ಹಲವರನ್ನು ಪರಚಿದ ಹುಲಿ ಉಗುರು: ವನ್ಯಜೀವಿ ಸಂಪತ್ತು, ಅಂಗಾಂಗ ಹೊಂದಿದವರಿಗೆ ಡಬಲ್ ಶಾಕ್, ನುಂಗಂಗಿಲ್ಲ..ಉಗುಳಂಗಿಲ್ಲ..

ಹುಲಿ ಉಗುರು, ಚರ್ಮ, ಆನೆದಂತ, ಜಿಂಕೆ ಕೊಂಬು ಸೇರಿದಂತೆ ವನ್ಯಜೀವಿಗಳ ವಸ್ತು ಹೊಂದಿದವಗೆ ಢವ ಢವ ಶುರುವಾಗಿದೆ. ಹತ್ತಿರ ಇಟ್ಟುಕೊಳ್ಳುವಂಗಿಲ್ಲ. ವಾಪಸ್ ಕೊಟ್ಟರೂ, ಹತ್ತಿರ ಇಟ್ಟುಕೊಂಡರು ಕೇಸ್ ಬೀಳುತ್ತೆ. ಇದರಿಂದ ಕೆಲವರಿಗೆ ನುಂಗಂಗಿಲ್ಲ..ಉಗುಳಂಗಿಲ್ಲ ಎನ್ನುವಂತಾಗಿದೆ. ಇನ್ನು ಈ ಬಗ್ಗೆ ವನ್ಯಜೀವಿ ಅರಣ್ಯಾಧಿಕಾರಿ ಹಾಗೂ ಬೆಂಗಳೂರು ನಗರ DCF ರವೀಂದ್ರ ಕುಮಾರ್‌ TV9 ಜೊತೆ ಮಾತನಾಡಿದ್ದು, ಅದು ಈ ಕೆಳಗಿನಂತಿದೆ ನೋಡಿ.

ಹಲವರನ್ನು ಪರಚಿದ ಹುಲಿ ಉಗುರು: ವನ್ಯಜೀವಿ ಸಂಪತ್ತು, ಅಂಗಾಂಗ ಹೊಂದಿದವರಿಗೆ ಡಬಲ್ ಶಾಕ್, ನುಂಗಂಗಿಲ್ಲ..ಉಗುಳಂಗಿಲ್ಲ..
ಪ್ರಾತಿನಿಧಿಕ ಚಿತ್ರ
Follow us
ರಮೇಶ್ ಬಿ. ಜವಳಗೇರಾ
|

Updated on:Oct 26, 2023 | 11:17 AM

ಬೆಂಗಳೂರು, (ಅಕ್ಟೋಬರ್ 26): ಬಿಗ್​ಬಾಸ್ ಸ್ಪರ್ಧಿ ಹಳ್ಳಿಕಾರ್ ಸಂತೋಷ್ ಬಂಧನವಾಗುತ್ತಿದ್ದಂತೆಯೇ ಹುಲಿ ಉಗುರಿನ ಲಾಕೆಟ್(Tiger Claw pendant )ಧರಿಸಿದ್ದ ಸೆಲೆಬ್ರೆಟಿಗಳ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವನ್ಯಜೀವಿ ಸಂಪತ್ತು ಹಾಗೂ ಅಂಗಾಂಗ (wild animals organs) ಹೊಂದಿದ ಒಂದೊಂದೇ ಪ್ರಕರಣಗಳು ಬಯಲಿಗೆ ಬರುತ್ತಿವೆ. ಆದ್ರೆ, ಇದೀಗ ವನ್ಯಜೀವಿ ಸಂಪತ್ತು ಹಾಗೂ ಅಗಾಂಗ ಹೊಂದಿದವರಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಹುಲಿ ಉಗುರು, ಚರ್ಮ, ಆನೆದಂತ, ಜಿಂಕೆ ಕೊಂಬು ಸೇರಿದಂತೆ ವನ್ಯಜೀವಿಗಳ ವಸ್ತು ಹೊಂದಿದವಗೆ ಢವ ಢವ ಶುರುವಾಗಿದೆ. ಏಕೆಂದರೆ ವನ್ಯಜೀವಿ ಸಂರಕ್ಷಣಾಧಿಕಾರಿಗಳಿಗೆ ವನ್ಯಜೀವಿ ಅಗಾಂಗ ಅಥವಾ ಸಂಪತ್ತು ವಾಪಸ್ ಕೊಂಡಂಗಿಲ್ಲ.. ಹತ್ತಿರ ಇಟ್ಟುಕೊಳ್ಳುವಂಗಿಲ್ಲ. ವಾಪಸ್ ಕೊಟ್ಟರೂ, ಹತ್ತಿರ ಇಟ್ಟುಕೊಂಡರು ಕೇಸ್ ಬೀಳುತ್ತೆ. ಇದರಿಂದ ಕೆಲವರಿಗೆ ನುಂಗಂಗಿಲ್ಲ..ಉಗುಳಂಗಿಲ್ಲ ಎನ್ನುವಂತಾಗಿದೆ.

ಸದ್ಯ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಹುಲಿ ಉಗರಿನ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿವಿಧ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ಮತ್ತೊಂದೆಡೆ ಸಾಕಷ್ಟು ಜನರು ಸೆಲೆಬ್ರಿಟಿಗಳು ವನ್ಯಜೀವಿಗಳಿನಿಂದ ಮಾಡಿರುವ ವಸ್ತುಗಳನ್ನು ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇದೀಗ ವಾಪಸ್ ವಲಯ ಅರಣ್ಯಧಿಕಾರೊಗಳಿಗೆ ಕೊಡುವುದಕ್ಕೆ ಹೋದರೂ ಕೇಸ್ ಬೀಳುತ್ತೆ. ಯಾರು ಕೊಟ್ಟರು? ಎಲ್ಲಿಂದ ಖರೀದಿಸಿದ್ರಿ? ಏಕೆ ಬೇಕಿತ್ತು? ಹೀಗೆ ಹತ್ತಾರು ಪ್ರಶ್ನೆಗಳನ್ನು ಅರಣಾಧಿಕಾರಿಗಳು ಕೇಳುತ್ತಾರೆ.

ಇದನ್ನೂ ಓದಿ: ಕಾಟಾಚಾರಕ್ಕೆ ಸೆಲೆಬ್ರಿಟಿ ಮನೆಗಳ ಪರಿಶೀಲನೆ, ನಾಮಕಾವಸ್ತೆ ನೊಟೀಸ್: ಅನುಮಾನ ಮೂಡಿಸಿದ ಅರಣ್ಯಾಧಿಕಾರಿಗಳ ನಡೆ

ಸಾರ್ವಜನಿಕರು ತಮ್ಮ ಬಳಿ ಹೊಂದಿರುವ ವನ್ಯಜೀವಿಗಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳು ಇದ್ದರೂ ವಾಪಸ್ ನೀಡುವಂತೆ ಈ ಹಿಂದೆ ಕೇಂದ್ರ ಸರ್ಕಾರ ಎರಡು ಬಾರಿ ಅವಕಾಶ ನೀಡಿತ್ತು. ಟೈಮ್​ ಕೊಟ್ಟರೂ ಸಹ ಹಲವರು ನಿರ್ಲಕ್ಷ್ಯ ತೋರಿಸಿದ್ದರು. ಈಗ ವನ್ಯಜೀವಿ ಅಧಿಕಾರಿಗಳು ಭೇಟೆಗೆ ಮುಂದಾಗಿದ್ದು, ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಷ್ಟು ದಿನ ಸುಮ್ಮನಿದ್ದವರು ಈಗ ವ್ಯನ್ಯಜೀವಿ ಅಂಗಾಂಗಗಳನ್ನು ವಾಪಸ್ ಮಾಡಲು ಮುಂದಾಗುತ್ತಿದ್ದಾರೆ. ಸದ್ಯ ವಾಪಸ್ ಕೊಟ್ಟರೂ ಕೇಸ್ ಬೀಳುತ್ತೆ. ಇಟ್ಟುಕೊಂಡರೂ ಸಂಕಷ್ಟ ಕಟ್ಟಿಟ್ಟ ಬುತ್ತಿ. ಇದರಿಂದ ವನ್ಯಜೀವಿಗಳ ವಸ್ತು ಹೊಂದಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವನ್ಯಜೀವಿ ಅರಣ್ಯಾಧಿಕಾರಿ ಹೇಳುವುದೇನು?

ಇನ್ನು ಈ ಬಗ್ಗೆ ವನ್ಯಜೀವಿ ಅರಣ್ಯಾಧಿಕಾರಿ ಹಾಗೂ ಬೆಂಗಳೂರು ನಗರ DCF ರವೀಂದ್ರ ಕುಮಾರ್‌ TV9 ಜೊತೆ ಮಾತನಾಡಿದ್ದು, ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ಬಂದ ಮೇಲೆ ಕೇಂದ್ರ ಸರ್ಕಾರ ಎರಡು ಭಾರಿ ಅವಕಾಶ ನೀಡಿತ್ತು. ಯಾರ ಬಳಿ ವನ್ಯಜೀವಿ ಸಂಪತ್ತು, ಉತ್ಪನ ಇದೆ ಹಾಗೂ ಯಾರು ವನ್ಯಜೀವಿ ಸಂಪತ್ತು ಹೊಂದಿರುವವರು ಪೋಟೋ ದಾಖಲೆ ಮಾಹಿತಿಯೊಂದಿಗೆ ನೊಂದಾಯಿಸಿ ಲೈಸೆನ್ಸ್ ಪಡೆಯಲು ಅವಕಾಶ ನೀಡಲಾಗಿತ್ತು. ಆದ್ರೆ ಈಗ ಯಾರ ಬಳಿಯಾದ್ದರೂ ವನ್ಯಜೀವಿ ಉತ್ಪನ ಇದ್ರೆ ಹತ್ತಿರದ ವಲಯ ಅರಣ್ಯಧಿಕಾರಿಗಳಿಗೆ ನೀಡಬೇಕು. ಆದ್ರೆ ಇದಕ್ಕೆ ಸೂಕ್ತ ಕಾರಣ ನೀಡಬೇಕು, ಹೇಗೆ ಬಂತು? ಯಾರಿಂದ ಬಂತು ಅಂತಾ ಸೂಕ್ತ ಕಾರಣ ನೀಡಬೇಕು ಎಂದು ಸ್ಪಷ್ಟಪಡಿಸಿದರು.

ಈಗ ತಾವಾಗಿಯೂ ಹಿಂದುರಗಿಸಲು ಬಂದರೂ ವನ್ಯಜೀವ ಕಾಯ್ದೆ ಕಾನೂನಿನಲ್ಲಿ ವಿನಾಯಿತಿಗೆ ಅವಕಾಶ ಇಲ್ಲ. ಯಾಕಂದ್ರೆ ಈ ಹಿಂದೆ ಲೈಸೆನ್ಸ್ ಪಡೆಯಲು ಅವಕಾಶ ನೀಡಲಾಗಿತ್ತು . ಆದ್ರೆ ಈಗ ವನ್ಯಜೀವಿ ಕಾಯ್ದೆಯಲ್ಲಿ ಲೈಸೆನ್ಸ್ ಪಡೆಯಲು ಅವಕಾಶ ಇಲ್ಲ. ಈಗಾಲಾದರೂ ಬಂದು ವನ್ಯಜೀವಿ ಸಂಪತ್ತು ಹಾಗೂ ಸತ್ತ ವನ್ಯಜೀವಿಗಳ ಯಾವುದೇ ಅಗಾಂಗ ಹೊಂದಿದ್ರೆ ಹತ್ತಿರದ ವಲಯ ಅರಣ್ಯಧಿಕಾರಿಗಳಿಗೆ ನೀಡುವಂತೆ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ವನ್ಯಜೀವಿಗಳ ಸಂಪತ್ತು ಹೊಂದಿದವರ ಸ್ಥಿತಿ ನುಂಗಂಗಿಲ್ಲ..ಉಗುಳಂಗಿಲ್ಲ ಎನ್ನುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:03 am, Thu, 26 October 23

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು