ನವ ವಿವಾಹಿತ ದಂಪತಿ ನಡುವೆ ಗಲಾಟೆ: ಫಸ್ಟ್ ನೈಟ್ ನಲ್ಲಿ ನನ್ನನ್ನು ಮುಟ್ಟಿಲ್ಲ, ಗಂಡ ನಪುಂಸಕ ಎಂದ ಪತ್ನಿ
ನವ ವಿವಾಹಿತ ಜೋಡಿಗಳ ನಡುವೆ ಕೌಟುಂಬಿಕ ಕಲಹವಾಗಿದ್ದು, ಪರಸ್ಪರ ಎರಡು ಕಡೆ ಕುಟುಂಬಗಳು ಪೊಲೀಸ್ ಠಾಣೆ ಮೆಟ್ಟಿಲೇರಿವೆ. ಮದುವೆಯಾಗಿ ಹಲವು ತಿಂಗಳು ಕಳೆದರೂ ಸಹ ಸಂಸಾರ ನಡೆಸುತ್ತಿಲ್ಲ ಎನ್ನುವ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಗಲಾಟೆಯಾಗಿದೆ. ಫಸ್ಟ್ ನೈಟ್ ನಲ್ಲಿ ನನ್ನನ್ನು ಪತಿ ಮುಟ್ಟಿಲ್ಲ. ಆತ ನಪುಂಸಕ ಎಂದು ಪತ್ನಿ ಆರೋಪಿಸಿದ್ದಾಳೆ. ಮತ್ತೊಂದೆಡೆ ಮತ್ತೊಂದೆಡೆ ಹೆಂಡತಿ ಕಡೆಯವರು ಮನೆಗೆ ನುಗ್ಗಿ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಪತಿ ಸಹ ದೂರು ದಾಖಲಿಸಿದ್ದಾರೆ. ಏನಿದು ಗಂಡ-ಹೆಂಡ್ತಿ ಗಲಾಟೆ?

ಬೆಂಗಳೂರು, (ಸೆಪ್ಟೆಂಬರ್ 23): ಇತ್ತೀಚೆಗೆ ಅಂದ್ರೆ ಇದೇ ಮೇ 5ರಂದು ಚಿಕ್ಕಮಗಳೂರಿನ ಜಿಲ್ಲೆಯಲ್ಲಿ ನಡೆದಿದ್ದ ಮದುವೆ ಇದೀಗ ಮುರಿದುಬಿದ್ದಿದೆ. ನವ ವಿವಾಹಿತ ದಂಪತಿ (newly married couple) ಪರಸ್ಪರ ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹೌದು…ಮದುವೆಯಾಗಿ ಹಲವು ತಿಂಗಳು ಕಳೆದರೂ ಸಹ ಸಂಸಾರ ನಡೆಸುತ್ತಿಲ್ಲ ಎನ್ನುವ ವಿಚಾರಕ್ಕೆ ಗಂಡ ಹೆಂಡ್ತಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿ ಗಲಾಟೆ ಮಾಡಿಕೊಂಡಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವತಿ ಕಡೆಯವರು ಬೆಂಗಳೂರು ಪಶ್ಚಿಮ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣ ಕಿರುಕುಳ ದೂರು ನೀಡಿದ್ದರೆ, ಹುಡುಗನ ಕಡೆಯವರು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಯುವತಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆಗಸ್ಟ್ 17 ರಂದು ಪ್ರವೀಣನ ಗೋವಿಂದರಾಜನಗರ ಮನೆಗೆ ನುಗ್ಗಿ ಪತ್ನಿ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ. ಗಲಾಟೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಪ್ರವೀಣ್, ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಮಗಳ ಮುಂದೆಯೇ ಪತ್ನಿಗೆ 11 ಬಾರಿ ಇರಿದು ಕೊಂದ ಪತಿ: ಇಷ್ಟಪಟ್ಟು ಮದ್ವೆಯಾಗಿದ್ದವಳನ್ನ ಹತ್ಯೆಗೈದಿದ್ಯಾಕೆ?
ಇತ್ತ ಗಂಡ ಹಾಗೂ ಸಂಬಂಧಿಕರ ವಿರುದ್ಧ ಪಶ್ಚಿಮ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿಯಿಂದ ವರದಕ್ಷಿಣೆ ಕಿರುಕುಳ ಕೇಸ್ ಕೂಡ ದಾಖಲಾಗಿದೆ. ಅಲ್ಲದೇ ಮದುವೆಯಾದ ಬಳಿಕ ಫಸ್ಟ್ ನೈಟ್ ನಲ್ಲಿ ಮುಟ್ಟಲು ಹಿಂದೇಟು ಹಾಕಿದ್ದಾನೆ ಎಂದು ಪತ್ನಿ ಆರೋಪ ಮಾಡಿದ್ದಾಳೆ.
ಪ್ರವೀಣ್ ಕಳೆದ ಮೇ5ರಂದು ತಿಂಗಳಲ್ಲಿ ಚಿಕ್ಕಮಗಳೂರು ಮೂಲದ ಯುವತಿಯನ್ನ ವಿವಾಹವಾಗಿದ್ದ. ಮದುವೆಯಾಗಿ ಫಸ್ಟ್‌ನೈಟ್ ವೇಳೆ ತನನ್ನು ಮುಟ್ಟಿಲ್ಲ. ಆತ ನಪುಂಸಕ ಎಂದು ಪತ್ನಿ ಗಂಡನ ವಿರುದ್ಧ ಗಂಭೀರ ಆರೋಪ ಮಾಡಿ ಗಲಾಟೆ ಮಾಡಿದ್ದಾರೆಂದು ತಿಳಿದುಬಂದಿದೆ. ಸದ್ಯ ಎರಡು ಕುಟುಂಬದ ಕಡೆಯಿಂದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಇದುವರೆಗೂ ಪೊಲೀಸರು ಯಾರನ್ನೂ ಸಹ ಬಂಧಿಸಿಲ್ಲ.
Published On - 9:54 pm, Tue, 23 September 25




