ಬಡವರ ಬದುಕನ್ನೇ ಕಸಿದುಕೊಂಡ ಮಿಂಟೋ ಕಣ್ಣಿನ ಆಸ್ಪತ್ರೆ; ನೊಂದವರ ರಕ್ತ ಕಣ್ಣೀರು ಕೇಳೋರಿಲ್ಲ?

ಸರ್ಕಾರದ 2 ಲಕ್ಷ ಪರಿಹಾರ ಕೇವಲ ಚಿಕತ್ಸೆ ಔಷಧಿಗಳಿಗೆ ಖರ್ಚಾಗಿದೆ. ಸದ್ಯ ಈಗ ಕಳೆದ ಒಂದು ವಾರದಿಂದ ಕಣ್ಣಲ್ಲಿ ಮತ್ತೆ ರಕ್ತ ಸೋರುವಿಕೆ ಶುರುವಾಗಿದ್ದು ರೋಗಿಗಳು ಪರದಾಡುವಂತ್ತಾಗಿದೆ.

ಬಡವರ ಬದುಕನ್ನೇ ಕಸಿದುಕೊಂಡ ಮಿಂಟೋ ಕಣ್ಣಿನ ಆಸ್ಪತ್ರೆ; ನೊಂದವರ ರಕ್ತ ಕಣ್ಣೀರು ಕೇಳೋರಿಲ್ಲ?
ಮಿಂಟೋ ಕಣ್ಣಿನ ಆಸ್ಪತ್ರೆ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jul 25, 2022 | 12:12 PM

ಬೆಂಗಳೂರು: ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯ (Minto Eye Hospital) ಮಹಾ ಎಡವಟ್ಟಿನಿಂದ ಬರೋಬ್ಬರಿ 22 ಜನರು ಕಣ್ಣಿನ ದೃಷ್ಟಿಕಳೆದುಕೊಂಡಿದ್ದಾರೆ. ಬಡವರ ಬದುಕನ್ನೇ ಮಿಂಟೋ ಆಸ್ಪತ್ರೆ ಕಸಿದುಕೊಂಡಿದ್ದು, ಸದ್ಯ ಬಡವರ ರಕ್ತ ಕಣ್ಣೀರು ಕೇಳೊರ್ಯಾರು ಎನ್ನುವಂತ್ತಾಗಿದೆ. ಎರಡು ಲಕ್ಷ ಪರಿಹಾರ ಕೊಟ್ಟು ಸರ್ಕಾರ ಸುಮ್ಮನಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಕಣ್ಣು ಕಳೆದುಕೊಂಡವರ ಬಾಳು ಈಗ ನರಕ ಸದೃಶ್ಯವಾಗಿದೆ.

ಇದನ್ನೂ ಓದಿ: Monkeypox Case: ಕಾಮರೆಡ್ಡಿಯಲ್ಲಿ ತೆಲಂಗಾಣದ ಮೊದಲ ಮಂಕಿಪಾಕ್ಸ್​​ ಪ್ರಕರಣ ಪತ್ತೆ

ಪುಡಿಗಾಸು ಕೊಟ್ಟು ಬದುಕು ಕಿತ್ತುಕೊಂಡ ಸರ್ಕಾರ?

ಕಣ್ಣು ಕಾಣಿಸದೇ, ಕೈಯಲ್ಲಿ ಕೆಲಸ ಇಲ್ಲದೇ ನೊಂದವರು ನಡುಬೀದಿಗೆ ಬಂದಿದ್ದು, ದಯವಿಟ್ಟು ಸಹಾಯ ಮಾಡಿ ಎಂದು ಅಳಲು ತೊಡಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಕಣ್ಣಿನ ಶಸ್ತ್ರಚಿಕಿತ್ಸೆಗೆ 22 ಜನ ಒಳಗಾಗಿದ್ದು, ಕಣ್ಣಿನ ಡ್ರಾಪ್ಸ್​ನಿಂದ 22 ಜನರ ಬಾಳಲ್ಲಿ ಕತ್ತಲು ಆವರಿಸಿದೆ. ಒಂದುವರೆ ತಿಂಗಳ ಕಾಲ ಆಸ್ಪತ್ರೆಯಲ್ಲಿ ನರಕ ಯಾತನೆ ಅನುಭವಿಸಿದ್ದು, ಕರವೇ ಬೆಂಬಲದೊಂದಿಗೆ ಹೋರಾಟ ನಡೆದಿದೆ. ಪ್ರತಿಭಟನೆ ಹಾಗೂ ವಿರೋಧ ಹತ್ತಿಕ್ಕಲು 2 ಲಕ್ಷ ಪರಿಹಾರ ಕೊಟ್ಟು ಸರ್ಕಾರ ಸುಮ್ಮನಾಗಿದೆ. ಆದರೆ ನೊಂದ ಜೀವಗಳು ಎರಡು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದಾರೆ.

ಇದನ್ನೂ ಓದಿ: India Covid Updates: ಭಾರತದಲ್ಲಿ 16,866 ಮಂದಿ ಕೊರೊನಾ ಸೋಂಕಿತರು ಪತ್ತೆ, 41 ಸಾವು

ಸರ್ಕಾರದ 2 ಲಕ್ಷ ಪರಿಹಾರ ಕೇವಲ ಚಿಕತ್ಸೆ ಔಷಧಿಗಳಿಗೆ ಖರ್ಚಾಗಿದೆ. ಸದ್ಯ ಈಗ ಕಳೆದ ಒಂದು ವಾರದಿಂದ ಕಣ್ಣಲ್ಲಿ ಮತ್ತೆ ರಕ್ತ ಸೋರುವಿಕೆ ಶುರುವಾಗಿದ್ದು ರೋಗಿಗಳು ಪರದಾಡುವಂತ್ತಾಗಿದೆ. ಯಾವ ಆಸ್ಪತ್ರೆಗೆ ಅಲೆದರೂ ನೋ ಯೂಸ್ ಎನ್ನುವಂತ್ತಾಗಿದ್ದು, ಮಿಂಟೋ ಆಸ್ಪತ್ರೆ ಕೇಸ್ ಅಂತಾ ಚಿಕಿತ್ಸೆ ನೀಡಲು ವೈದ್ಯರ ಹಿಂದೇಟು ಹಾಕುತ್ತಿದ್ದಾರೆ. ಕಣ್ಣು ಚಿಕಿತ್ಸೆಗೆ ಒಳಗಾದವರ ಸ್ಥಿತಿ ನಿತ್ಯ ನರಕಯಾತನೆ ಪಡುತ್ತಿದ್ದಾರೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada