ಕಾಂಗ್ರೆಸ್ ಸರ್ಕಾರದಲ್ಲೂ ಪಠ್ಯ ಪರಿಷ್ಕರಣೆಯಲ್ಲಿ ಎಡವಟ್ಟು; ರಾಷ್ಟ್ರ ಮಟ್ಟಕ್ಕೆ ಹಬ್ಬಿದ ವಿವಾದ!

| Updated By: sandhya thejappa

Updated on: Jun 14, 2022 | 11:11 AM

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಬಳಿಕ ಕನ್ನಡಿಗ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಪಠ್ಯಕ್ಕೆ ಬರಗೂರು ಸಮಿತಿ ಕೊಕ್ ಕೊಟ್ಟಿತ್ತು. ಸದ್ಯ ಟೀಂ ಇಂಡಿಯಾ ಕೋಚ್ ಆಗಿರುವ ಕನ್ನಡಿಗ ರಾಹುಲ್ ದ್ರಾವಿಡ್ ಪಠ್ಯವನ್ನೇ ಬರಗೂರು ಸಮಿತಿ ಕೈಬಿಟ್ಟಿತ್ತು.

ಕಾಂಗ್ರೆಸ್ ಸರ್ಕಾರದಲ್ಲೂ ಪಠ್ಯ ಪರಿಷ್ಕರಣೆಯಲ್ಲಿ ಎಡವಟ್ಟು; ರಾಷ್ಟ್ರ ಮಟ್ಟಕ್ಕೆ ಹಬ್ಬಿದ ವಿವಾದ!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರೋಹಿತ್ ಚಕ್ರತೀರ್ಥ (Rohith Chakrathirtha) ಸಮಿತಿಯ ಪಠ್ಯಪರಿಷ್ಕರಣೆ ವಿರುದ್ಧ ಕಾಂಗ್ರೆಸ್ (Congress) ನಾಯಕರು ಧ್ವನಿ ಎತ್ತಿದ್ದರು. ಕೂಡಲೆ ರೋಹಿತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಿದ್ದರು. ಆದರೆ ಇದೀಗ ಕಾಂಗ್ರೆಸ್ ಕಾಲದಲ್ಲೂ ಅಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯಪರಿಷ್ಕರಣೆಯಲ್ಲಿ ಎಡವಟ್ಟಾಗಿವೆ ಎಂದು ಶಿಕ್ಷಣ ಇಲಾಖೆ ಒಂದೊಂದೆ ತಪ್ಪುಗಳನ್ನ ಬಿಚ್ಚಿಡುತ್ತಿದೆ. ಬರಗೂರು ರಾಮಚಂದ್ರಪ್ಪ ಸಮಿತಿಯಲ್ಲಿ ರಾಹುಲ್ ದ್ರಾವಿಡ್​ಗೆ ಅಗೌರವ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳುತ್ತಿದೆ.

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಬಳಿಕ ಕನ್ನಡಿಗ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಪಠ್ಯಕ್ಕೆ ಬರಗೂರು ಸಮಿತಿ ಕೊಕ್ ಕೊಟ್ಟಿತ್ತು. ಸದ್ಯ ಟೀಂ ಇಂಡಿಯಾ ಕೋಚ್ ಆಗಿರುವ ಕನ್ನಡಿಗ ರಾಹುಲ್ ದ್ರಾವಿಡ್ ಪಠ್ಯವನ್ನೇ ಬರಗೂರು ಸಮಿತಿ ಕೈಬಿಟ್ಟಿತ್ತು. ರಾಹುಲ್ ದ್ರಾವಿಡ್ ಸಾಧನೆ ಬಗ್ಗೆ 10ನೇ ತರಗತಿಯ ಕನ್ನಡ 2ನೇ ಭಾಷೆ ಪಠ್ಯದಲ್ಲಿ ಸೇರಿಸಲಾಗಿತ್ತು. ಆದರೆ ಈ ಪಠ್ಯವನ್ನು ತೆಗೆಯುವ ಮೂಲಕ ಅಗೌರವ ಸಲ್ಲಿಸಿದೆ ಎಂದು ಶಿಕ್ಷಣ ಇಲಾಖೆ ತಪ್ಪು ಬಿಚ್ಚಿಟ್ಟಿದೆ.

ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಸಹೋದರನ ಕೊಲೆಗೆ ಸಂಚು ಹೂಡಿದ ಆರೋಪಿ ಮನ್ಮಿತ್ ರೈಗೆ ತನ್ನ ಮಾಮ ಮುತ್ತಪ್ಪ ರೈಯಂತೆ ಖ್ಯಾತನಾಗುವಾಸೆ!

ಇದನ್ನೂ ಓದಿ
IDBI Recruitment 2022: ಐಡಿಬಿಐ ಬ್ಯಾಂಕ್​ನಲ್ಲಿದೆ ಉದ್ಯೋಗಾವಕಾಶ: ಡಿಗ್ರಿ ಮಾಡಿದವರು ಅರ್ಜಿ ಸಲ್ಲಿಸಿ
ಪಿಎಸ್​​ಐ ನೇಮಕಾತಿ ಅಕ್ರಮ: ಕಿಂಗ್​​​ಪಿನ್ ರುದ್ರಗೌಡ ಪಾಟೀಲ್​ನ ಅಳಿಮಯ್ಯ ಅರೆಸ್ಟ್, ಇವ ಅಭ್ಯರ್ಥಿಗಳಿಗೆ ಬ್ಲೂಟೂತ್ ಸರಬರಾಜು ಮಾಡುತ್ತಿದ್ದ!
ರಾಜ್ಯ ಬಿಜೆಪಿ ಘಟಕದಲ್ಲಿ ನಾಚಿಕೆ, ಮಾನ-ಮರ್ಯಾದೆ ಇಲ್ಲದ ಒಕ್ಕಲಿಗ ನಾಯಕರಿದ್ದಾರೆ: ಲಕ್ಷ್ಮಣ್, ಕೆಪಿಸಿಸಿ ವಕ್ತಾರ
Monthly Horoscope- ಮಾಸ ಭವಿಷ್ಯ: ಇಲ್ಲಿದೆ ಜೂನ್ ತಿಂಗಳ ಭವಿಷ್ಯ, ಯಾವ ರಾಶಿಯವರಿಗೆ ಯಾವ ಫಲ?

2014-15ರಲ್ಲಿ ಡಾ.ಮುಡಂಬಡಿತ್ತಾಯ ಸಮಿತಿ ರಚನೆಯಾಗಿತ್ತು. ಅಂದು ರಾಹುಲ್ ದ್ರಾವಿಡ್ ಸಾಧನೆ ಕುರಿತ ಪಠ್ಯವನ್ನ ಸೇರ್ಪಡೆ ಮಾಡಿತ್ತು. ಆದರೆ ಬರಗೂರು ಸಮಿತಿ ರಾಹುಲ್ ದ್ರಾವಿಡ್ ಪಠ್ಯವನ್ನೇ ಕೈಬಿಟ್ಟಿತ್ತು. ಡಾ.ಮುಡಂಬಡಿತ್ತಾಯ ಸಮಿತಿ ಪಠ್ಯ ಪುಸ್ತಕದಲ್ಲಿ ದ್ರಾವಿಡ್ ಸಾಧನೆ, ಪಂದ್ಯಗಳ ವಿವರ, ವಿಸ್ಡನ್ ಪ್ರಶಸ್ತಿ ಪಡೆದಿದ್ದ ಮಾಹಿತಿ ನೀಡಿತ್ತು.

ರಾಜ್ಯದ ವಿದ್ಯಾರ್ಥಿ ಸಂಘಟನೆಗಳಿಗೆ ಪತ್ರ ಬರೆದ ಇತಿಹಾಸ ತಜ್ಞರು:
ಇನ್ನು ಪಠ್ಯಪುಸ್ತಕ ಪರಿಷ್ಕರಣೆ ವಿವಾದ ರಾಷ್ಟ್ರಮಟ್ಟಕ್ಕೂ ಹಬ್ಬಿದೆ. ಈ ವಿವಾದಕ್ಕೆ ಜೆಎನ್​ಯು ಪ್ರೊಫೆಸರ್ಸ್​​​ ತಲೆ  ಹಾಕಿದ್ದಾರೆ. ದೆಹಲಿಯ ಜೆಎನ್​ಯುನ ಇತಿಹಾಸ ತಜ್ಞರಾದ ಪ್ರೊ.ರೋಮಿಳಾ ಥಾಪರ್, ಪ್ರೊ.ಆದಿತ್ಯ ಮುಖರ್ಜಿ ರಾಜ್ಯದ ವಿದ್ಯಾರ್ಥಿ ಸಂಘಟನೆಗಳಿಗೆ ಪತ್ರ ಬರೆದು, ಮಕ್ಕಳಿಗೆ ತಿರುಚಿದ ಇತಿಹಾಸವನ್ನ ಕಲಿಸಿಕೊಡಬೇಡಿ ಎಂದು ಉಲ್ಲೇಖ ಮಾಡಿದ್ದಾರೆ. ಉತ್ತಮ ಪಠ್ಯ ಪುಸ್ತಕವೇ ಒಳ್ಳೆಯ ಶಿಕ್ಷಣಕ್ಕೆ ಅಡಿಪಾಯ. ಇತಿಹಾಸ ಪಠ್ಯದಲ್ಲಿ ಏನೆಲ್ಲಾ ಮಾಹಿತಿ ಇರಬೇಕು ಎಂಬುದನ್ನು ರಾಜಕಾರಣಿಗಳು, ಅಧಿಕಾರಿಗಳು ನಿರ್ಧರಿಸಬಾರದು. ಖ್ಯಾತ ಇತಿಹಾಸಕಾರರು ತೀರ್ಮಾನ ಕೈಗೊಳ್ಳಬೇಕು. ಪಠ್ಯ ಪುಸ್ತಕದ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಅಥವಾ ರಾಜಕಾರಣಿಗಳ ಪ್ರೊಪಗಂಡಾ ಮೇಲೆ ಪಠ್ಯ ರಚಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:51 am, Tue, 14 June 22