ಓಲಾ, ಊಬರ್, ರ್‍ಯಾಪಿಡೊ ಕಂಪನಿಗಳಿಗೆ ಕಡಿವಾಣ ಹಾಕಿ: ಕಾನೂನು ಪ್ರಾಧಿಕಾರಕ್ಕೆ ಆಟೊ ಚಾಲಕರ ಮನವಿ

ಕಾನೂನುಬಾಹಿರವಾಗಿ ಓಡಿಸುತ್ತಿರುವ ಇಂಥ ವಾಹನಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಆಟೊ ಯೂನಿಯನ್ ಕೋರಿದೆ.

ಓಲಾ, ಊಬರ್, ರ್‍ಯಾಪಿಡೊ ಕಂಪನಿಗಳಿಗೆ ಕಡಿವಾಣ ಹಾಕಿ: ಕಾನೂನು ಪ್ರಾಧಿಕಾರಕ್ಕೆ ಆಟೊ ಚಾಲಕರ ಮನವಿ
ಆಟೊ ಚಾಲಕರು (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 02, 2022 | 10:20 AM

ಬೆಂಗಳೂರು: ನಗರದಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಓಲಾ (Ola), ಊಬರ್ (Uber), ರ್‍ಯಾಪಿಡೊದಂಥ (Rapido) ಅಗ್ರಿಗೇಟರ್​ಗಳಿಗೆ ಕಡಿವಾಣ ಹಾಕಬೇಕು ಎಂದು ಆಟೊ ಚಾಲಕರ ಸಂಘಟನೆಯು ಕರ್ನಾಟಕ ರಾಜ್ಯ ಕಾನೂನು ಪ್ರಾಧಿಕಾರಕ್ಕೆ ಮನವಿ ಮಾಡಿದೆ. ಈ ಕುರಿತು ಲಿಖಿತ ದೂರು ನೀಡಿರುವ ಆದರ್ಶ ಆಟೋ ಯೂನಿಯನ್, ಓಲಾ, ಊಬರ್ ಹಾಗೂ ರ್‍ಯಾಪಿಡೊ ಕಂಪನಿಗಳು ವೈಟ್ ಬೋರ್ಡ್ ಇರುವ ಆಟೊ, ಬೈಕ್ ಹಾಗೂ ಕ್ಯಾಬ್ ಓಡಿಸಲು ಅವಕಾಶ ನೀಡುತ್ತಿವೆ. ಇದರಿಂದ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಿ ಚಾಲನೆ ಮಾಡುತ್ತಿರುವ ಯೆಲ್ಲೋ ಬೋರ್ಡ್ ಆಟೊ ಚಾಲಕರಿಗೆ ನಷ್ಟವಾಗುತ್ತಿದೆ ಎಂದು ವಿನಂತಿಸಿದೆ.

ಕಾನೂನುಬಾಹಿರವಾಗಿ ಓಡಿಸುತ್ತಿರುವ ಇಂಥ ವಾಹನಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಆಟೊ ಯೂನಿಯನ್ ಕೋರಿದೆ. ಈ ದೂರು ಆಧರಿಸಿ, ಕ್ರಮ ಜರುಗಿಸುವಂತೆ ಸಾರಿಗೆ ಇಲಾಖೆಯ ಕಾರ್ಯದರ್ಶಿಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಸೂಚನೆ ನೀಡಿದೆ.

ಇದನ್ನೂ ಓದಿ: ಓಲಾ, ಓಬರ್ ಆಟೊ ರೈಡ್​ಗೆ ಶೇ 5 ತೆರಿಗೆ: ಸಾರಿಗೆ ಇಲಾಖೆ ನಿರ್ಧಾರದ ಬಗ್ಗೆ ಆಟೊ ಚಾಲಕರ ಅಸಮಾಧಾನ

ಓಲಾ, ಊಬರ್​ ಆಟೋಗಳಿಗೆ ದರ ನಿಗದಿ

ಓಲಾ, ಊಬರ್ ಆಟೊಗಳಿಗೆ ಸಾರಿಗೆ ಇಲಾಖೆಯು ಕನಿಷ್ಠ ದರ ನಿಗದಿಪಡಿಸಿದೆ. ಅಸ್ತಿತ್ವದಲ್ಲಿರುವ ಕನಿಷ್ಠ ದರಕ್ಕೆ ಶೇ 5ರಷ್ಟು ದರ ಹೆಚ್ಚಿಸಲು ಹಾಗೂ ಹೆಚ್ಚುವರಿಯಾಗಿ ಶೇ 5ರಷ್ಟು ಜಿಎಸ್​ಟಿ ವಸೂಲು ಮಾಡಲು ಸಾರಿಗೆ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಈ ಮೊದಲು ಅಸ್ತಿತ್ವದಲ್ಲಿರುವ ದರಗಳ ಮೇಲೆ ಈ ಹೆಚ್ಚಳವು ಚಾಲ್ತಿಗೆ ಬರಲಿದೆ ಎಂದು ಸಾರಿಗೆ ಇಲಾಖೆ ಹೇಳಿದೆ. ಹೈಕೋರ್ಟ್​ಗೆ ಸಾರಿಗೆ ಇಲಾಖೆಯು ಈ ಕುರಿತು ಮಾಹಿತಿ ನೀಡಿದ್ದು, ಅಂತಿಮ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಮೂರೂ ಕಂಪನಿಗಳು, ಆಟೋ ಸಂಘಟನೆಗಳು ‌ಹಾಗೂ ಪ್ರಯಾಣಿಕರ ಜೊತೆ ಸಭೆ ನಡೆಸಿ ನ್ಯಾಯಯುತ ದರ ನಿಗದಿ ಪಡಿಸಬೇಕು. ನಂತರ ಈ ಕುರಿತ ವರದಿಯನ್ನು ಹೈಕೋರ್ಟ್​ಗೆ ಸಲ್ಲಿಸಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದರು. ಆದರೆ ಸಾರಿಗೆ ಇಲಾಖೆಯು ಸಮರ್ಪಕವಾಗಿ ಸಭೆ ನಡೆಸಿರಲಿಲ್ಲ ಎಂದು ಆಟೊ ಚಾಲಕರು ಮತ್ತು ಮಾಲೀಕರ ಸಂಘಟನೆಗಳು, ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಸಾರಿಗೆ ಇಲಾಖೆಯು ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದೂ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಸದ್ಯ ಹೈಕೋರ್ಟ್ ಸೂಚನೆಯಂತೆ ಈ ಕಂಪನಿಗಳು ಕನಿಷ್ಠ ಪ್ರಯಾಣ ದರ ಪಡೆಯುತ್ತಿವೆ. ಹೈಕೋರ್ಟ್ ಆಂತಿಮ ಆದೇಶವನ್ನು ಎಲ್ಲರೂ ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.

ಬೆಂಗಳೂರಿನ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:20 am, Fri, 2 December 22

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ