ಬೆಂಗಳೂರು, ಆ.14: ಯಾವುದೇ ಕಾರಣಕ್ಕೂ ಗ್ಯಾರಂಟಿ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(DK Shivakumar) ಸ್ಪಷ್ಟನೆ ನೀಡಿದರು. ಇಂದು(ಬುಧವಾರ) ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಲ್ಲಿ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ‘ಪಕ್ಷದ ಅಧ್ಯಕ್ಷನಾಗಿ ಹೇಳ್ತಿದ್ದೀನಿ, ಸಿದ್ದರಾಮಯ್ಯ ಸಹ ಹೇಳಿದ್ದಾರೆ. ಕೆಲ ಕಡೆ ಆದಾಯ ಹೆಚ್ಚಿರುವವರು ಗ್ಯಾರಂಟಿ ಪಡೆಯುತ್ತಿದ್ದಾರೆ. ಇದರ ಬಗ್ಗೆ ದೂರು ಇವೆ, ಅಂತಹದ್ದನ್ನು ಪರಿಶೀಲನೆ ಮಾಡುತ್ತೇವೆ ಎಂದರು.
ಪ್ರತಿ ಯೋಜನೆಗೆ ಐಡಿ ಕಾರ್ಡ್ ಮಾಡಬೇಕೆಂಬ ಪ್ರಸ್ತಾಪ ಇದೆ. ಇನ್ನು ಬಜೆಟ್ನಲ್ಲಿ ಗ್ಯಾರಂಟಿಗೆ 56 ಸಾವಿರ ಕೋಟಿ ಮೀಸಲಿಡಲಾಗಿದ್ದು, ಉಚಿತ ಪ್ರಯಾಣದಿಂದ ಪ್ರವಾಸೋದ್ಯಮ ವಹಿವಾಟು ಹೆಚ್ಚಾಗಿದೆ. 224 ಕ್ಷೇತ್ರದಲ್ಲೂ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ ಮಾಡಿದ್ದೇವೆ. ಪ್ರತಿ ಕ್ಷೇತ್ರದಲ್ಲಿ ಓರ್ವ ಸಮಿತಿ ಅಧ್ಯಕ್ಷರು, ಸದಸ್ಯರ ನೇಮಿಸಿದ್ದೇವೆ. ಗ್ಯಾರಂಟಿಗಳಲ್ಲಿ ಲೋಪ ಆಗಬಾರದು, ಲಂಚ ಕೇಳಬಾರದು. ಇವೆಲ್ಲವನ್ನ ನೋಡಿಕೊಳ್ಳುವುದಕ್ಕೆ ನಾವು ಸಮಿತಿ ರಚನೆ ಮಾಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ಲೂಟಿ ಮಾಡಿದ್ದು ಸಾಕು, ಹೆಚ್ಎಂಟಿ ಪುನಶ್ಚೇತನಕ್ಕೆ ಸಹಕಾರ ಕೊಡಿ: ಡಿಕೆ ಶಿವಕುಮಾರ್ಗೆ ಕುಮಾರಸ್ವಾಮಿ ಟಾಂಗ್
ಇದೇ ವೇಳೆ ಗ್ಯಾರಂಟಿಗೆ ಶಾಸಕರ ಅಸಮಾಧಾನ ವಿಚಾರ, ‘ಅವೆಲ್ಲವೂ ಸುಳ್ಳು, ಗ್ಯಾರಂಟಿ ತಂದುಬಿಟ್ಟರಲ್ಲ ಎಂದು ವಿರೋಧ ಪಕ್ಷಗಳು ಕೈ ಹಿಸುಕಿಕೊಳ್ಳುತ್ತೀವೆ. ಇನ್ನು ಗ್ಯಾರಂಟಿಯಿಂದ ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಎಂಬ ಸಚಿವ ಮುನಿಯಪ್ಪ ಹೇಳಿಕೆಗೆ ಉತ್ತರಿಸಿ, ‘ಯಾವ ಸಚಿವರು ಹೇಳೋದಕ್ಕೆ ಆಗಲ್ಲ, ಯಾವ ಮುನಿಯಪ್ಪನು ಹೇಳಿಲ್ಲ, ಅವೆಲ್ಲವು ಸುಳ್ಳು. ಏನ್ ಕೊಡಬೇಕೋ ಕೊಟ್ಟಿದೆ. ಎಸ್ ಎಮ್ ಕೃಷ್ಣ ಅವರು ಇದ್ದಾಗ ಬಜೆಟ್ 26 ಸಾವಿರ ಕೋಟಿ, ಈಗ ಮೂರು ಲಕ್ಷ ಕೋಟಿಯಾಗಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ