ಸಾರ್ವಜನಿಕ ಸ್ಥಳಗಳಲ್ಲಿ ಬರಲಿದೆ ನೂತನ ‘ನಮ್ಮ ಕ್ಲಿನಿಕ್’; ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ದಿನೇಶ್ ಗುಂಡೂರಾವ್ ಸೂಚನೆ

ನಮ್ಮ ಕ್ಲಿನಿಕ್​ಗಳಿಗೆ ಮೈಸೂರಿನಲ್ಲಿ ಭರ್ಜರಿ ಯಶಸ್ಸು ಸಿಕ್ಕಿದ್ದು, ಎರಡೇ ತಿಂಗಳಲ್ಲಿ 46,000 ಜನರಿಗೆ ಚಿಕಿತ್ಸೆ ನೀಡಲಾಗಿತ್ತು. ಇದೀಗ ಹೊಸದಾಗಿ 254 ನಮ್ಮ ಕ್ಲಿನಿಕ್ ಗಳನ್ನ ಪ್ರಾರಂಭಿಸುವ ನಿಟ್ಟಿನಲ್ಲಿ ಸ್ಥಳ ಗುರುತಿಸಿ 15 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಬರಲಿದೆ ನೂತನ ‘ನಮ್ಮ ಕ್ಲಿನಿಕ್’; ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ದಿನೇಶ್ ಗುಂಡೂರಾವ್ ಸೂಚನೆ
ದಿನೇಶ್ ಗುಂಡೂರಾವ್
Follow us
ಕಿರಣ್ ಹನುಮಂತ್​ ಮಾದಾರ್
|

Updated on:Jun 13, 2024 | 8:37 PM

ಬೆಂಗಳೂರು, ಜೂ.13: ಬಸ್ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ‘ನಮ್ಮ ಕ್ಲಿನಿಕ್​’(Namma Clinic)ಗಳನ್ನ ಪ್ರಾರಂಭಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundu Rao) ಮುಂದಾಗಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಇಂದು(ಜೂ.13) ವಿವಿಧ ಆರೋಗ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ನೂತನ ನಮ್ಮ ಕ್ಲಿನಿಕ್ ಗಳನ್ನ ಪ್ರಾರಂಭಿಸುವ ನಿಟ್ಟಿನಲ್ಲಿ ಸ್ಥಳ ಗುರುತಿಸಿ 15 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೊಸದಾಗಿ 254 ‘ನಮ್ಮ ಕ್ಲಿನಿಕ್’

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 503 ನಮ್ಮ ಕ್ಲಿನಿಕ್ ಗಳನ್ನ ಸದೃಢಗೊಳಿಸುವತ್ತ ಗಮನ ಹರಿಸಬೇಕು. ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 254 ನಮ್ಮ ಕ್ಲಿನಿಕ್ ಗಳನ್ನ ಪ್ರಾರಂಭಿಸಲು ಅವಕಾಶವಿದ್ದು, ಸ್ಥಳ ಗುರುತಿಸುವ ಕಾರ್ಯ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳ ಗುರುತಿಸುವ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಆಧ್ಯತೆ ನೀಡುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು. ವಿಶೇಷವಾಗಿ ಜೈಲುಗಳು ಹಾಗೂ ಬಸ್ ನಿಲ್ದಾಣಗಳಲ್ಲಿ, ನಮ್ಮ ಕ್ಲಿನಿಕ್ ಗಳನ್ನ ಆರಂಭಿಸುವ ಕುರಿತು ಸ್ಥಳ ಗುರುತಿಸುವ ಕಾರ್ಯ 15 ದಿನಗಳ ಒಳಗಾಗಿ ಪೂರ್ಣಗೊಳಿಸಿ ಕ್ಯಾಬಿನೆಟ್ ಒಪ್ಪಿಗೆ ಪಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅನೀಲ್ ಕುಮಾರ್ ಎನ್.ಎಚ್.ಎಮ್ ಎಂ.ಡಿ ನವೀನ್ ಭಟ್ ಹಾಗೂ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರಿಗೆ ಸಚಿವರು ಸೂಚನೆ ನೀಡಿದರು.

ಇದನ್ನೂ ಓದಿ:Namma Clinics: ನಮ್ಮ ಕ್ಲಿನಿಕ್​ಗಳಿಗೆ ಮೈಸೂರಿನಲ್ಲಿ ಭರ್ಜರಿ ಯಶಸ್ಸು, ಎರಡೇ ತಿಂಗಳಲ್ಲಿ 46,000 ಜನರಿಗೆ ಚಿಕಿತ್ಸೆ

15 ನೇ ಹಣಕಾಸಿನಲ್ಲಿ ಆರೋಗ್ಯ ಯೋಜನೆಗಳ ಸ್ಥಿತಿ ಗತಿಗಳ ಕುರಿತು ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವರು, ಯೋಜನೆಗಳ ಶೀಘ್ರ ಕಾರ್ಯಗತಗೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ. ವಿಳಂಭ ನೀತಿಯನ್ನ ಅನುಸರಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ದುರಸ್ಥಿ ಕಾರ್ಯಗಳು, ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 15 ನೇ ಹಣಕಾಸಿನಲ್ಲಿ ಸಿಗುವ ಅನುದಾನವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವರು ಅಧಿಕಾರಿಗಳಿಗೆ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:35 pm, Thu, 13 June 24

ಹಿಮಾಲಯದಲ್ಲಿ ಸಿಕ್ಕಿ ಬಿದ್ದ ಕಂದು ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು
ಹಿಮಾಲಯದಲ್ಲಿ ಸಿಕ್ಕಿ ಬಿದ್ದ ಕಂದು ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು
ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಗೋಡೆ ಬಳಿ ಹೋಗಿ ಅಳುತ್ತಿರುವ ಹನುಮಂತ; ಬಿಗ್ ಬಾಸ್​ ಮನೆಯಲ್ಲಿ ಏನಾಯ್ತು?
ಗೋಡೆ ಬಳಿ ಹೋಗಿ ಅಳುತ್ತಿರುವ ಹನುಮಂತ; ಬಿಗ್ ಬಾಸ್​ ಮನೆಯಲ್ಲಿ ಏನಾಯ್ತು?
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ಎಲ್ಲರ ಆಟಕ್ಕೆ ಅಡ್ಡಗಾಲು ಹಾಕಿದ ಮಂಜು, ಗೌತಮಿ ಫುಲ್ ಗರಂ
ಎಲ್ಲರ ಆಟಕ್ಕೆ ಅಡ್ಡಗಾಲು ಹಾಕಿದ ಮಂಜು, ಗೌತಮಿ ಫುಲ್ ಗರಂ
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ
ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ
ಸಾಕಿದ ಮಾವುತ ಬಿಟ್ಟು ಹೊರಟಾಗ ಓಡೋಡಿ ಹೋಗಿ ಎಳೆದು ತಂದ ಆನೆ ಮರಿ
ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರ ನಡೆಸಿಕೊಟ್ಟ ರೀತಿ ಅಭಿನಂದನೀಯ: ವಿಶ್ವನಾಥ್
ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರ ನಡೆಸಿಕೊಟ್ಟ ರೀತಿ ಅಭಿನಂದನೀಯ: ವಿಶ್ವನಾಥ್