ಬೆಂಗಳೂರು: ಚುನಾವಣಾ ತಯಾರಿ ನಡೆಸಲು ಡಿ.ಕೆ.ಶಿವಕುಮಾರ್ ಅವರಿಗೆ ಎಐಸಿಸಿ ಸೂಚಿಸಿತ್ತು. ಆದರೆ ಡಿ.ಕೆ.ಶಿವಕುಮಾರ್ ಗೋವಾ ಚುನಾವಣಾ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ನಿರಾಕರಿಸಿದ್ದಾರೆ. ನಾನು ಗೋವಾಗೆ ಹೋದರೆ ಪಕ್ಷ ಸಂಘಟನೆಗೆ ಹಿನ್ನಡೆಯಾಗುತ್ತದೆ. ಉಪಚುನಾವಣೆ ಸೇರಿ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಹಿನ್ನಡೆಯಾಗಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಗೋವಾಗೆ ತೆರಳಿ ಚುನಾವಣೆ ತಯಾರಿ ನಡೆಸುವಂತೆ ಎಐಸಿಸಿ ಸೂಚಿಸಿತ್ತು. ಆದರೆ ರಾಜ್ಯದಲ್ಲಿ ಉಪಚುನಾವಣೆ ಇರುವ ಹಿನ್ನೆಲೆಯಲ್ಲಿ ಬೇರೆಯವರಿಗೆ ಜವಾಬ್ದಾರಿ ನೀಡುವಂತೆ ಎಐಸಿಸಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಈಗಾಗಲೇ ಹಲವಾರು ಒತ್ತಡ ಇದೆ. ಪಕ್ಷದ ಪದಾಧಿಕಾರಿಗಳ ನೇಮಕ ಸೇರಿದಂತೆ ಸಂಘಟನೆ ಕೆಲಸ ಮಾಡಬೇಕಿದೆ. ರಾಜ್ಯ ಪ್ರವಾಸ ಕೂಡ ಡಿಸೆಂಬರ್ನಲ್ಲಿ ಹಮ್ಮಿಕೊಳ್ಳುವ ವಿಚಾರ ಇದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:
ಡಿಕೆ ಶಿವಕುಮಾರ್ ವಿರುದ್ಧ ಪರ್ಸೆಂಟೇಜ್ ಆರೋಪ: ತನಿಖೆಗೆ ಸದಾನಂದಗೌಡ, ಸೊಗಡು ಶಿವಣ್ಣ ಆಗ್ರಹ
ಭ್ರಷ್ಟ ಡಿಕೆಶಿ ಎಂಬ ಚಿತ್ರಕ್ಕೆ ಕಾಂಗ್ರೆಸ್ ಪಕ್ಷದ ನಾಯಕರೇ ಮುಹೂರ್ತ ಮಾಡಿದ್ದಾರೆ: ಬಿಜೆಪಿ ಟ್ವೀಟ್
Published On - 1:10 pm, Fri, 15 October 21