AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಷೇಧಿತ ನೋಟುಗಳ ನಗದೀಕರಣ ಪ್ರಕರಣ; ಇಬ್ಬರು ಆರೋಪಿಗಳಿಗೆ ದಂಡ ವಿಧಿಸಿ 4 ವರ್ಷ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

ನೋಟುಗಳ ನಗದೀಕರಣ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ (Hosapete) ಡ್ಯಾಮ್ ರಸ್ತೆಯ ಎಸ್‌ಬಿಎಂ ಶಾಖೆಯ ಮಾಜಿ ಹೆಡ್ ಕ್ಯಾಶಿಯರ್ ಎಸ್. ಗೋಪಾಲಕೃಷ್ಣ ಹಾಗೂ ಎಲ್ಐಸಿ ಏಜೆಂಟ್ ಕೆ. ರಾಘವೇಂದ್ರ ಅವರಿಗೆ  ಸಿಬಿಐ ವಿಶೇಷ ನ್ಯಾಯಾಲಯ ದಂಡ ವಿಧಿಸಿ, ನಾಲ್ಕು ವರ್ಷ ಶಿಕ್ಷೆ ಪ್ರಕಟ ಮಾಡಿದೆ.

ನಿಷೇಧಿತ ನೋಟುಗಳ ನಗದೀಕರಣ ಪ್ರಕರಣ; ಇಬ್ಬರು ಆರೋಪಿಗಳಿಗೆ ದಂಡ ವಿಧಿಸಿ 4 ವರ್ಷ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ
ಪ್ರಾತಿನಿಧಿಕ ಚಿತ್ರ
Shivaprasad B
| Edited By: |

Updated on:Apr 28, 2024 | 5:54 PM

Share

ಬೆಂಗಳೂರು, ಏ.28: ಆರ್​ಬಿಐ (RBI) ನಿಯಮ ಉಲ್ಲಂಘಿಸಿ ನೋಟುಗಳ ನಗದೀಕರಣ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ (Hosapete) ಡ್ಯಾಮ್ ರಸ್ತೆಯ ಎಸ್‌ಬಿಎಂ ಶಾಖೆಯ ಮಾಜಿ ಹೆಡ್ ಕ್ಯಾಶಿಯರ್ ಎಸ್. ಗೋಪಾಲಕೃಷ್ಣ ಹಾಗೂ ಎಲ್ಐಸಿ ಏಜೆಂಟ್ ಕೆ. ರಾಘವೇಂದ್ರ ಅವರಿಗೆ  ಸಿಬಿಐ ವಿಶೇಷ ನ್ಯಾಯಾಲಯ ದಂಡ ವಿಧಿಸಿ, ನಾಲ್ಕು ವರ್ಷ ಶಿಕ್ಷೆ ಪ್ರಕಟ ಮಾಡಿದೆ.

ಘಟನೆ ವಿವರ

ಹೌದು, A1ಆರೋಪಿ ಎಸ್ ಗೋಪಾಲಯ್ಯಗೆ 2ಲಕ್ಷ 10ಸಾವಿರ ಹಾಗೂ A2ಆರೋಪಿ ಎಲ್ಐಸಿ ಏಜೆಂಟ್ ಕೆ ರಾಘವೇಂದ್ರಗೆ 1ಲಕ್ಷ 60 ಸಾವಿರ ಸೇರಿ 3.70ಲಕ್ಷ ದಂಡ 4ವರ್ಷ ಶಿಕ್ಷೆ ಪ್ರಕಟಿಸಿದೆ. ನೋಟ್ ಬ್ಯಾನ್ ಸಂದರ್ಭದಲ್ಲಿ ನಿಷೇಧಿತ ಕರೆನ್ಸಿಗಳನ್ನ ನಗದೀಕರಣಕ್ಕೆ RBI ಮಾರ್ಗಸೂಚಿ ಹೊರಡಿಸಿತ್ತು. ಈ ವೇಳೆ ಆರೋಪಿಗಳು ಮಾರ್ಗಸೂಚಿ ಅನುಸರಿಸದೆ ನೋಟ್ ನಗದೀಕರಣ ಮಾಡಿದ್ದರು. ಬಳಿಕ 2017ರ ಮಾರ್ಚ್​ನಲ್ಲಿ ಈ ಇಬ್ಬರು ಆರೋಪಿಗಳು ಸೇರಿ ಮೂವರ ವಿರುದ್ಧ ಸಿಬಿಐ ಕೇಸ್ ದಾಖಲಿಸಿತ್ತು. ತನಿಖೆ ವೇಳೆ ಆರೋಪಿಗಳ ದುರುದ್ದೇಶ ಬಯಲಾಗಿದ್ದು, ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಸದ್ಯ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿ ನ್ಯಾಯಲಯ ಆದೇಶಿಸಿದೆ.

ಇದನ್ನೂ ಓದಿ:ಸಿದ್ದರಾಮಯ್ಯ ಸರ್ಕಾರ ನೇಹಾ ಹಂತಕನಿಗೆ ಗಲ್ಲುಶಿಕ್ಷೆ ಶಿಫಾರಸ್ಸು ಮಾಡಲು ನಿರ್ಧರಿಸಿದೆ: ರಂದೀಪ್ ಸುರ್ಜೆ ವಾಲಾ, ಎಐಸಿಸಿ ಉಸ್ತುವಾರಿ

ಗಾಂಜಾ ಮಾರಾಟ ಮಾಡುತ್ತಿದ್ದ ಮನೆ ಮೇಲೆ ದಾಳಿ

ಬೀದರ್: ನಗರದ ಇರಾನಿ ಕಾಲೋನಿಯ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮನೆ ಮೇಲೆ ದಾಳಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 5 ಕೆ.ಜಿ 19 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆಯಲ್ಲಿ ಪೊಲೀಸರು ಪೊಲೀಸ್ ಇಬ್ಬರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಘಟನೆ ಬೀದರ್ ನಗರದ ಗಾಂಧಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ‌ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:40 pm, Sun, 28 April 24