ತನ್ನ ವಿರುದ್ಧ ದೂರು ನೀಡಿದರೆಂದು ವಾಹನಗಳಿಗೆ ಬೆಂಕಿ ಹಚ್ಚಿದ ಶ್ವಾನ ಮಾಲೀಕ ಅರೆಸ್ಟ್

ಶ್ವಾನ ಮಾಲೀಕ ದೂರು ನೀಡಿದ ಮಹಿಳೆ ಮತ್ತು ಆಕೆಯ ಮಗನ ಎರಡು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಸದ್ಯ ಘಟನೆ ಸಂಬಂಧ ನಾಯಿ ಮಾಲೀಕನನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ನಂಜುಂಡ ಬಾಬು ಬಂಧಿತ ಆರೋಪಿ. ಕೊತ್ತನೂರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಜೂನ್ 13ರಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ಮಹಿಳೆಗೆ ಸಾಕು ನಾಯಿ ಕಚ್ಚಿತ್ತು.

ತನ್ನ ವಿರುದ್ಧ ದೂರು ನೀಡಿದರೆಂದು ವಾಹನಗಳಿಗೆ ಬೆಂಕಿ ಹಚ್ಚಿದ ಶ್ವಾನ ಮಾಲೀಕ ಅರೆಸ್ಟ್
ನಂಜುಂಡ ಬಾಬು
Follow us
Jagadisha B
| Updated By: ಆಯೇಷಾ ಬಾನು

Updated on:Oct 26, 2023 | 11:37 AM

ಬೆಂಗಳೂರು, ಅ.26: ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಮೇಲೆ ಸಾಕು ನಾಯಿಯೊಂದು (Dog) ದಾಳಿ ಮಾಡಿದೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದ ರೊಚ್ಚಿಗೆದ್ದ ಶ್ವಾನ ಮಾಲೀಕ ದೂರು ನೀಡಿದ ಮಹಿಳೆ ಮತ್ತು ಆಕೆಯ ಮಗನ ಎರಡು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಸದ್ಯ ಘಟನೆ ಸಂಬಂಧ ನಾಯಿ ಮಾಲೀಕನನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ನಂಜುಂಡ ಬಾಬು ಬಂಧಿತ ಆರೋಪಿ.

ಕೊತ್ತನೂರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಜೂನ್ 13ರಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ಮಹಿಳೆಗೆ ಸಾಕು ನಾಯಿ ಕಚ್ಚಿತ್ತು. ಈ ಸಂಬಂಧ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದರು. ದೂರು ಕೊಟ್ಟವರ ಸುಮ್ಮನೆ ಬಿಡುವುದಿಲ್ಲ ಎಂದು ನಾಯಿ ಮಾಲೀಕ ಬೆದರಿಕೆ ಹಾಕಿದ್ದ. ಅಲ್ಲದೆ ದೂರುದಾರೆ ಮಹಿಳೆ ಹಾಗೂ ಶ್ವಾನ ಮಾಲೀಕನ ನಡುವೆ ಚೀಟಿ ವ್ಯವಹಾರವಿತ್ತು. ನಾಯಿ ಕಚ್ಚಿದ ಹಿನ್ನಲೆ ಚೀಟಿ ಹಣವನ್ನು ಮಹಿಳೆ ಆಸ್ಪತ್ರೆ ಚಿಕಿತ್ಸೆಗೆಂದು ಬಳಸಿಕೊಂಡಿದ್ದಳು. ಇದಾದ ಬಳಿಕ ಶ್ವಾನ ಮಾಲೀಕ ದೂರುದಾರರ ಮನೆಯ ಬಳಿ ಇದ್ದ ಬೈಕ್​ಗಳಿಗೆ ಬೆಂಕಿ ಹಚ್ಚಿದ್ದರು. ಸದ್ಯ ಗಾಡಿಗಳು ಸುಟ್ಟ ಹಿನ್ನಲೆ ಕೊತ್ತನೂರು ಠಾಣೆಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ನಾಯಿ ಕಚ್ಚಿದ್ದಕ್ಕೆ ಮಹಿಳೆಯಿಂದ ದೂರು, ಕೋಪದಲ್ಲಿ ಆಕೆಯ ವಾಹನಗಳಿಗೆ ಬೆಂಕಿ ಹಚ್ಚಿದ ಶ್ವಾನ ಮಾಲೀಕ

ಘಟನೆ ವಿವರ

ಜೂ.13 ರಂದು ಪುಷ್ಪಾ ಅವರು ಕೆಲಸಕ್ಕೆಂದು ಹೋಗುವಾಗ ಸಾಕು ಶ್ವಾನವೊಂದು ದಾಳಿ ಮಾಡಿತ್ತು. ಸಾಕು ನಾಯಿ ದಾಳಿಯನ್ನು ಕಣ್ಣಾರೆ ಕಂಡ ಬಾಬು ಮತ್ತು ಗಾಯತ್ರಿ, ಪುಷ್ಪಾ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಪುಷ್ಪಾ ಮತ್ತು ಅವರ ಮಗನನ್ನು ಬಾಬು ಮತ್ತು ಗಾಯತ್ರಿ ಒತ್ತಾಯಿಸಿದ್ದರು. ಬಳಿಕ ಈ ಬಗ್ಗೆ ಮಹಿಳೆ ನಾಯಿಯ ಮಾಲೀಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡ ಶ್ವಾನ ಮಾಲೀಕ ನಂಜುಂಡ ಬಾಬು ದೂರುದಾರರ ಬೈಕ್​ಗಳಿಗೆ ಬೆಂಕಿ ಇಟ್ಟಿದ್ದರು. ಪುಷ್ಪಾ ಮತ್ತು ಆಕೆ ಮಗನಿಗೆ ಸೇರಿದ ವಾಹನಕ್ಕೆ ಬೆಂಕಿ ಇಟ್ಟಿದ್ದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:33 am, Thu, 26 October 23