ದೆಹಲಿಯಲ್ಲಿ ಕಾಂಗ್ರೆಸ್​ ನಾಯಕರ ಪ್ರತಿಭಟನೆ: ಪೊಲೀಸರು ತಳ್ಳಿದ ಕಾರಣ ಪಿ ಚಿದಂಬರಂ ಎಡ ಪಕ್ಕೆಲುಬು ಮುರಿದಿದೆ: ರಣದೀಪ್ ಸುರ್ಜೇವಾಲ ಟ್ವೀಟ್​

ಇಂದು (ಜೂನ್​ 13) ದೆಹಲಿಯಲ್ಲಿ  ನಡೆದ ಕಾಂಗ್ರೆಸ್​ ಪಕ್ಷದ ಪ್ರತಿಭಟನೆಯ ವೇಳೆ ದೆಹಲಿ ಪೊಲೀಸರು ತಳ್ಳಿದ ಕಾರಣ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ಎಡ ಪಕ್ಕೆಲುಬು ಮುರಿದಿದೆ ಎಂದು ಕಾಂಗ್ರೆಸ್​ ನಾಯಕ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ದೆಹಲಿಯಲ್ಲಿ ಕಾಂಗ್ರೆಸ್​ ನಾಯಕರ ಪ್ರತಿಭಟನೆ: ಪೊಲೀಸರು ತಳ್ಳಿದ ಕಾರಣ ಪಿ ಚಿದಂಬರಂ ಎಡ ಪಕ್ಕೆಲುಬು ಮುರಿದಿದೆ: ರಣದೀಪ್ ಸುರ್ಜೇವಾಲ ಟ್ವೀಟ್​
ಪಿ ಚಿದಂಬರಂ
Follow us
TV9 Web
| Updated By: ವಿವೇಕ ಬಿರಾದಾರ

Updated on:Jun 13, 2022 | 9:19 PM

ನವದೆಹಲಿ: ಇಂದು (ಜೂನ್​ 13) ದೆಹಲಿಯಲ್ಲಿ (Delhi)  ನಡೆದ ಕಾಂಗ್ರೆಸ್​ (Congress)  ನಾಯಕರ ಪ್ರತಿಭಟನೆಯ ವೇಳೆ ದೆಹಲಿ ಪೊಲೀಸರು ತಳ್ಳಿದ ಕಾರಣ ಕಾಂಗ್ರೆಸ್ ನಾಯಕ ಪಿ ಚಿದಂಬರಂ (P Chidambarm) ಅವರ ಎಡ ಪಕ್ಕೆಲುಬು ಮುರಿದಿದೆ ಎಂದು ಕಾಂಗ್ರೆಸ್​ ನಾಯಕ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ರಾಹುಲ್‌ ಗಾಂಧಿ ಅವರಿಗೆ ಇಡಿ ನೀಡಿದ್ದ ಸಮನ್ಸ್​ನ್ನು ಖಂಡಿಸಿ ಕಾಂಗ್ರೆಸ್ ದೆಹಲಿ ಜಾರಿ ನಿರ್ದೇಶನಾಲಯದ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಮತ್ತು ಪಿ.  ಚಿದಂಬರಂ ಕೂಡ ಭಾಗಿಯಾಗಿದ್ದರು.

ಈ ಬಗ್ಗೆ ಟ್ವೀಟ್​​ ಮಾಡಿದ ರಣದೀಪ್ ಸುರ್ಜೇವಾಲಾ  “ಮೋದಿ ಸರ್ಕಾರವು ಅನಾಗರಿಕತೆಯ ಎಲ್ಲ ಮಿತಿಗಳನ್ನು ದಾಟಿದೆ. ಮಾಜಿ ಗೃಹ ಸಚಿವ ಪಿ ಚಿದಂಬರಂ ಅವರನ್ನು ಪೊಲೀಸರು ಹೊಡೆದರು. ಇದರಿಂದ ಅವರ ತೆಲೆಗೆ ಗಾಯವಾಗಿದೆ  ಮತ್ತು ಪಕ್ಕೆಲುಬು ಮುರಿದೆ. ಹಾಗೇ ಸಂಸದ ಪ್ರಮೋದ್ ತಿವಾರಿ ಅವರನ್ನು ರಸ್ತೆಯಲ್ಲಿ ಎಳದಾಡಿದ್ದಾರೆ. ಇದು ಪ್ರಜಾಪ್ರಭುತ್ವವೇ?” ಎಂದು ವಿಡಿಯೋ ಹೇಳಿಕೆ ಮುಖಾಂತ ಟ್ವೀಟ್​ ಮಾಡಿದ್ದಾರೆ.

ಇದನ್ನು ಓದಿ: ರಾಹುಲ್ ಗಾಂಧಿಗೆ ಇಡಿ ಸಮನ್ಸ್​ ವಿರೋಧಿಸಿ ಪ್ರತಿಭಟನೆ; ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಮೇಲೆ ಪೊಲೀಸರಿಂದ ಹಲ್ಲೆ

ರಾಹುಲ್ ಗಾಂಧಿ ಅವರೊಂದಿಗೆ ಪಕ್ಷದ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಇತರರು ಇದ್ದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ತುಳಿದಿದೆ ಎಂದು ಆರೋಪಿಸಿ ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬೀದಿಗಿಳಿದಿದ್ದರು. ರಾಷ್ಟ್ರ ರಾಜಧಾನಿಯಲ್ಲಿ ನೂರಾರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:16 pm, Mon, 13 June 22