ಗೋ ಹತ್ಯೆ, ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆದರೇ ವಿಧಾನಸೌಧಕ್ಕೆ ಮುತ್ತಿಗೆ: ಸರ್ಕಾರಕ್ಕೆ ಸಂತರ ಎಚ್ಚರಿಕೆ

ವಿಶ್ವ ಹಿಂದೂ ಪರಿಷತ್​​ವತಿಯಿಂದ, ಮೇಲುಕೋಟೆಯ 41 ಪೀಠಾಧೀಶರಾದ ಯದುಗಿರಿ ಯತಿರಾಜ ನಾರಾಯಣ ರಾಮನುಜ ಜೀಯರ್ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಇಂದು (ಆ.13) ನಗರದ ಮಲ್ಲೇಶ್ವರಂನ ಶ್ರೀರಾಮಾನುಜ ಸಂಸ್ಕೃತಿ ಭವನದಲ್ಲಿ ಸಂತ ಸಮಾವೇಶ ನಡೆಯಿತು. ಗೋ ಹತ್ಯೆ, ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯದಂತೆ ಆಗ್ರಹ

ಗೋ ಹತ್ಯೆ, ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆದರೇ ವಿಧಾನಸೌಧಕ್ಕೆ ಮುತ್ತಿಗೆ: ಸರ್ಕಾರಕ್ಕೆ ಸಂತರ ಎಚ್ಚರಿಕೆ
ವಿಶ್ವ ಹಿಂದೂ ಪರಿಷತ್​​ ನಿಳುವಳಿ
Follow us
| Updated By: ವಿವೇಕ ಬಿರಾದಾರ

Updated on: Aug 13, 2023 | 2:44 PM

ಬೆಂಗಳೂರು: ಗೋ ಹತ್ಯೆ, ಮತಾಂತರ ನಿಷೇಧ ಕಾಯ್ದೆ (Anti Conversion Act) ವಾಪಸ್ ತೆಗೆದುಕೊಂಡರೆ ಸಂತರೇ ವಿಧಾನಸೌಧ (Vidhan Soudha) ಮುತ್ತಿಗೆ ಹಾಕಬೇಕಾಗುತ್ತದೆ. ಸರ್ಕಾರ ಯಾವುದೇ ಕಾರಣಕ್ಕೂ ಕಾಯ್ದೆಗಳನ್ನು ವಾಪಸ್ ಪಡೆಯಲು​ ಮುಂದಾಗಬಾರದು. ಈಗಾಗಲೇ ಈ ಬಗ್ಗೆ ಒಟ್ಟಾಗಿ ನಿರ್ಣಯ ಕೈಗೊಂಡಿದ್ದೇವೆ. ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ರಾಷ್ಟ್ರೀಯ ಸಂತ ಸಂಘದ ನಿರ್ದೇಶಕ ಪರಮಾತ್ಮ ಜಿ. ಮಹಾರಾಜ್ ಎಚ್ಚರಿಕೆ ನೀಡಿದ್ದಾರೆ.

ವಿಶ್ವ ಹಿಂದೂ ಪರಿಷತ್​​ವತಿಯಿಂದ, ಮೇಲುಕೋಟೆಯ 41 ಪೀಠಾಧೀಶರಾದ ಯದುಗಿರಿ ಯತಿರಾಜ ನಾರಾಯಣ ರಾಮನುಜ ಜೀಯರ್ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಇಂದು (ಆ.13) ನಗರದ ಮಲ್ಲೇಶ್ವರಂನ ಶ್ರೀರಾಮಾನುಜ ಸಂಸ್ಕೃತಿ ಭವನದಲ್ಲಿ ಸಂತ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಗೋಹತ್ಯೆ, ಮತಾಂತರ ಸೇರಿದಂತೆ ಹಿಂದೂ ಸಮಾಜ ಎದುರಿಸುತ್ತಿರುವ ಸಮಸ್ಯೆ ಮತ್ತು ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಯಿತು.

ಇದನ್ನೂ ಓದಿ: ಜನ ಕಷ್ಟ ಹೇಳಿಕೊಳ್ಳಲು ಬಂದಾಗ ಸಿಎಂ ಸಿದ್ದರಾಮಯ್ಯ ಒಂದೆರಡು ನಿಮಿಷ ಸ್ಪೇರ್ ಮಾಡಿದರೆ ಆಕಾಶವೇನೂ ಕಳಚಿಬೀಳದು!

ಸಭೆಯ ನಿರ್ಣಯ- 1

ಕರ್ನಾಟಕದಲ್ಲಿ ಪ್ರಜೆಗಳು ಸಾಮರಸ್ಯ, ಶಾಂತಿ, ಸೌಹಾರ್ದಯುತವಾಗಿ ಬಾಳಲು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2022 ಅನ್ನು ಯಾವುದೇ ಕಾರಣಕ್ಕೂ ಪ್ರಸ್ತುತ ಸರ್ಕಾರವು ಹಿಂಪಡೆಯದಂತೆ ಆಗ್ರಹಿಸುವ ನಿಲುವಳಿ.

ನಿರ್ಣಯ – 2

ಭಾರತೀಯೆರೆಲ್ಲರೂ ಶಾಂತಿ, ಸೌಹಾರ್ದಿದಿಂದ ಬಾಳಬೇಕಾದರೆ ರಾಜ್ಯದಲ್ಲಿ ಕರ್ನಾಟಕ ಧಾರ್ಮಿಕ ಹಕ್ಕು ಸ್ವಾತಂತ್ರ್ಯ ಕಾಯ್ದೆ 2020 ಅನ್ನು ಹಿಂಪಡೆಯದೆ ಉಳಿಸಿ ಅನುಷ್ಠಾನಗೊಳಿಸುವಂತೆ ಆಗ್ರಹಿಸುವ ನಿಲುವಳಿ. ವಿಶ್ವ ಹಿಂದೂ ಪರಿಷತ್ ಸಂತ ಸಮಾವೇಶ ಆಯೋಜನೆ ಮಾಡಿದೆ. ಸಮಾಜದಲ್ಲಿ ಹಿಂದೂ ಧರ್ಮ, ಸಂಸ್ಕೃತಿ, ಸಂಪ್ರದಾಯ, ಧರ್ಮ ಕಾಪಾಡುವ ಬಗ್ಗೆ ಸಮಾವೇಶದಲ್ಲಿ ಚರ್ಚೆ‌ ನಡೆದಿದೆ. ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಯಾವುದೇ ಸಡಿಲಿಕೆ ಆಗಬಾರದು. ಇನ್ನಷ್ಟು ಕಾಯ್ದೆ ಬಲಪಡಿಸಬೇಕು ಎಂದು ನಿರ್ಧಾರ ಮಾಡಲಾಗಿದೆ. ಅವರವರ ಧರ್ಮವನ್ನು ಪಾಲನೆ ಮಾಡೋದು ಸರಿ ಆದರೆ ಮತಾಂತರ ಮಾಡುವಂತೆ ಆಗಬಾರದು ಎಂದು ಶಾಸಕ ಅಶ್ವತ್​ ನಾರಾಯಾಣ ಹೇಳಿದರು.

ಆ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ತಂದಿತ್ತು. ಅದನ್ನು ಸಡಿಲಿಕೆ ಮಾಡದೆ ಸರ್ಕಾರ ಬಲಪಡಿಸಬೇಕು ಎಂದು ನಿರ್ಧರಿಸಲಾಗಿದೆ. ಲವ್ ಜಿಹಾದ್ ಆಗೋಕೆ ಅವಕಾಶವನ್ನು ಕೊಡಬಾರದು ಎಂದು ಚರ್ಚಿಸಲಾಗಿದೆ. ಬಡವನ ದೌರ್ಬಲ್ಯವನ್ನು ಬಳಸಿಕೊಂಡು ಮತಾಂತರ ಮಾಡುವುದನ್ನು ತಡೆಯಬೇಕು. ಕಾನೂನು ಪ್ರಕಾರ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಕಾನೂನು ತರಲಾಗಿದೆ. ಅದನ್ನು ಈ ಸರ್ಕಾರ ಕೂಡ ಮುಂದುವರೆಸಬೇಕು. ಯಾವುದನ್ನು ಬದಲಿಸಬಾರದು ಎಂದು ಒತ್ತಾಯಿಸಿದರು.

ಇನ್ನು ಸಭೆಯಲ್ಲಿ ಬೇರೆ ಬೇರೆ ಜಿಲ್ಲೆಯ 15 ಕ್ಕೂ ಹೆಚ್ಚು ಶ್ರೀಗಳು, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಡಾ. ಅಶ್ವಥ್ ನಾರಾಯಣ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆ ಕಾರ್ಯಕರ್ತರು ಸೇರಿದಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ