ಈಜಿಪುರ ಫ್ಲೈ ಓವರ್ ನಿರ್ಮಾಣ ವಿಳಂಬ: ಗುತ್ತಿಗೆದಾರರೊಂದಿಗೆ ಸಭೆ ನಡೆಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ
ಬೆಂಗಳೂರಿನ ಈಜಿಪುರ ಫ್ಲೈ ಓವರ್ ನಿರ್ಮಾಣ ವಿಳಂಬ ಹಿನ್ನೆಲೆ ಒಂದು ವಾರದಲ್ಲಿ ಈ ಬಗ್ಗೆ ಗುತ್ತಿಗೆದಾರರೊಂದಿಗೆ ಸಭೆ ನಡೆಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಬೆಂಗಳೂರು: ಬೆಂಗಳೂರಿನ ಈಜಿಪುರ ಫ್ಲೈ ಓವರ್ ನಿರ್ಮಾಣ ವಿಳಂಬ ಹಿನ್ನೆಲೆ ಒಂದು ವಾರದಲ್ಲಿ ಈ ಬಗ್ಗೆ ಗುತ್ತಿಗೆದಾರರೊಂದಿಗೆ ಸಭೆ ನಡೆಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿದೆ. ಫ್ಲೈ ಓವರ್ ನಿರ್ಮಾಣದ ಗುತ್ತಿಗೆ ರದ್ದು ಪ್ರಶ್ನಿಸಿ ಸಿಂಪ್ಲೆಕ್ಸ್ ಇನ್ಫ್ರಾ ಲಿಮಿಟೆಡ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್ಗೆ 9 ತಿಂಗಳಲ್ಲಿ ಫ್ಲೈಓವರ್ ಪೂರ್ಣಗೊಳಿಸುವುದಾಗಿ ಸಂಸ್ಥೆ ಹೇಳಿತ್ತು. ಮತ್ತು ಈ ಸಂಬಂಧ ಬ್ಯಾಂಕ್ ಗ್ಯಾರಂಟಿ ಒದಗಿಸುವುದಾಗಿಯೂ ಹೇಳಿಕೆ ನೀಡಿತ್ತು.
ಸಂಸ್ಥೆಯ ಹೇಳಿಕೆಯನ್ನು ಆಲಿಸದ ಹೈಕೋರ್ಟ್ ಸಿಂಪ್ಲೆಕ್ಸ್ ಲಿಮಿಟೆಡ್ ಪ್ರಸ್ತಾವನೆ ಬಗ್ಗೆ ಸ್ವತಂತ್ರವಾಗಿ ತೀರ್ಮಾನಿಸಿ 2 ವಾರದಲ್ಲಿ ತೀರ್ಮಾ ಕೈಗೊಳ್ಳಲು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿದೆ. ಹಾಗೇ ಬಿಬಿಎಂಪಿ ದಾಖಲಿಸಿರುವ ಎಫ್ಐಆರ್ ಕೂಡ ಹಿಂಪಡೆಯಲೂ ಸೂಚನೆ ನೀಡಿದೆ.
Published On - 2:13 pm, Tue, 26 July 22