ಬೆಂಗಳೂರು: ಇಂದು (ಜುಲೈ 5) ಬೆಳ್ಳಂಬೆಳಗ್ಗೆ ಶಾಸಕ ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು (ACB Officials) ದಾಳಿ ನಡೆಸಿದ್ದಾರೆ. ದಾಳಿಯನ್ನು ಖಂಡಿಸಿ ಜಮೀರ್ ಬೆಂಬಲಿಗರು ನಿವಾಸದ ಮುಂಭಾಗ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಹಿನ್ನೆಲೆ ಪೊಲೀಸರು ಪ್ರತಿಭಟನಾಕಾರರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಎಸಿಬಿ ದಾಳಿ ವೇಳೆ ಜಮೀರ್ ಅಹ್ಮದ್ ಮನೆಯಲ್ಲೇ ಇದ್ದರು. ಬೆಳಿಗ್ಗೆ 3.30ರಿಂದ ರೇಡ್ ನಡೆಸಲಾಗುತ್ತಿದೆ. ಎಸಿಬಿ ರೇಡ್ ಮಾಡಿದಾಗ ಶಾಸಕ ಜಮೀರ್ ಇನ್ನು ಎದ್ದಿರಲಿಲ್ಲ.
ಇನ್ನು ಶಾಸಕ ಜಮೀರ್ ಮನೆ, ಕಚೇರಿ ಸೇರಿ 5 ಕಡೆಗಳಲ್ಲಿ ಎಸಿಬಿ ದಾಳಿ ನಡೆಸಿದೆ ಎಂದು ತಿಳಿದುಬಂದಿದ್ದು, ಸತತ 3 ಗಂಟೆಯಿಂದ ಎಸಿಬಿ ಅಧಿಕಾರಿಗಳು ತಲಾಶ್ ನಡೆಸುತ್ತಿದ್ದಾರೆ.
ಬಿಟ್ಟು ಬಿಡದೆ ಜಮೀರ್ಗೆ ಕಾಡ್ತಿರುವ ಐಎಂಎ ಉರುಳು:
ಇಡಿ ವರದಿಯ ಆಧಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ಮಾಡುತ್ತಿದ್ದಾರೆ. ಐಎಂಎ ಕೇಸ್ ಸಂಬಂಧ ಇಡಿ ಎಸಿಬಿಗೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆ ದಾಳಿ ಮಾಡಿ ಮಾಡಿದ್ದಾರೆ. ಕಂಟೋನ್ಮೆಂಟ್ನಲ್ಲಿರುವ ಜಮೀರ್ ಅಹ್ಮದ್ ಖಾನ್ ನಿವಾಸ, ಸಿಲ್ವರ್ ಓಕ್ ಅಪಾರ್ಟ್ಮೆಂಟ್ನ ಫ್ಲ್ಯಾಟ್ ಮೇಲೆ ರೇಡ್ ಮಾಡಲಾಗಿದೆ. ಸದಾಶಿವನಗರದಲ್ಲಿರುವ ಗೆಸ್ಟ್ ಹೌಸ್ ಮೇಲೂ ಎಸಿಬಿ ದಾಳಿ ನಡೆದಿದ್ದು, ಬನಶಂಕರಿಯಲ್ಲಿರುವ ಜಿ.ಕೆ.ಅಸೋಸಿಯೇಟ್ಸ್ ಕಚೇರಿ, ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೂ ದಾಳಿ ಮಾಡಲಾಗಿದೆ.
ಇದನ್ನೂ ಓದಿ: Priyanka Upendra: ಡಾಕ್ಟರ್ ಪ್ರಿಯಾಂಕಾ ಉಪೇಂದ್ರ: ಡಾಕ್ಟರೇಟ್ ಸಿಕ್ಕ ಖುಷಿಯಲ್ಲಿ ಮಾತನಾಡಿದ ನಟಿ
ನಿಖರ ಕಾರಣ ಏನು?:
ಎಸಿಬಿ ಅಧಿಕಾರಿಗಳು ಜಮೀರ್ ನಿವಾಸದ ಮೇಲೆ ದಾಳಿ ಮಾಡಲು ನಿಖರ ಕಾರಣ ಟಿವಿ9ಗೆ ಲಭ್ಯವಾಗಿದೆ. ಪ್ರತಿಯೊಂದು ತನಿಖಾ ಸಂಸ್ಥೆಗಳಿಗೆ ಕೆಲಸ ಬೇರೆ ಬೇರೆಯಾಗಿರುತ್ತದೆ. ಇಡಿ ಆ್ಯಕ್ಟ್ ಬೇರೆಯದ್ದೇ ಇರಲಿದೆ, ಎಸಿಬಿ ಆ್ಯಕ್ಟ್ ಬೇರೆಯದ್ದೇ ಇರಲಿದೆ. ಜಮೀರ್ ಅಹಮ್ಮದ್ ಸಾರ್ವಜನಿಕ ಪ್ರತಿನಿಧಿ. ಸಾರ್ವಜನಿಕ ಪ್ರತಿನಿಧಿ ಆಗಿರುವಾಗ ಎಸಿಬಿ ಕೂಡ ದಾಳಿ ಮಾಡಬಹುದು. ಖಾಸಗಿ ವ್ಯಕ್ತಿ ಆಗಿದ್ದರೆ ಎಸಿಬಿ ದಾಳಿ ಮಾಡುವಂತೆ ಇಲ್ಲ. ಇಡಿ ಐಎಂಎ ಕೇಸ್ ತನಿಖೆ ನಡೆಸಿತ್ತು. ತನಿಖೆಯಿಂದ ಅಕ್ರಮ ಆಸ್ತಿ ಗಳಿಸಿರುವ ಬಗ್ಗೆ ಎಸಿಬಿಗೆ ವರದಿ ನೀಡಿತ್ತು.
ಇದನ್ನೂ ಓದಿ: ಗುಟ್ಕಾ ಜಾಹೀರಾತಿನಲ್ಲಿ ಅಕ್ಷಯ್, ಅಜಯ್, ಶಾರುಖ್ ನಟಿಸಿದ್ದು ತಪ್ಪಲ್ಲ ಎಂದ ಮತ್ತೊಬ್ಬ ನಟ