ಒಕ್ಕಲಿಗ ಸಮುದಾಯ ಕೈಕೊಟ್ಟ ಬೆನ್ನಲ್ಲೇ ಡಿಸಿಎಂ ಅಲರ್ಟ್: ಸಚಿವರು, ಶಾಸಕರಿಗೆ ಔತಣಕೂಟ ಏರ್ಪಡಿಸಿದ ಡಿಕೆ ಶಿವಕುಮಾರ್

ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ಕಾಂಗ್ರೆಸ್​ ಕೈ ಹಿಡಿದಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಒಕ್ಕಲಿಗ ಸಮುದಾಯ ಕೈಕೊಟ್ಟ ಬೆನ್ನಲ್ಲೇ ಅಲರ್ಟ್ ಆದ ಡಿಸಿಎಂ ಡಿಕೆ ಶಿವಕುಮಾರ್ ಒಕ್ಕಲಿಗ ಸಚಿವರು, ಶಾಸಕರಿಗೆ ಇಂದು ರಾತ್ರಿ ಔತಣಕೂಟ ಆಯೋಜಿಸಿದ್ದಾರೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಸಂಬಂಧ ವಿಕಾಸಸೌಧದಲ್ಲಿ ಸಚಿವರು, ಅಧಿಕಾರಿಗಳ ಜೊತೆ ಡಿಕೆ ಶಿವಕುಮಾರ್​ ಸಭೆ ಮಾಡಿದ್ದಾರೆ.

ಒಕ್ಕಲಿಗ ಸಮುದಾಯ ಕೈಕೊಟ್ಟ ಬೆನ್ನಲ್ಲೇ ಡಿಸಿಎಂ ಅಲರ್ಟ್: ಸಚಿವರು, ಶಾಸಕರಿಗೆ ಔತಣಕೂಟ ಏರ್ಪಡಿಸಿದ ಡಿಕೆ ಶಿವಕುಮಾರ್
ಒಕ್ಕಲಿಗ ಸಮುದಾಯ ಕೈಕೊಟ್ಟ ಬೆನ್ನಲ್ಲೇ ಡಿಸಿಎಂ ಅಲರ್ಟ್: ಸಚಿವರು, ಶಾಸಕರಿಗೆ ಔತಣಕೂಟ ಏರ್ಪಡಿಸಿದ ಡಿಕೆ ಶಿವಕುಮಾರ್
Follow us
|

Updated on: Jun 13, 2024 | 6:16 PM

ಬೆಂಗಳೂರು, ಜೂನ್​ 13: ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ (Vokkaliga samudaya) ಕಾಂಗ್ರೆಸ್​ ಕೈ ಹಿಡಿದಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಒಕ್ಕಲಿಗ ಸಮುದಾಯ ಕೈಕೊಟ್ಟ ಬೆನ್ನಲ್ಲೇ ಅಲರ್ಟ್ ಆದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​ ಒಕ್ಕಲಿಗ ಸಚಿವರು, ಶಾಸಕರಿಗೆ ಇಂದು ರಾತ್ರಿ ಔತಣಕೂಟ ಆಯೋಜಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ.ಸುರೇಶ್ ನಿವಾಸದಲ್ಲಿ ಡಿನ್ನರ್ ಮೀಟಿಂಗ್​ ಆಯೋಜಿಸಲಾಗಿದ್ದು, ಆ ಮೂಲಕ ಸಮುದಾಯದ ಸಚಿವರು, ಶಾಸಕರನ್ನ ವಿಶ್ವಾಸಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ನನ್ನೊಂದಿಗೆ ಯಾರೂ ಮಾತಾಡಿಲ್ಲ, ಒತ್ತಡವೂ ಇಲ್ಲ

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಸಂಬಂಧ ವಿಕಾಸಸೌಧದಲ್ಲಿ ಸಚಿವರು, ಅಧಿಕಾರಿಗಳ ಜೊತೆ ಡಿಕೆ ಶಿವಕುಮಾರ್​ ಸಭೆ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಟ ದರ್ಶನ್​ ಪ್ರಕರಣದಲ್ಲಿ ಒತ್ತಡ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ನನ್ನೊಂದಿಗೆ ಯಾರೂ ಮಾತಾಡಿಲ್ಲ, ಒತ್ತಡವೂ ಇಲ್ಲ. 24 ಗಂಟೆ ಆದಮೇಲೆ ನನಗೆ ಈ ವಿಚಾರ ಗೊತ್ತಾಗಿದೆ. ವಿಷಯ ತಿಳಿದು‌ ನಾನು ಮಾತನಾಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಮಂಡ್ಯ ಅಭಿವೃದ್ಧಿಗೆ ಅವಕಾಶ ಸಿಕ್ಕಿದೆ, ರಾಜಕೀಯ ಬಿಟ್ಟು ಒಟ್ಟಾಗಿ ಅಭಿವೃದ್ಧಿ ಮಾಡೋಣ: ಕಾಂಗ್ರೆಸ್​ಗೆ ಪುಟ್ಟರಾಜು ಟಾಂಗ್

ದರ್ಶನ್ ರಕ್ಷಣೆ ಹಾಗೂ ಶಾಮಿಯಾನ ಹಾಕಿದ್ದ ವಿಚಾರವಾಗಿ ಮಾತನಾಡಿದ್ದು, ನಾನು ನಂದೆ ಅನುಭವ ಹೇಳುತ್ತೇನೆ. ನನ್ನ ಕದ್ದು‌ಮುಚ್ಚಿ ಕರೆದುಕೊಂಡು‌ ಹೋಗುತ್ತಿದ್ದರು. ಏಕೆಂದರೆ ಕಲ್ಲು ಹೊಡೆಯುತ್ತಾರೆ ಅಂತ ಕದ್ದು‌ಮುಚ್ಚಿ ಅಥವಾ ಬಟ್ಟೆ ಕಟ್ಟಿ ಕರೆದುಕೊಂಡು ‌ಹೋಗುತ್ತಿದ್ದರು. ಅಭಿಮಾನಿಗಳು ಯಾರು ಹೇಗಿದ್ದಾರೆ ಅನ್ನೋದು‌ ಗೊತ್ತಾಗಲ್ಲ. ರಕ್ಷಣೆಗಾಗಿ ಈ ರೀತಿ ಮಾಡುತ್ತಾರೆ ಅಷ್ಟೇ ಎಂದು ಹೇಳಿದ್ದಾರೆ.

ಯಡಿಯೂರಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ವಿಚಾರವಾಗಿ ಮಾತನಾಡಿದ್ದು, ಈ ಬಗ್ಗೆ ನನಗೆ ಗೊತ್ತಿಲ್ಲ, ನಾನು ಮೀಟಿಂಗ್​ನಲ್ಲಿ ಇದ್ದೇನೆ. ನನಗೆ ಆಶ್ಚರ್ಯದ‌ ಸುದ್ದಿ, ಅದರ‌ ಬಗ್ಗೆ ತಿಳಿವಳಿಕೆ ‌ಇಲ್ಲ ಎಂದಿದ್ದಾರೆ.

ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಜೋರಾಗಿದೆ

ಎತ್ತಿನ‌ಹೊಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯಡಿ ಕೆಲಸ ಜೋರಾಗಬೇಕಿದೆ. ಹೀಗಾಗಿ ‌ಕಂದಾಯ, ಅರಣ್ಯ ಸೇರಿ ಹಲವು ಇಲಾಖಾಧಿಕಾರಿಗಳ ಜೊತೆ ಸಭೆ ಮಾಡಿದ್ದೇವೆ. ಕಾನೂನಿನ‌ ಚೌಕಟ್ಟಿನಲ್ಲಿ ಅರಣ್ಯ ಇಲಾಖೆಗೆ ಭೂಮಿ‌ ಕೊಡಬೇಕಾಗಿದೆ. ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಜೋರಾಗಿ ಆಗಬೇಕು. ಈ ಹಿನ್ನೆಯಲ್ಲಿ ಅಡೆತಡೆಗಳ ನಿವಾರಣೆಗೆ ಇಂದು ಸಭೆ ಕರೆದಿದ್ದೆವು. ಏನೇನು ಸಮಸ್ಯೆಗಳಿವೆ ಅಂತ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

ಇದನ್ನೂ ಓದಿ: ಶಾಲೆ ಆರಂಭವಾದರೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಿಲ್ಲ: ರಾಜ್ಯ ಸರ್ಕಾರದ ವಿರುದ್ಧ ಆರ್ ಅಶೋಕ್ ಕಿಡಿ

500 ಎಕರೆಗೂ ಹೆಚ್ಚು ಭೂಮಿಯನ್ನ ನೀರಾವರಿ ಇಲಾಖೆಗೆ ವರ್ಗಾಯಿಸಬೇಕು. 260 ಕಡೆಗಳಲ್ಲಿ ಅರಣ್ಯ ಇಲಾಖೆ ವ್ಯಾಜ್ಯ ಇದೆ. ಈ ಸಂಬಂಧ ಶಾಶ್ವತ ಪರಿಹಾರಕ್ಕಾಗಿ ಅರಣ್ಯ, ಕಂದಾಯ, ನೀರಾವರಿ ಇಲಾಖೆಯಿಂದ ಸರ್ವೆ, ಕಾಮಗಾರಿಗೆ ಬೇಕಾಗುವ ಜಾಗವನ್ನು ಅರಣ್ಯ ಇಲಾಖೆಗೆ ಪರ್ಯಾಯ ಜಾಗ ಬೇರೆ ಕಡೆ ಕೊಡಲು ಕಂದಾಯ ಇಲಾಖೆ ಒಪ್ಪಿದೆ ಎಂದು ತಿಳಿಸಿದ್ದಾರೆ.

ವರದಿ: ಈರಣ್ಣ ಬಸವ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.