GTDC: ಚಾರಿತ್ರಿಕ ಉದ್ಯೋಗ ಮೇಳ ಉದ್ಘಾಟನೆ: ನಿರುದ್ಯೋಗಿಗಳಿಗೆ ಮಹತ್ವದ ಘೋಷಣೆ ಮಾಡಿದ ಸಿಎಂ
ನಿರುದ್ಯೋಗ ಯುವಕ-ಯುವತಿಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಂಗಳೂರಿನ ಅರಮನೆ ಮೈದಾಣದಲ್ಲಿ ಆಯೋಜಿಸಿರುವ 'ಯುವ ಸಮೃದ್ಧಿ ಸಮ್ಮೇಳನ' ಎಂಬ ಬೃಹತ್ ಉದ್ಯೋಗ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಮೋದಿ ಪ್ರಧಾನಿಯಾಗಿ 10 ವರ್ಷ ಆಯ್ತು. 20 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ, ನಿರುದ್ಯೋಗ ಹೆಚ್ಚಾಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದರು.

ಬೆಂಗಳೂರು, ಫೆ.26: ಹೊಸ ಉದ್ಯೋಗ ಸೃಷ್ಟಿ ಮತ್ತು ತರಬೇತಿಗಾಗಿ ಈಗಿರುವ ಜಿಟಿಡಿಸಿಗಳ ಜತೆಗೆ ಹೊಸದಾಗಿ ಇನ್ನಷ್ಟು GTDC ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಹತ್ವದ ಘೋಷಣೆ ಮಾಡಿದರು. ನಿರುದ್ಯೋಗ ಯುವಕ-ಯುವತಿಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬೆಂಗಳೂರಿನ ಅರಮನೆ ಮೈದಾಣದಲ್ಲಿ ಆಯೋಜಿಸಿರುವ ‘ಯುವ ಸಮೃದ್ಧಿ ಸಮ್ಮೇಳನ’ ಎಂಬ ಬೃಹತ್ ಉದ್ಯೋಗ ಮೇಳ (Job Fair) ಉದ್ಘಾಟಿಸಿ ಮಾತನಾಡಿದ ಅವರು, ನರೇಂದ್ರ ಮೋದಿ (Narendra Modi) ಪ್ರಧಾನಿಯಾಗಿ 10 ವರ್ಷ ಆಯ್ತು. 20 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ, ಮೋದಿ ಅವರು ಉದ್ಯೋಗ ಸೃಷ್ಟಿ ಬದಲಾಗಿ ನಿರುದ್ಯೋಗ ಹೆಚ್ಚಾಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದರು.
ಇಡೀ ದೇಶದಲ್ಲಿಯೇ ಕರ್ನಾಟಕ ಸರ್ಕಾರ ಬೃಹತ್ ಉದ್ಯೋಗ ಮೇಳ ಏರ್ಪಾಡು ಮಾಡಿದೆ. ಈ ಮೇಳದಲ್ಲಿ ಸಂತೋಷದಿಂದ ಭಾಗಿಯಾಗಿದ್ದೇನೆ. 70 ಸಾವಿರಕ್ಕೂ ಹೆಚ್ಚು ಉದ್ಯೋಗಕಾಕ್ಷಿಗಳು ಭಾಗಿಯಾಗಿದ್ದಾರೆ. ಉದ್ಯೋಗ ಕೊಡಲು ಬಂದ ಉದ್ಯಮಗಳಿಗೂ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ನಿರುದ್ಯೋಗ ದೊಡ್ಡ ಸಮಸ್ಯೆ. ಪ್ರತಿ ವರ್ಷ ಉದ್ಯೋಗ, ನಿರುದ್ಯೋಗ ಹೆಚ್ಚಾಗುತ್ತಾ ಹೋಗುತ್ತಿದೆ. 2014-15 ರಲ್ಲಿ ಶೇ. 2.1 ರಷ್ಟಿದ್ದ ನಿರುದ್ಯೋಗದ ಸಮಸ್ಯೆ 2023 ರಲ್ಲಿ ಶೇಕಡಾ 8.40 ಕ್ಕೆ ಏರಿಕೆಯಾಗಿದೆ. 2014-15ರಲ್ಲಿ ಪ್ರಧಾನಿಗಳು ಪ್ರತಿ ವರ್ಷ 2 ಸಾವಿರ ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಆದರೆ ಉದ್ಯೋಗ ಸೃಷ್ಟಿ ಬದಲಾಗಿ ನಿರುದ್ಯೋಗ ಹೆಚ್ಚಾಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಮೋದಿ ಪ್ರಧಾನಿಯಾಗಿ 10 ವರ್ಷ ಆಯ್ತು. 20 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: ತಮಿಳುನಾಡು ದೋಸ್ತಿಯ ಮೆಚ್ಚಿಸಲು ಬೆಂಗಳೂರಿಗೆ ಜಲ ಸಂಕಷ್ಟ ತಂದಿಟ್ಟ ಸಿದ್ದರಾಮಯ್ಯ ಸರ್ಕಾರ: ಬಿಜೆಪಿ ವಾಗ್ದಾಳಿ
ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಇವತ್ತು 20 ವರ್ಷ ಇದ್ದವರು 10 ವರ್ಷಗಳ ಬಳಿಕ 30 ವರ್ಷ ಆಗುತ್ತದೆ. ಉದ್ಯೋಗ ಸೃಷ್ಟಿ ಮಾಡಿ, ಉದ್ಯೋಗ ಕೊಡದಿದ್ದರೆ ದೇಶದ ಸಂಪತ್ತನ್ನ ಉತ್ಪತ್ತ ಮಾಡುವ ಯುವಕ ಯುವತಿಯರು ನಿರುದ್ಯೋಗ ಆಗುತ್ತಾರೆ. ಪ್ರತಿ ವರ್ಷ ಉದ್ಯೋಗವಕಾಶ ಪ್ರದೇಶವಾರ ಮಾಡಬೇಕು. ರಾಜ್ಯದ ಎಲ್ಲ ಭಾಗಗಳಲ್ಲೂ ಉದ್ಯೋಗ ಮಾಡಬೇಕು ಎಂದರು.
ಸರ್ಕಾರ ಉದ್ಯೋಗ ಸೃಷ್ಟಿ ಮಾಡಬೇಕು, ಉದ್ಯೋಗ ಬಯಸುವವರಿಗೂ ಉದ್ಯೋಗ ನೀಡಬೇಕು. ಕಲಿಕೆಯ ಜೊತೆಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ನಮ್ಮ ಸರ್ಕಾರ ಮಾಡಿಕೊಂಡಿದೆ. ಮಾರುಕಟ್ಟೆಯಲ್ಲಿ ಯಾವ ರೀತಿ ಬೇಡಿಕೆ ಇದೆಯೋ ಅಂತಹ ಕೌಶಲ್ಯ ಅಭಿವೃದ್ಧಿ ನಮ್ಮ ಇಲಾಖೆ ನೀಡುತ್ತದೆ. ನಾವು ಉದ್ಯೋಗವನ್ನೂ ಕೊಟ್ಟು ಕೌಶಲ್ಯ ಅಭಿವೃದ್ಧಿಯನ್ನೂ ಮಾಡುತ್ತೇವೆ. ಇದಕ್ಕಾಗಿ 2016 ರಲ್ಲಿ ನಾನು ಕೌಶಲ್ಯ ಅಭಿವೃದ್ಧಿ ಇಲಾಖೆ ಪ್ರಾರಂಭ ಮಾಡಿದೆ ಎಂದರು.
ಕರ್ನಾಟಕ ಮುಖ್ಯಮಂತ್ರಿ ಅಧಿಕೃತ ಎಕ್ಸ್ ಖಾತೆಯಿಂದ ಟ್ವೀಟ್
ಅರಮನೆ ಮೈದಾನದಲ್ಲಿ ನಡೆದ ‘ಯುವ ಸಮೃದ್ಧಿ ಸಮ್ಮೇಳನ ಮತ್ತು ಬೃಹತ್ ಉದ್ಯೋಗ ಮೇಳ’ವನ್ನು ಮುಖ್ಯಮಂತ್ರಿ @siddaramaiah ಅವರು ಉದ್ಘಾಟಿಸಿ ಮಾತನಾಡಿದರು.
ನಿರುದ್ಯೋಗಿ ಯುವಕರಿಗೆ ‘ಯುವ ನಿಧಿ’ ಕೊಡುವ ಜತೆಗೆ, ಉದ್ಯೋಗ ಸೃಷ್ಟಿಸುವ ಮತ್ತು ಉದ್ಯೋಗ ಮಾಡಲು ಅಗತ್ಯವಾದ ತರಬೇತಿಗಳನ್ನೂ ನೀಡಲಾಗುವುದು.
ನಿರುದ್ಯೋಗ ದೇಶದ ಪ್ರಮುಖ ಸಮಸ್ಯೆಯಾಗಿದೆ.… pic.twitter.com/cBgN4njazv
— CM of Karnataka (@CMofKarnataka) February 26, 2024
ನಿರುದ್ಯೋಗ ಸಮಸ್ಯೆ ಬೆಳೆಯುತ್ತಲೇ ಇದೆ. ಇದಕ್ಕೆ ಸರ್ಕಾರ ಪರಿಹಾರ ಕಂಡುಕೊಳ್ಳಬೇಕು. ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಈ ಇಲಾಖೆ ಪ್ರಾರಂಭ ಮಾಡಿದೆ. ಯುವನಿಧಿ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ. 2022-23ರಲ್ಲಿ ಪಾಸಾದ ನಿರುದ್ಯೋಗಿಗಳಿಗೆ 2 ವರ್ಷಗಳವರೆಗೆ ನಿರುದ್ಯೋಗ ಭತ್ಯೆ ನೀಡುತ್ತಿದ್ದೇವೆ. ನಿರುದ್ಯೋಗಿ ಬಡವರಿಗೆ ಅರ್ಜಿ ಹಾಕಲೂ ದುಡ್ಡು ಇರಲ್ಲ. ಅವರಿಗೆ ನಮ್ಮ ನಿರುದ್ಯೋಗಿ ಭತ್ಯೆ ಸಹಕಾರಿ ಆಗಲಿದೆ ಎಂದರು.
ಈ ಮೇಳ ನಿರಂತರವಾಗಿ ಪ್ರತಿ ವರ್ಷ ಎಲ್ಲ ಪ್ರಾದೇಶಿಕ ಭಾಗಗಳಲ್ಲಿ ನಡೆಯುತ್ತದೆ. ಯುವಕ-ಯುವತಿಯರಿಗೆ ಉದ್ಯೋಗ ಕೊಡುವ ಕೆಲಸ ಆಗಬೇಕು. ನಿಮ್ಮ ಕಾಲ ವ್ಯಯ ಆಗಬಾರದು ಅನ್ನೋದು ನಮ್ಮ ಉದ್ದೇಶ. ಇಡೀ ದೇಶದಲ್ಲಿಯೇ ಕರ್ನಾಟಕ ಸರ್ಕಾರ ಬೃಹತ್ ಉದ್ಯೋಗ ಮೇಳ ಏರ್ಪಾಡು ಮಾಡಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:30 pm, Mon, 26 February 24



