ಟೆಕ್ಸ್ಟೈಲ್ ಮಷಿನ್ಗೆ ಸಿಲುಕಿ ನೌಕರ ಸಾವು: ಮಾಲೀಕರ ವಿರುದ್ಧ ಕುಟುಂಬಸ್ಥರು ಆಕ್ರೋಶ
ಟೆಕ್ಸ್ಟೈಲ್ ಮಷಿನ್ಗೆ ಸಿಲುಕಿ ನೌಕರ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮುನಿಬೀರಯ್ಯ (57) ಮೃತ ವ್ಯಕ್ತಿ.
ಬೆಂಗಳೂರು: ಟೆಕ್ಸ್ಟೈಲ್ ಮಷಿನ್ಗೆ (textile machine) ಸಿಲುಕಿ ನೌಕರ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮುನಿಬೀರಯ್ಯ (57) ಮೃತ ವ್ಯಕ್ತಿ. ಗೋಪಾಲಕೃಷ್ಣ ಟೆಕ್ಸ್ಟೈಲ್ ಮಿಲ್ಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಘಟನೆ ಸಂಭವಿಸಿದ್ದು, ಕಳೆದ 12 ವರ್ಷದಿಂದ ಕೆಲಸ ಮಾಡುತ್ತಿದ್ದ ಮುನಿಬೀರಯ್ಯ. ಸಂಜೆ 4 ಗಂಟೆಯಲ್ಲಿ ಟೆಕ್ಸ್ಟೈಲ್ ಮಷಿನ್ಗೆ ಸಿಲುಕಿ ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಮಿಲ್ ಮಾಲೀಕರ ವಿರುದ್ಧ ಮೃತ ಮುನಿಬೀರಯ್ಯ ಕುಟುಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯಪುರ ಪೊಲೀಸರ ಭೇಟಿ ನೀಡಿ, ಪರಿಶೀಲನೆ ಮಾಡಿದರು.
ಮೈಸೂರು ಜಿಲ್ಲೆಯಲ್ಲಿ ಚಿರತೆ ದಾಳಿಯಿಂದ ಯುವಕ ಸಾವು
ಮೈಸೂರು: ಚಿರತೆ ದಾಳಿಯಿಂದ ಯುವಕ ಸಾವನ್ನಪ್ಪಿರುವಂತಹ ಘಟನೆ ಚೆನ್ನಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ನಡೆದಿದೆ. ಮಂಜುನಾಥ್ ಚಿರತೆ ದಾಳಿಯಿಂದ ಸಾವ್ನಪ್ಪಿದ ಯುವಕ. ಟಿ. ನರಸೀಪುರ ತಾಲೂಕಿನ ಎಂ.ಎಲ್ ಹುಂಡಿ ಗ್ರಾಮದ ಮುದ್ದು ಮಾರಮ್ಮ ದೇವಸ್ಥಾನಕ್ಕೆ ಪೂಜೆಗೆ ಹೋಗುವಾಗ ಚಿರತೆ ದಾಳಿ ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಮಾಡಿದರು. ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಎರಡು ಬೈಕ್ಗಳ ಮದ್ಯೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು
ಯಾದಗಿರಿ: ಎರಡು ಬೈಕ್ಗಳ ಮದ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ತಾಲೂಕಿನ ಅಬ್ಬೆತುಮಕುರ ರಸ್ತೆಯಲ್ಲಿ ನಡೆದಿದೆ. ಠಾಣಗುಂದಿ ಗ್ರಾಮದ ಅಬ್ದುಲ್ ಭಾಷಾ (42) ಮೃತ ದುರ್ದೈವಿ. ಠಾಣಗುಂದಿ ಪಂಚಾಯ್ತಿಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದ. ಠಾಣಗುಂದಿಯಿಂದ ಯಾದಗಿರಿಗೆ ಬರುವಾಗ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಕಾಮಗಾರಿ ಸೂಚನಾ ಫಲಕಕ್ಕೆ ಬೈಕ್ ಡಿಕ್ಕಿ, ಇಬ್ಬರು ಸಾವು
ಬೆಂಗಳೂರು: ಮದ್ಯ ಸೇವಿಸಿ ಬೈಕ್ ಚಾಲನೆ ಮಾಡಿ ಸೆಲ್ಫ್ ಆಕ್ಸಿಡೆಂಟ್ಗೆ ಯುವಕರಿಬ್ಬರು ಬಲಿಯಾಗಿರುವಂತಹ ಘಟನೆ ನಿನ್ನೆ ತಡರಾತ್ರಿ 11:45 ರ ಸಮಯದಲ್ಲಿ ಲಗ್ಗೆರೆ ಬ್ರಿಡ್ಜ್ ಬಳಿ ನಡೆದಿದೆ. ದೇವರಾಜು(22 ) ಹಾಗೂ ಜಗದೀಶ್(22) ಸಾವನಪ್ಪಿರುವ ಯುವಕರು. ಅತಿ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದ ಜಗದೀಶ್, ಈ ವೇಳೆ ಸೂಚನಾ ಫಲಕ ಬೋರ್ಡ್ಗೆ ಡಿಕ್ಕಿ ಹೊಡೆದಿದೆ. ಕೂಡಲೇ ಸ್ಥಳೀಯರು ಕೆಸಿ ಜನರಲ್ ಆಸ್ಪತ್ರೆ ಗೆ ಸೇರಿಸುವ ಮಾರ್ಗ ಮಧ್ಯ ಜಗದೀಶ್ ಸಾವನ್ನಪ್ಪಿದ್ದಾನೆ. ಹಿಂಬದಿ ಸವಾರ ದೇವರಾಜ್ ನನ್ನ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತನಾಗಿದ್ದಾನೆ. ರಾಜಾಜಿ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕ್ರಿಕೇಟ್ ಬೆಟ್ಟಿಂಗ್ ಮೇಲೆ ದಾಳಿ ಇಬ್ಬರು ಬಂಧನ: 2.12 ಲಕ್ಷ ಹಣ ವಶಕ್ಕೆ
ಬಳ್ಳಾರಿ: ಕ್ರಿಕೇಟ್ ಬೆಟ್ಟಿಂಗ್ ಮೇಲೆ ಪೊಲೀಸರು ದಾಳಿ ಇಬ್ಬರನ್ನು ಬಂಧಿಸಿದ್ದು, 2.12 ಲಕ್ಷ ಹಣ, TV, ಎರಡು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಬಳ್ಳಾರಿಯ ಹನುಮಾನ್ ನಗರದ ಟೀ ಶಾಪ್‌ಯೊಂದರಲ್ಲಿ ಬೆಟ್ಟಿಂಗ್ ವೇಳೆ ದಾಳಿ ಮಾಡಲಾಗಿದೆ. ಬಾಪೂಜಿ ಬಡವಾಣೆಯ ಆರ್, ಮಂಜುನಾಥ್ (35) ಹಾಗೂ ವಿಶಾಲ್ ನಗರದ ಆರ್ ಯುವರಾಜ್(24) ಬಂಧಿತ ಆರೋಪಿಗಳು. ಭಾರತ-ದಕ್ಷಿಣ ಆಫ್ರಿಕಾ ಟಿ 20. ವಿಶ್ವ ಕಪ್ ಮ್ಯಾಚ್‌ಗೆ ಬಂಧಿತ ಆರೋಪಿಗಳು ಬೆಟ್ಟಿಂಗ್ ನಡೆಸುತ್ತಿದ್ದರು. ಬಳ್ಳಾರಿ ಬ್ರೂಸ್ ಪೇಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.