫಿಂಗರ್ ಪ್ರಿಂಟ್​ಗಳು ಪತ್ತೆಯಾಗಿದ್ದವು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು. ಆಗ ರಾಡ್ ನ ಎಫ್​ಎಸ್​ಎಲ್​ಗೆ ಕಳುಹಿಸಿದಾಗ ರಾಡ್​ ಮೇಲೆ ಇರುವುದು ಮಗ ಹಾಗೂ ತಂದೆಯ ಫಿಂಗರ್ ಪ್ರಿಂಟ್ ಎಂಬುವುದು ಬಯಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಕೊಲೆಯಾದ ನೇತ್ರಾಳ ಗಂಡ ಚಂದ್ರಪ್ಪನನ್ನು ಕೆ.ಆರ್. ಪುರಂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಕೊಲೆಯ ಸತ್ಯ ಬಯಲಾಗಿದೆ.

ಹೆಂಡತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಕೊಲೆ

ವಿಚಾರಣೆ ಮಾಡಿದಾಗ ಆರೋಪಿ ಕೊಲೆಗೆ ನಿಖರ ಕಾರಣ ಬಾಯಿಬಿಟ್ಟಿದ್ದಾರೆ. ಕೊಲೆಯಾದ ನೇತ್ರಾಳಿಗೆ ಅಕ್ರಮ ಸಂಬಂಧದ ಜೊತೆಗೆ ಕುಡಿತದ ಚಟ ಇತ್ತು. ಕೆಲವೊಮ್ಮೆ ಎರಡು ಮೂರು ದಿನಗಳ ಕಾಲ ಮನೆಗೆ ಬರ್ತಾ ಇರಲಿಲ್ಲ. ನಾವು ಊಟ ಇಲ್ಲದೆ ಉಪವಾಸ ಇರ್ತಾ ಇದ್ವಿ, ಕೇಳಿದ್ರೆ ನಮ್ಮ ಮೇಲೆಯೇ ಬಾಯಿ ಮಾಡ್ತಾ ಇದ್ದಳು. ಹೀಗಾಗಿ ಮಗನ ಜೊತೆ ಸೇರಿ ಕೊಲೆ ಮಾಡಲು ನಿರ್ಧಾರ ಮಾಡಿದೆ ಎಂದು ಚಂದ್ರಪ್ಪ ಬಾಯ್ಬಿಟ್ಟಿದ್ದಾರೆ.

ಇದನ್ನೂ ಓದಿ: Crime News: ಕುಡಿದ ನಶೆಯಲ್ಲಿ ತಾಯಿಯನ್ನೇ ಕೊಂದ ಮಗ

ಅಪ್ಪ ಜೈಲಿಗೆ ಹೋಗೋದು ಬೇಡ ಎಂದು ತಾನು ಜೈಲು ಸೇರಿದ ಮಗ

ಇನ್ನು ಅಪ್ಪ-ಮಗ ಸೇರಿಕೊಂಡು ತಾಯಿಯ ಕೊಲೆ ಮಾಡಿದ್ದಾರೆ. ಕೊಲೆ ಆದ ಬಳಿಕ ತಂದೆಯ ಬಗ್ಗೆ ಯೋಚನೆ ಮಾಡಿದ್ದ ಅಪ್ರಾಪ್ತ ಮಗ, ತಂದೆ ಜೈಲಿಗೆ ಹೋಗೋದು ಬೇಡ ಎಂದು ಕೊಲೆಯನ್ನ ತನ್ನ ಮೇಲೆಯೇ ಹಾಕಿಕೊಂಡಿದ್ದಾನೆ. ತಂದೆ ರಾಡ್ ನಿಂದ ಹೊಡೆದ ಬಳಿಕ ಮಗನೂ ಒಂದೆರಡು ಏಟು ಹೊಡೆದಿದ್ದಾನೆ. ಸತ್ತಿರೋದು ಕನ್ಫರ್ಮ್ ಆದ ಬಳಿಕ ಚಂದ್ರಪ್ಪ ಅಲ್ಲಿಂದ ಎಸ್ಕೇಪ್ ಆಗಿದ್ದ. ಫ್ಲಾನ್ ನಂತೆ ಮಗ ಕೆ.ಆರ್. ಪುರಂ ಠಾಣೆಗೆ ಹೋಗಿ ಸರೆಂಡರ್ ಆಗಿದ್ದಾನೆ.

ಜೈಲಿಗೆ ಹೋದ್ರೂ ಒಳ್ಳೆಯ ಎಜುಕೇಷನ್ ಸಿಗುತ್ತೆ ಅಂದಿದ್ದ ಮಗ

ಕೊಲೆ ಮಾಡಿದ ಬಳಿಕ ಅಪ್ಪ-ಮಗ ಇಬ್ಬರೂ ಕುಂತು ಪ್ಲಾನ್ ಮಾಡಿದ್ದಾರೆ. ಅಪ್ರಾಪ್ತರು ಜೈಲಿಗೆ ಹೋದರೆ ಶಿಕ್ಷೆ ಕಡಿಮೆ ಇರುತ್ತೆ, ಜೊತೆಗೆ ಅವರೇ ವಿದ್ಯಾಭ್ಯಾಸ ಕೊಡಿಸ್ತಾರೆ ಎಂದು ಅಪ್ಪನನ್ನು ಮಗ ಓಲೈಸಿದ್ದ. ನಾನು ಹೊರಗಡೆ ಬರೋ ಅಷ್ಟರಲ್ಲಿ ನೀನು ಚೆನ್ನಾಗಿ ಹಣ ಮಾಡಿಕೊಂಡಿರು ಎಂದು ಹೇಳಿ ತಂದೆಗೆ ಕೊಲೆಯಾದ ಸ್ಥಳದಿಂದ ಹೋಗಲು ಹೇಳಿ ಅಪ್ರಾಪ್ತ ಬಾಲಕನೇ ಠಾಣೆಗೆ ಬಂದು ಸರೆಂಡರ್ ಆಗಿದ್ದ. ಆದರೆ ಈಗ ಅಪ್ಪ ಕೂಡ ಜೈಲು ಸೇರಿದ್ದಾನೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ