AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Rains: ಬೆಂಗಳೂರು ನಗರದಲ್ಲಿ ದಿಢೀರ್ ಮಳೆ: ವಾಹನ ಸವಾರರ ಪರದಾಟ

ಪಾದಚಾರಿಗಳು, ವಾಹನ ಸವಾರರು ಪರದಾಡಿದರು. ಮನೆಗಳಿಗೆ ತೆರಳಲು ಸಾಧ್ಯವಾಗದ ಜನರು ಬಸ್ ನಿಲ್ದಾಣ, ಅಂಗಡಿಗಳ ಮುಂದೆ ಆಶ್ರಯ ಪಡೆದರು.

Bengaluru Rains: ಬೆಂಗಳೂರು ನಗರದಲ್ಲಿ ದಿಢೀರ್ ಮಳೆ: ವಾಹನ ಸವಾರರ ಪರದಾಟ
ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್​ನಲ್ಲಿ ಮಳೆ ಅನಾಹುತ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jul 25, 2021 | 8:06 PM

Share

ಬೆಂಗಳೂರು: ಮಹಾನಗರದ ಹಲವೆಡೆ ಭಾನುವಾರ ಸಂಜೆ ದಿಢೀರ್ ಮಳೆ ಸುರಿಯಿತು. ಮೆಜೆಸ್ಟಿಕ್, ಲಾಲ್​ಬಾಗ್​, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ರಿಚ್​ಮಂಡ್ ಟೌನ್ ಸುತ್ತಮುತ್ತ ಉತ್ತಮ ಮಳೆಯಾಯಿತು.

ದಿಢೀರ್ ಮಳೆಯಿಂದಾಗಿ ವಾರಾಂತ್ಯದ ಜಾಲಿ ಮೂಡ್​ನಲ್ಲಿದ್ದವರಿಗೆ ಬೇಸರವಾಯಿತು. ಪಾದಚಾರಿಗಳು, ವಾಹನ ಸವಾರರು ಪರದಾಡಿದರು. ಮನೆಗಳಿಗೆ ತೆರಳಲು ಸಾಧ್ಯವಾಗದ ಜನರು ಬಸ್ ನಿಲ್ದಾಣ, ಅಂಗಡಿಗಳ ಮುಂದೆ ಆಶ್ರಯ ಪಡೆದರು.

ಮುಧೋಳ: ಚಿಚಖಂಡಿ ಸೇತುವೆ ಮುಳುಗಡೆ ಬಾಗಲಕೋಟೆ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಘಟಪ್ರಭಾ ನದಿ ನೀರಿನ ಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಮುಧೋಳ ತಾಲೂಕಿನ ಚಿಚಖಂಡಿ ಸೇತುವೆಯ ಮೇಲೆ 4 ಅಡಿಯಷ್ಟು ನೀರು ಹರಿಯುತ್ತಿದೆ. ಪ್ರವಾಹದಿಂದಾಗಿ ಧಾರವಾಡ-ವಿಜಯಪುರ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ.

ಇನ್ನೂ 5 ದಿನ ರಾಜ್ಯದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಕರ್ನಾಟಕದ ಮಲೆನಾಡು, ಕರಾವಳಿ ಸೇರಿದಂತೆ ಹಲವೆಡೆ ಅಬ್ಬರಿಸಿರುವ ಮಳೆಯಿಂದಾಗಿ (Karnataka Rains) ಜನಜೀವನ ಅಸ್ತವ್ಯಸ್ತವಾಗಿದೆ. ಎಡೆಬಿಡದೆ ಸುರಿದ ಧಾರಾಕಾರ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಭಾರೀ ಮಳೆಗೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿಪಾತ್ರದ ಜನರಿಗೆ ಪ್ರವಾಹ (Flood) ಭೀತಿ ಎದುರಾಗಿದೆ. ಆದರೆ, ನಿನ್ನೆ ಸಂಜೆಯಿಂದ ಮಳೆಯ ಆರ್ಭಟ ಕೊಂಚ ತಗ್ಗಿದ್ದು, ಪರಿಸ್ಥಿತಿ ಸುಧಾರಿಸಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ. ಕರ್ನಾಟಕದಲ್ಲಿ ಮುಂಗಾರು (Monsoon 2021) ಆರಂಭವಾದಾಗಿನಿಂದ ಇಲ್ಲಿಯ ತನಕ ಸರಾಸರಿ 501.6 ಮಿ.ಮೀ ಮಳೆಯಾಗಿದೆ. ಪ್ರತೀ ವರ್ಷ ಸಾಧಾರಣವಾಗಿ 403.8 ಮಿ.ಮೀ ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಶೇ.24ರಷ್ಟು ಹೆಚ್ಚುವರಿ ಮಳೆ ಸುರಿದಿದೆ. ಬೆಂಗಳೂರಿನಲ್ಲಿ (Bengaluru Rain) ಶನಿವಾರ ರಾತ್ರಿ 8.30ರ ತನಕ ದಾಖಲಾದ ವರದಿ ಪ್ರಕಾರ 24.4 ಮಿ.ಮೀ. ಮಳೆಯಾಗಿದೆ. ಹೆಚ್​ಎಎಲ್​ ಏರ್​ಪೋರ್ಟ್​​ ಒಂದರಲ್ಲೇ 16.6 ಮಿ.ಮೀ ಮಳೆಯಾಗಿರುವುದು ತಿಳಿದು ಬಂದಿದೆ.

(Evening Rain in Bengaluru Road Flooded in many areas)

ಇದನ್ನೂ ಓದಿ: ಕಾರವಾರ: ಮಳೆಗೆ ಮನೆ ಕುಸಿತ; ನೆಲಸಮ‌ವಾದ ಸೂರು ನೋಡಿ ಭಾವುಕರಾದ ದಂಪತಿ

ಇದನ್ನೂ ಓದಿ: Shivamogga: ಮಳೆಗೆ ನಲುಗಿದ ಶಿವಮೊಗ್ಗ; ಸೋಮಿನಕೊಪ್ಪದಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕ ಸಾವು

Published On - 8:04 pm, Sun, 25 July 21