ಯೂಟ್ಯೂಬ್ ನೋಡಿ ಮೆಡಿಕಲ್ ಶಾಪ್ನಲ್ಲಿ ಚಿಕಿತ್ಸೆ, ರೋಗಿಗಳಿಂದ ದುಪ್ಪಟ್ಟು ಹಣ ಪಡೆಯುತ್ತಿದ್ದ ನಕಲಿ ವೈದ್ಯನಿಗೆ ಸ್ಥಳೀಯರಿಂದ ತರಾಟೆ
ಮೆಡಿಕಲ್ ಶಾಪ್ ಮಾಲೀಕ ಮಹೇಶ್ ಕುಮಾರ್, ಕಳೆದ ವಾರ ಬಿಹಾರ ಮೂಲದ ಕಾರ್ಮಿಕರೊಬ್ಬರಿಗೆ ಕಾಲು ನೋವಿಗೆಂದು ಇಂಜೆಕ್ಷನ್ ಕೊಟ್ಟು ಕಾಲಿಗೆ ಬ್ಯಾಂಡೇಜ್ ಕಟ್ಟಿ ಹಣ ಪಡೆದಿದ್ದರು. ಇದನ್ನ ಗಮನಿಸಿದ ಸ್ಥಳೀಯರು ಮೆಡಿಕಲ್ ಮಾಲೀಕನನ್ನ ವಿಚಾರಿಸಿ ಸಖತ್ ಕ್ಲಾಸ್ ತೆಗದುಕೊಂಡಿದ್ದಾರೆ.
ಬೆಂಗಳೂರು, ಜ.16: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಕಲಿ ವೈದ್ಯರ (Fake Doctors) ಹಾವಳಿ ಹೆಚ್ಚಾಗಿದೆ. ಎಂಬಿಬಿಎಸ್ (MBBS) ಮಾಡಿಲ್ಲ ಅಂದ್ರೂ ವೈದ್ಯರೆಂದು ಹೇಳಿಕೊಂಡು ಜನರ ಜೀವನದ ಜೊತೆ ಆಟ ಆಡುತ್ತಿದ್ದಾರೆ. ಈ ಹಿಂದೆ ಸರ್ಕಾರ ನಕಲಿ ವೈದ್ಯರಿಗೆ ಕಡಿವಾಣ ಹಾಕಲು ಅನೇಕ ಕ್ರಮಗಳನ್ನು ಕೈಗೊಂಡಿತ್ತು. ಆದರೂ ಕೂಡ ನಗರದಲ್ಲಿ ನಕಲಿ ವೈದ್ಯರು ಅಮಾಯಕರಿಗೆ ಚಿಕಿತ್ಸೆ ನೀಡಿ ಹಣ ಸಂಪಾದಿಸುತ್ತಿದ್ದಾರೆ. ಸದ್ಯ ಈಗ ಬೆಂಗಳೂರಿನಲ್ಲಿ ನಕಲಿ ವೈದ್ಯನೊಬ್ಬ ಸಿಕ್ಕಿಬಿದ್ದಿದ್ದಾನೆ. ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವ ತಾನೊಬ್ಬ ವೈದ್ಯ ಎಂದು ಹೇಳಿಕೊಂಡು ಯೂಟ್ಯೂಬ್ ನೋಡಿ ಚಿಕಿತ್ಸೆ ನೀಡಿರುವ ಘಟನೆ ನಡೆದಿದೆ.
ಸಂಜಯ್ ನಗರದ ವಾರ್ಡ್ 35, ಅಶ್ವಥ್ ನಗರದಲ್ಲಿ ಮೆಡಿಕಲ್ ಸ್ಟೋರ್ ನಲ್ಲಿಯೇ ರೋಗಿಯೊಬ್ಬರಿಗೆ ಟ್ರೀಟ್ಮೆಂಟ್ ಕೊಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೆಡ್ ಜೋನ್ ಎಂಬ ಮೆಡಿಕಲ್ ಶಾಪ್ನಲ್ಲಿ ಮಾಲೀಕ ಮಹೇಶ್ ಕುಮಾರ್ ಎಂಬುವವರು ಬಿಹಾರ ಮೂಲದ ಕರ್ಮಿಕನಿಗೆ ಚಿಕಿತ್ಸೆ ನೀಡಿ 10 ಸಾವಿರ ಬಿಲ್ ಮಾಡಿ ಹಣ ಪೀಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಹೇಶ್ ಕುಮಾರ್ ಅವರು ತಾನೊಬ್ಬ ವೈದ್ಯ ಎಂದು ಹೇಳಿಕೊಂಡು ಮೆಡಿಕಲ್ ಶಾಪ್ನಲ್ಲೇ ಬಿಹಾರ್ ಮೂಲದ ಕಾರ್ಮಿಕನಿಗೆ ಚಿಕಿತ್ಸೆ ನೀಡಿದ್ದಾರೆ. ಯೂಟ್ಯೂಬ್ ನೋಡಿ 6 ಸಲ ಟ್ರಿಟ್ಮೆಂಟ್ ನೀಡಿದ್ದಾರೆ. ಯೂಟ್ಯೂಬ್ ನೋಡ್ಕೊಂಡು ಕಾಲಿಗೆ ಬ್ಯಾಂಡೇಜ್ ಕಟ್ಟುವುದು, ಇಂಜೆಕ್ಷನ್ ಹಾಕುವುದನ್ನು ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಇಲ್ಲಿನ ಮುಸ್ಲಿಮರು ಘಜನಿ, ಘೋರಿ, ಬಾಬರ್ ಮಾನಸಿಕತೆಯಿಂದ ಹೊರ ಬರಬೇಕು: ಸಿಟಿ ರವಿ
ಮೆಡಿಕಲ್ ಶಾಪ್ ಮಾಲೀಕ ಮಹೇಶ್ ಕುಮಾರ್, ಕಳೆದ ವಾರ ಬಿಹಾರ ಮೂಲದ ಕಾರ್ಮಿಕರೊಬ್ಬರಿಗೆ ಕಾಲು ನೋವಿಗೆಂದು ಇಂಜೆಕ್ಷನ್ ಕೊಟ್ಟು ಕಾಲಿಗೆ ಬ್ಯಾಂಡೇಜ್ ಕಟ್ಟಿ ಹಣ ಪಡೆದಿದ್ದರು. ಇದನ್ನ ಗಮನಿಸಿದ ಸ್ಥಳೀಯರು ಮೆಡಿಕಲ್ ಮಾಲೀಕನನ್ನ ವಿಚಾರಿಸಿ ಸಖತ್ ಕ್ಲಾಸ್ ತೆಗದುಕೊಂಡಿದ್ದಾರೆ. ಇನ್ನೂ ಈ ಮೆಡಿಕಲ್ ಸ್ಟೋರ್ ಮಾಲೀಕ ಮಹೇಶ್, ಯೂಟ್ಯೂಬ್ನಲ್ಲಿ ನೋಡ್ಕೊಂಡು ಕಾಲಿಗೆ ಬ್ಯಾಂಡೇಜ್ ಕಟ್ಟಿ ಹೆಚ್ಚುವರಿ ದುಡ್ಡು ಪಡೆಯುತ್ತಿದ್ದ ಅಂತ ಸ್ಥಳೀಯರು ಟಿವಿ9ಗೆ ತಿಳಿಸಿದ್ದಾರೆ.
ಇನ್ನು ಈ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹೇಶ್ ಕುಮರ್, ನಾನು ಮಾನವೀಯತೆ ದೃಷ್ಟಿಯಿಂದ ಬ್ಯಾಂಡೇಜ್ ಕಟ್ಟಿ ಸಹಾಯ ಮಾಡಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಇಲ್ಲಿಯ ಸ್ಥಳೀಯ ಹುಡುಗರ ಗುಂಪು ಉದ್ದೇಶ ಪೂರ್ವಕವಾಗಿ ಆರೋಪ ಮಾಡಿದ್ದಾರೆ. ಗಲಾಟೆ ಮಾಡಲು ಬಂದಾಗ ಭಯದಿಂದ ಒಪ್ಪಿಕೊಂಡೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:32 pm, Tue, 16 January 24