ಅದೃಷ್ಟ ಖುಲಾಯಿಸುತ್ತೆ ಅಂತಾ ಕೃಷ್ಣಯ್ಯ ಶೆಟ್ಟಿ ವಾಸವಿದ್ದ ಬಾಡಿಗೆ ಮನೆಯಲ್ಲಿ ಬಿಎಸ್‌ವೈ ಆಪ್ತ ಉಮೇಶ್ ವಾಸ: ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ!

ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ವಾಸವಿದ್ದ ಮನೆಯಲ್ಲಿಯೇ ಬಿಎಸ್​ವೈ ಪಿಎ ಆಗಿದ್ದ ಉಮೇಶ್ ಕೂಡ ಬಾಡಿಗೆಗಿದ್ದರು. ಇದಕ್ಕೆ ಕಾರಣ ಉಮೇಶ್ ಅವರಲ್ಲಿದ್ದ ಅದೃಷ್ಟ ಕುರಿತಾದ ನಂಬಿಕೆ. ಆದರೆ ಕೃಷ್ಣಯ್ಯ ಶೆಟ್ಟಿ ಅವ್ಯವಹಾರದಲ್ಲಿ ಜೈಲು ಸೇರಿದ್ದರು. ಇದೀಗ ಕಾಕತಾಳೀಯವೆಂಬಂತೆ ಉಮೇಶ್​ಗೂ ಕಂಟಕ ಎದುರಾಗಿದೆ.

ಅದೃಷ್ಟ ಖುಲಾಯಿಸುತ್ತೆ ಅಂತಾ ಕೃಷ್ಣಯ್ಯ ಶೆಟ್ಟಿ ವಾಸವಿದ್ದ ಬಾಡಿಗೆ ಮನೆಯಲ್ಲಿ ಬಿಎಸ್‌ವೈ ಆಪ್ತ ಉಮೇಶ್ ವಾಸ: ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ!
ಉಮೇಶ್, ಎಸ್.ಎನ್. ಕೃಷ್ಣಯ್ಯ ಶೆಟ್ಟಿ
Follow us
TV9 Web
| Updated By: shivaprasad.hs

Updated on:Oct 08, 2021 | 9:34 AM

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಉಮೇಶ್ ಅವರ ರಾಜಾಜಿ ನಗರದಲ್ಲಿರುವ ಭಾಷ್ಯಂ ಸರ್ಕಲ್​ನಲ್ಲಿರುವ ಮನೆ ಮೇಲೆ ನಿನ್ನೆ (ಅಕ್ಟೋಬರ್ 7) ಐಟಿ ದಾಳಿ ನಡೆದಿತ್ತು. ಇಂದು ಮುಂಜಾನೆಯವರೆಗೂ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಹಲವು ಕಡತಗಳನ್ನು ವಶಪಡಿಸಿಕೊಂಡು ಮರಳಿದ್ದಾರೆ. ಈ ನಡುವೆ ಉಮೇಶ್ ಕುರಿತ ಒಂದೊಂದೇ ಮಾಹಿತಿಗಳು ಹೊರಬರುತ್ತಿದೆ. ಸ್ವಂತ ಮನೆ ಕಟ್ಟಿಸಿದ್ದರೂ ಕೂಡ, ಅವರು ಭಾಷ್ಯಂ ಸರ್ಕಲ್​ನ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇದಕ್ಕೆ ಕಾರಣ ಆ ಮನೆಯಿಂದ ಅದೃಷ್ಟ ಖುಲಾಯಿಸುತ್ತದೆ ಎಂಬ ನಂಬಿಕೆ ಅವರಲ್ಲಿತ್ತು.

ಈ ಹಿಂದೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮತ್ತು ಅವರ ಸಹೋದರ ಪ್ರಭಾಕರ್ ಶೆಟ್ಟಿ ವಾಸವಿದ್ದ ಮನೆಯಲ್ಲಿಯೇ ಉಮೇಶ್ ಕೂಡ ಬಾಡಿಗೆಗಿದ್ದರು. ಮನೆಯ ಈಶಾನ್ಯ ಭಾಗದಲ್ಲಿ ಸ್ಟೇರ್ ಕೇಸ್ ಹೊಂದಿರುವುದು ಅದೃಷ್ಟ ತರುವುದೆಂಬ ನಂಬಿಕೆ ಅವರಲ್ಲಿತ್ತು. ಅದೇ ಮನೆಯ ಕೆಳಭಾಗದಲ್ಲಿ ಈ ಹಿಂದೆ ರಿಯಲ್ ಎಸ್ಟೇಟ್ ಕಚೇರಿ ಇತ್ತು. ಕೃಷ್ಣಯ್ಯ ಶೆಟ್ಟಿ ಮತ್ತು ಸೋದರ ಪ್ರಭಾಕರ್ ಶೆಟ್ಟಿ 90 ರ ದಶಕದಲ್ಲಿ ಕಾಮಧೇನು ಎಂಟರ್ ಪ್ರೈಸಸ್ ರಿಯಲ್ ಎಸ್ಟೇಟ್ ನಡೆಸುತ್ತಿದ್ದರು.

ಆದರೆ ಆ ಮನೆ ಅದೃಷ್ಟ ತಂದಷ್ಟೇ ವೇಗವಾಗಿ ದುರಾದೃಷ್ಟ ತಂದೊಡ್ಡಿತ್ತು. ಕೃಷ್ಣಯ್ಯ ಶೆಟ್ಟಿ ಕರ್ನಾಟಕ ರಾಜ್ಯ ಗೃಹ‌ ಮಂಡಳಿ ಅವ್ಯವಹಾರದಲ್ಲಿ ಜೈಲು ಸೇರಿದ್ದರು. ಕಾಕತಾಳೀಯವೆಂಬಂತೆ ಇದೀಗ ಬಿಎಸ್​​ವೈ ಪಿಎ ಉಮೇಶ್​ಗೂ ಸಂಕಷ್ಟ ಎದುರಾಗಿದೆ. ಕೆಎಸ್​ಆರ್​ಟಿಸಿ ಕಂಡಕ್ಟರ್ ಮತ್ತು ಡ್ರೈವರ್ ಆಗಿದ್ದ ಉಮೇಶ್, ಮಾಜಿ ಸಿಎಂ ಬಿಎಸ್​​ವೈ ಪಿಎ ಆದ ಬಳಿಕ ಕೋಟ್ಯಂತರ ಮೌಲ್ಯದ ಆಸ್ತಿ-ಪಾಸ್ತಿ ಒಡೆಯರಾಗಿದ್ದಾರೆ. ಇದೇ ಕಾರಣಕ್ಕೆ ಹಾಗೂ ನೀರಾವರಿ ಇಲಾಖೆಯಲ್ಲಿನ ಟೆಂಡರ್ ಕುರಿತಾದ ಕಾರಣಗಳಿಂದ ಅವರ ಮನೆಯ ಮೇಲೆ ಐಟಿ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಎಸ್‌ವೈ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ ಅಂತ್ಯ: ಬೆಂಗಳೂರಿನ ರಾಜಾಜಿ ನಗರದಲ್ಲಿರುವ ಭಾಷ್ಯಂ ಸರ್ಕಲ್‌ನಲ್ಲಿರುವ ಉಮೇಶ್ ಮನೆಯ ಮೇಲಿನ ಐಟಿ ದಾಳಿ ಅಂತ್ಯವಾಗಿದೆ. ನಿನ್ನೆ ಬೆಳಗ್ಗೆ 6ರಿಂದ ಇಂದು ಬೆಳಗ್ಗೆ 6ರವರೆಗೆ ನಡೆದ ಸತತ 24 ಗಂಟೆಗಳ ಐಟಿ ಅಧಿಕಾರಿಗಳ ಕಾರ್ಯಾಚರಣೆ ಮುಗಿದಿದ್ದು, ದಾಖಲಾತಿಗಳು, ಬ್ಯಾಂಕ್ ಪಾಸ್ ಬುಕ್​ಗಳು,ಪೆನ್​​ಡ್ರೈವ್, ಹಾರ್ಡ್ ಡಿಸ್ಕ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ ನೀರಾವರಿ ಇಲಾಖೆಗೆ ಸಂಬಂಧಪಟ್ಟ ಕೆಲ ಕಡತಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇಂದು ಅಥವಾ ನಾಳೆ ವಶಕ್ಕೆ ಪಡೆದ ಸಂಪೂರ್ಣ ದಾಖಲೆಗಳ ಪರಿಶೀಲನೆ ನಡೆಯಲಿದ್ದು, ಹಣ ವರ್ಗಾವಣೆ ಸೇರಿದಂತೆ ಮತ್ತಿತರ ಮಾಹಿತಿಯನ್ನು ಐಟಿ ಅಧಿಕಾರಿಗಳು ಸಂಗ್ರಹಿಸಲಿದ್ದಾರೆ. ಆ ಬಳಿಕ ಸ್ಪಷ್ಟೀಕರಣ ಕೇಳಿ ವಿಚಾರಣೆಗೆ ಹಾಜರಾಗುವಂತೆ ಉಮೇಶ್​ಗೆ ಐಟಿ ನೋಟಿಸ್ ನೀಡುವ ಸಾಧ್ಯತೆ ಇದೆ.

ದಾಳಿ ಪೂರ್ಣವಾದರೂ ಮನೆಯಿಂದ ಹೊರಬರದ ಉಮೇಶ್: ಬಿಎಸ್‌ವೈ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ ಮುಕ್ತಾಯಗೊಂಡಿದೆ. ಬೆಂಗಳೂರಿನ ರಾಜಾಜಿ ನಗರದ ಭಾಷ್ಯಂ ಸರ್ಕಲ್‌ನಲ್ಲಿರುವ ಉಮೇಶ್ ಮನೆಯ ಮೇಲೆ ನಿನ್ನೆ ಮುಂಜಾನೆ ಆರು ಗಂಟೆಯಿಂದ ಇಂದು ಮುಂಜಾನೆ 6 ಗಂಟೆಯವರೆಗೆ ಪರಿಶೀಲನೆ ನಡೆಸಲಾಗಿತ್ತು. ಪರಿಶೀಲನೆ ಮುಗಿಸಿ ಅಧಿಕಾರಿಗಳು ತೆರಳಿದ್ದರೂ ಕೂಡ, ಈವರೆಗೂ ಎಂ.ಆರ್. ಉಮೇಶ್ ಮನೆಯಿಂದ ಹೊರಬಂದಿಲ್ಲ.

ಇದನ್ನೂ ಓದಿ:

ಐಟಿ ದಾಳಿ ಹಿನ್ನೆಲೆ ಸಿಎಂ ಕಚೇರಿ ಡ್ಯೂಟಿಯಿಂದ ಬಿಎಸ್‌ವೈ ಆಪ್ತ ಉಮೇಶ್​ಗೆ ಗೇಟ್​ ಪಾಸ್​ ನೀಡಿದ ಸಿಎಂ ಬೊಮ್ಮಾಯಿ

ರಾಹುಲ್ ಎಂಟರ್​ಪ್ರೈಸಸ್, ಉಮೇಶ್ ಮನೆ ಮೇಲಿನ ಐಟಿ ದಾಳಿ ಅಂತ್ಯ; ಹಲವು ಕಡತಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು

Published On - 9:04 am, Fri, 8 October 21

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ