AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಟಾಚಾರಕ್ಕೆ ಸೆಲೆಬ್ರಿಟಿ ಮನೆಗಳ ಪರಿಶೀಲನೆ, ನಾಮಕಾವಸ್ತೆ ನೊಟೀಸ್: ಅನುಮಾನ ಮೂಡಿಸಿದ ಅರಣ್ಯಾಧಿಕಾರಿಗಳ ನಡೆ

ಹುಲಿ ಉಗುರಿನ ಲಾಕೆಟ್​ ಧರಿಸಿದ ಪ್ರಕರಣದಲ್ಲಿ ಬಿಗ್​ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಅವರನ್ನು ಏಕಾಏಕಿ ಬಂಧಿಸಲಾಗಿದೆ. ಆದ್ರೆ, ಇನ್ನುಳಿದ ಹಲವು ಪ್ರಮುಖ ವ್ಯಕ್ತಿಗಳ ಬಂಧನವಾಗಿಲ್ಲ, ಕೇವಲ ನಾಮಕವಸ್ತೆ ರೀತಿಯಲ್ಲಿ ಅವರಿಗೆ ನೋಟಿಸ್ ನೀಡಲಾಗಿದೆ. ಆದ್ರೆ, ಆ ನೋಟಿಸ್​ನಲ್ಲಿ ಯಾರಿಗೂ ಕಾಲಮೀತಿ ಹಾಕಿಲ್ಲ. ಇದರಿಂದ ಅರಣಾಧಿಕಾರಿಗಳ ನಡೆಯನ್ನು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಂತೋಷ್​ಗೆ ಒಂದು ನ್ಯಾಯ, ಸೆಲೆಬ್ರಿಟಿಗಳಿಗೆ ಇನ್ನೊಂದು ನ್ಯಾಯನಾ? ಎಂದು ಪ್ರಶ್ನಿಸುತ್ತಿದ್ದಾರೆ.

ಕಾಟಾಚಾರಕ್ಕೆ ಸೆಲೆಬ್ರಿಟಿ ಮನೆಗಳ ಪರಿಶೀಲನೆ, ನಾಮಕಾವಸ್ತೆ ನೊಟೀಸ್: ಅನುಮಾನ ಮೂಡಿಸಿದ ಅರಣ್ಯಾಧಿಕಾರಿಗಳ ನಡೆ
ಹುಲಿ ಉಗುರು ಲಾಕೆಟ್ ಧರಿಸಿದ ಸೆಲೆಬ್ರಿಟಿಗಳು
ರಮೇಶ್ ಬಿ. ಜವಳಗೇರಾ
| Updated By: Digi Tech Desk|

Updated on:Oct 26, 2023 | 12:35 PM

Share

ಬೆಂಗಳೂರು. (ಅಕ್ಟೋಬರ್ 25): ಹಳ್ಳಿಕಾರ್ ಸಂತೋಷ್ (Varthur Santosh) ಬಿಗ್‌ಬಾಸ್ ಮನೆಯಲ್ಲಿ ಅರೆಸ್ಟ್ ಆದ ಬೆನ್ನಲ್ಲೇ ಹುಲಿ ಉಗುರಿನ ಲಾಕೆಟ್ (Tiger claw) ಧರಿಸಿದ್ದ ಸೆಲೆಬ್ರೆಟಿಗಳ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ರೈತನಿಗೊಂದು ನ್ಯಾಯ, ಸೆಲೆಬ್ರಿಟಿಗಳಿಗೊಂದು ನ್ಯಾಯನಾ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್​ಲೈನ್​ ವೆಂಕಟೇಶ್​, ನಿಖಿಲ್ ಕುಮಾರಸ್ವಾಮಿ ಕೊರಳಿನಲ್ಲಿ ಹುಲಿ ಉಗುರಿನ ಲಾಕೆಟ್ ಇದ್ದ ಫೋಟೋ ವೈರಲ್ ಆಗಿತ್ತು. ನಟ ಜಗ್ಗೇಶ್ ಅಂತೂ, ನಾನು 20 ನೇ ವರ್ಷಕ್ಕೆ ಕಾಲಿಟ್ಟಿಗಾ ನನ್ನ ತಾಯಿ ಕೊಟ್ಟ ಹುಲಿ ಉಗುರು.. ನನ್ನ ಮಗ ಹುಲಿ ಥರ ಇರಲಿ ಎಂದು ಒರಿಜನಲ್ ಹುಲಿಉಗುರನ್ನೇ ಲಾಕೆಟ್​ ಮಾಡಿ ಕೊಟ್ಟಿದ್ದರು ಅಂತಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಇದೀಗ ಇದು ಅವರಿಗೆ ಸಂಕಷ್ಟ ತಂದಿಟ್ಟಿದೆ. ಇವರೆಲ್ಲ ಮನೆ ಮೇಲೆ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಕೆಲವರ ಲಾಕೆಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಆದ್ರೆ, ವರ್ತೂರ್​ ಸಂತೋಷ್​ನಂತೆ ಇವರುಗಳ ಬಂಧನ ಯಾವಾಗ ಎನ್ನುವ ಕೂಗು ಬಲವಾಗಿ ಕೇಳಿಬರುತ್ತಿದೆ.

ಹೌದು…ವರ್ತೂರ್ ಸಂತೋಷ್​ ಅವರನ್ನ ಬಂಧಿಸಿದ ಬೆನ್ನಲ್ಲೇ ಇನ್ನುಳಿದವರ ಬಂಧನ ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ. ಒತ್ತಡಗಳು ಹೆಚ್ಚಾಗುತ್ತಿದ್ದಂತೆಯೇ ಅರಣ್ಯಾಧಿಕಾರಿಗಳು, ಹುಲಿ ಉಗುರು ಲಾಕೆಟ್​ ಧರಿಸಿದ್ದ ಸೆಲೆಬ್ರೆಟಿಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಆದ್ರೆ, ಕಾಟಾಚಾರಕ್ಕೆ ದಾಳಿ ಮಾಡಿದ್ದಾರೆ ಎನ್ನುವ ಚರ್ಚೆಗಳು ಶುರುವಾಗಿವೆ. ಅಲ್ಲದೇ ನಾಮಕಾವಸ್ತೆ ನೋಟಿಸ್ ನೀಡಲಾಗಿದೆ. ಏಕೆಂದರೆ ಅರಣ್ಯಾಧಿಕಾರಿ ನೀಡಿದ ನೋಟಿಸ್​ನಲ್ಲಿ ಯಾರಿಗೂ ಕಾಲಮೀತಿ ಹಾಕಿಲ್ಲ. ಇಷ್ಟೇ ಸಮಯದಲ್ಲಿ ಬಂದು ಉತ್ತರಿಸಿ ಎಂದು ನೊಟೀಸ್ ನಲ್ಲಿ ಉಲ್ಲೇಖ ಮಾಡಿಲ್ಲ. ಹಾಗಿದ್ರೆ ಸೆಲೆಬ್ರೆಟಿಗಳು ಯಾವಾಗ ಬೇಕಾದ್ರು ವಿಚಾರಣೆಗೆ ಬರಬಹುದಾ? ಸಂತೋಷ್ ರನ್ನ ಏಕಾಏಕಿ ಬಂಧಿಸಿದ ಅಧಿಕಾರಿಗಳು, ಸೆಲೆಬ್ರೆಟಿಗಳ ವಿಚಾರದಲ್ಲಿ ಯಾಕೇ ಇಷ್ಟು ಹಿಂದಡಿ ಇಡುತ್ತಿದ್ದಾರೆ ಎನ್ನುವ ಚರ್ಚೆಗಳು ಸಾರ್ವಜನಿಕ ವಯಲದಲ್ಲಿ ಶುರುವಾಗಿವೆ.

ಇದನ್ನೂ ಓದಿ: ಕಾಡು ಪ್ರಾಣಿಗಳ ವಸ್ತು ಇಟ್ಟುಕೊಳ್ಳುವ ಬಗ್ಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹೇಳುವುದೇನು, ನಿಯಮ ಪಾಲಿಸದಿದ್ದರೆ ಏನೆಲ್ಲಾ ಶಿಕ್ಷೆ?

ವರ್ತೂರ್​ ಸಂತೋಷ್​ಗೆ ಒಂದು ನ್ಯಾಯ? ನಟರಾದ ಜಗ್ಗೇಶ್, ದರ್ಶನ್, ನಿಖಿಲ್ ಕುಮಾರಸ್ವಾಮಿ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬಿದನಗೆರೆಯ ಶನಿಮಹಾತ್ಮ ದೇವಾಲಯದ ಅರ್ಚಕ ಧನಂಜಯ ಗುರೂಜಿಗೆ ಇನ್ನೊಂದು ನ್ಯಾಯ ನಾ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಅರಣ್ಯಾ ಇಲಾಖೆ ಹಾಗೂ ಪೊಲೀಸ್​ ಇಲಾಖೆ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.

ಅರಣ್ಯ ಇಲಾಖೆ ಸಚಿವರು ಹಾಗೂ ಅಧಿಕಾರಿಗಳು ಮಾತ್ರ ಈ ನೆಲದಲ್ಲೆಇ ಎಲ್ಲರಿಗೂ ಒಂದೇ ಕಾನೂನು. ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಮಾಧ್ಯಮಗಳ ಮುಂದೆ ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದಾರೆ. ಆದ್ರೆ, ಈಗ ಆಗಿದ್ದೇನು? ವಿಚಾರಣೆಗೆ ಬರುವಂತೆ ಈ ದಿನದಂದು ಬನ್ನಿ ಎಂದು ನೋಟಿಸ್​ನಲ್ಲಿ ಉಲ್ಲೇಖಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಪ್ರಮುಖ ವ್ಯಕ್ತಿಗಳ ರಕ್ಷಣೆಗೆ ನಿಂತ್ರಾ? ಎನ್ನುವ ಚರ್ಚೆಗಳು ಶುರುವಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:17 am, Thu, 26 October 23

ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
ಪಂಜಾಬ್‌ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ
ಹುಬ್ಬಳ್ಳಿಯಲ್ಲಿ ಬೈಕ್‌ ಖರೀದಿಗೆ ಮುಗಿಬಿದ್ದ ಗ್ರಾಹಕರು
ಹುಬ್ಬಳ್ಳಿಯಲ್ಲಿ ಬೈಕ್‌ ಖರೀದಿಗೆ ಮುಗಿಬಿದ್ದ ಗ್ರಾಹಕರು
ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ್ರಾ? ಅಂತೆ ಕಂತೆಗಳಿಗೆ ಡಿಕೆ ಶಿವಕುಮಾರ್ ಗರಂ
ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ್ರಾ? ಅಂತೆ ಕಂತೆಗಳಿಗೆ ಡಿಕೆ ಶಿವಕುಮಾರ್ ಗರಂ