ಕೊರೊನಾಗೆ ಬೆಚ್ಚಿಬಿದ್ದ ಬಿಎಂಸಿ ಕಾಲೇಜ್, ಐವರು ವೈದ್ಯ ವಿದ್ಯಾರ್ಥಿಗಳಿಗೆ ಕೊರಾನಾ ಶಂಕೆ
ಬೆಂಗಳೂರು: ನಗರದ ಮೆಡಿಕಲ್ ಕಾಲೇಜಿನ ಐವರು ಪಿಜಿ ವೈದ್ಯ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆಯಾ ಎನ್ನೋ ಅನುಮಾನ ಶುರುವಾಗಿದೆ. ಇದು ಪ್ರತಿಷ್ಟಿತ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ತಳಮಳಕ್ಕೆ ಕಾರಣವಾಗಿದೆ. ಬಿಎಮ್‌ಸಿ ಕಾಲೇಜಿನ ಪಿಜಿ ವೈದ್ಯ ವಿದ್ಯಾರ್ಥಿಗಳನ್ನು ವಿಕ್ಟೋರಿಯಾ ಆಸ್ಪತ್ರೆಯ ಕಂಟ್ರೋಲ್ ರೂಮ್‌ನಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲಾಗಿತ್ತು. ಅಲ್ಲಿ ಈ ವಿದ್ಯಾರ್ಥಿಗಳು ರೋಗಿಗಳ ಎಂಟ್ರಿ ಮತ್ತು ಡಿಸ್ಚಾರ್ಜ್ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬೆಂಗಳೂರು ಮೆಡಿಕಲ್ ಕಾಲೇಜ್‌ನ ಡೀನ್ ಡಾಕ್ಟರ್ ಜಯಂತಿಯವರಂದಿಗೆ ಸಂಪರ್ಕವಿತ್ತು ಎನ್ನಲಾಗಿದೆ. […]

ಬೆಂಗಳೂರು: ನಗರದ ಮೆಡಿಕಲ್ ಕಾಲೇಜಿನ ಐವರು ಪಿಜಿ ವೈದ್ಯ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆಯಾ ಎನ್ನೋ ಅನುಮಾನ ಶುರುವಾಗಿದೆ. ಇದು ಪ್ರತಿಷ್ಟಿತ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ತಳಮಳಕ್ಕೆ ಕಾರಣವಾಗಿದೆ.
ಬಿಎಮ್‌ಸಿ ಕಾಲೇಜಿನ ಪಿಜಿ ವೈದ್ಯ ವಿದ್ಯಾರ್ಥಿಗಳನ್ನು ವಿಕ್ಟೋರಿಯಾ ಆಸ್ಪತ್ರೆಯ ಕಂಟ್ರೋಲ್ ರೂಮ್‌ನಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲಾಗಿತ್ತು. ಅಲ್ಲಿ ಈ ವಿದ್ಯಾರ್ಥಿಗಳು ರೋಗಿಗಳ ಎಂಟ್ರಿ ಮತ್ತು ಡಿಸ್ಚಾರ್ಜ್ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬೆಂಗಳೂರು ಮೆಡಿಕಲ್ ಕಾಲೇಜ್‌ನ ಡೀನ್ ಡಾಕ್ಟರ್ ಜಯಂತಿಯವರಂದಿಗೆ ಸಂಪರ್ಕವಿತ್ತು ಎನ್ನಲಾಗಿದೆ. ಹಾಗೇನೇ ಡೀನ್ ಡಾ. ಜಯಂತಿ ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎನ್ನಲಾಗ್ತಿದೆ.
ಹೀಗಾಗಿ ಡೀನ್ ಅವರಿಂದ ಈ ವಿದ್ಯಾರ್ಥಿಗಳಿಗೆ ಸೋಂಕು ಹರಡಿರಬಹುದಾ ಎಂಬ ಶಂಕೆಯನ್ನ ವ್ಯಕ್ತಪಡಿಸಲಾಗ್ತಿದೆ. ಇಷ್ಟೇ ಅಲ್ಲ ಇವರೊಂದಿಗೆ ಕಾಲೇಜ್‌ನ ಇತರ ವಿದ್ಯಾರ್ಥಿಗಳೂ ಡೀನ್ ಜೊತೆ ಸಂಪರ್ಕದಲ್ಲಿದ್ದರು. ಹೀಗಾಗಿ ಈಗ ಬೆಂಗಳೂರು ಮೆಡಿಕಲ್ ಕಾಲೇಜ್‌ನಲ್ಲಿ ಆತಂಕ ಶುರವಾಗಿದೆ.
Published On - 1:47 pm, Sat, 20 June 20



