ಬೆಂಗಳೂರಿನ ತಾಜ್ವೆಸ್ಟ್ಎಂಡ್ ಹೋಟೆಲ್ನಲ್ಲಿ ಜಿ-20 ಸಭೆ: ಡ್ರೋನ್ ಸೇರಿದಂತೆ ಯಾವುದೇ ರೀತಿ ಹಾರಾಟಕ್ಕೆ ನಿಷೇಧ
G-20 meeting: ಬೆಂಗಳೂರಿನ ತಾಜ್ವೆಸ್ಟ್ಎಂಡ್ ಹೋಟೆಲ್ನಲ್ಲಿ ಜಿ-20 ಸಭೆ ಹಿನ್ನೆಲೆ ಆಗಸ್ಟ್ 16ರಿಂದ 20ರವರೆಗೆ ‘ನೋ ಫ್ಲೈ ಜೋನ್’ ಎಂದು ಘೋಷಣೆ ಮಾಡಲಾಗಿದ್ದು, ತಾಜ್ವೆಸ್ಟ್ಎಂಡ್ ಹೋಟೆಲ್ನ 1 ಕಿ.ಮೀ. ವ್ಯಾಪ್ತಿಯಲ್ಲಿ ಏರ್‌ಕ್ರಾಫ್ಟ್, ಡ್ರೋನ್ ಸೇರಿದಂತೆ ಯಾವುದೇ ರೀತಿ ಹಾರಾಟಕ್ಕೆ ನಿಷೇಧ ಹೇರಲಾಗಿದೆ.

ಬೆಂಗಳೂರು, ಆಗಸ್ಟ್ 14: ಬೆಂಗಳೂರಿನ ತಾಜ್ವೆಸ್ಟ್ಎಂಡ್ ಹೋಟೆಲ್ನಲ್ಲಿ ಜಿ-20 ಸಭೆ (G-20 meeting) ಹಿನ್ನೆಲೆ ಆಗಸ್ಟ್ 16ರಿಂದ 20ರವರೆಗೆ ‘ನೋ ಫ್ಲೈ ಝೋನ್’ ಎಂದು ಘೋಷಣೆ ಮಾಡಲಾಗಿದ್ದು, ತಾಜ್ವೆಸ್ಟ್ಎಂಡ್ ಹೋಟೆಲ್ನ 1 ಕಿ.ಮೀ. ವ್ಯಾಪ್ತಿಯಲ್ಲಿ ಏರ್‌ಕ್ರಾಫ್ಟ್, ಡ್ರೋನ್ ಸೇರಿದಂತೆ ಯಾವುದೇ ರೀತಿ ಹಾರಾಟಕ್ಕೆ ನಿಷೇಧ ಹೇರಲಾಗಿದೆ. ದೇಶ ವಿದೇಶಿ ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಸಭೆಯಲ್ಲಿ ಭಾಗಿಯಾಲಿರುವ ದೇಶ-ವಿದೇಶಿ ಗಣ್ಯರು ತಾಜ್ವೆಸ್ಟ್ಎಂಡ್ ಹೋಟೆಲ್ನಲ್ಲಿ ತಂಗಲಿದ್ದಾರೆ.
ಇತ್ತೀಚೆಗೆ ಜುಲೈ 6 ಮತ್ತು 7ರಂದು ಸಹ ಬೆಂಗಳೂರಿನ ತಾಜ್ವೆಸ್ಟ್ಎಂಡ್ ಹೋಟೆಲ್ನಲ್ಲಿ ಜಿ 20 ಶೃಂಗಸಭೆ ನಡೆದಿತ್ತು. ದೇಶ ವಿದೇಶದ ಹಲವಾರು ಗಣ್ಯರು ಭಾಗವಹಿಸಿದ್ದರು. ಜಿ20 ಶೃಂಗಸಭೆಯನ್ನು ಸೆಪ್ಟೆಂಬರ್ ತಿಂಗಳಲ್ಲಿ ನವದೆಹಲಿಯಲ್ಲಿ ಚಾಲನೆ ನೀಡಲಾಗಿತ್ತು. ಬಳಿಕ ಕರ್ನಾಟಕದ ಬೆಂಗಳೂರು (ಜುಲೈ 6 ಮತ್ತು 7), ಹಂಪಿ (ಜುಲೈ 9ರಿಂದ 16ರ ವರೆಗೆ), ಮೈಸೂರು (ಆಗಸ್ಟ್ 1 ರಿಂದ 2ರ ವರೆಗೆ) ಮತ್ತು ಇದೀಗ ಮತ್ತೊಮ್ಮೆ ಆಗಸ್ಟ್ 16ರಿಂದ 20ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
ದೇಶ ವಿದೇಶಗಳಲ್ಲೂ ಪ್ರಸಿದ್ದಿ ಆಗಿರುವ ವಿಶ್ವ ವಿಖ್ಯಾತ ಪರಂಪರೆಯ ತಾಣವಾಗಿರುವ ಹಂಪಿಯಲ್ಲಿ ಇತ್ತೀಚೆಗೆ ಜುಲೈ 9ರಿಂದ 16ವರೆಗೆ ಜಿ-20 ಶೃಂಗಸಭೆಗೆ ನಡೆದಿತ್ತು. ಹಿಂದೆಂದೂ ಕಾಣದಷ್ಟು ಅಭಿವೃದ್ದಿ ಕಾರ್ಯಗಳನ್ನ ಜಿ-20 ನಿಮಿತ್ಯ ಹಂಪಿಯಲ್ಲಿ ಕೈಗೊಳ್ಳಲಾಗಿತ್ತು.
ದೇಶದಲ್ಲಿ ಮೊಟ್ಟ ಮೊದಲ ಭಾರಿಗೆ ಜಿ-20 ಶೃಂಗಸಭೆ ನಡೆದಿತ್ತು. ಜಿ-20 ಶೃಂಗಸಭೆಗೆ ಈ ಭಾರಿಯ ಅಧ್ಯಕ್ಷೀಯ ರಾಷ್ಟ್ರ ಭಾರತವಾಗಿತ್ತು. ಅದಕ್ಕಾಗೇ ಅತೀ ಮುಖ್ಯವಾದ ಜಿ-20 ಶೃಂಗಸಭೆಯ ಮೂರನೇ ಪ್ರಮುಖ ಸಭೆ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ 9ರಿಂದ 16ರವರೆಗೆ ನಡೆದಿತ್ತು. ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೂರು ದಿನಗಳ ಕಾಲ ಅಂತರರಾಷ್ಟ್ರೀಯ ಮಟ್ಟದ ಹಲವಾರು ಉನ್ನತ ಸಭೆಗಳು ಹಂಪಿಯಲ್ಲಿ ನಡೆದಿತ್ತು.
ಇದನ್ನೂ ಓದಿ: ಬೆಂಗಳೂರು: ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳ ತೆರವಿಗೆ ಬಿಬಿಎಂಪಿ ಆದೇಶ
ಜಿ-20 ಶೃಂಗಸಭೆ ಹಿನ್ನಲೆಯಲ್ಲಿ ಹಂಪಿ ಪ್ರದೇಶದ ಸುತ್ತಮುತ್ತಲಿನ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿತ್ತು. ಸ್ಮಾರಕಗಳ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗಿತ್ತು. 43 ರಾಷ್ಟ್ರಗಳ 20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿರುವುದರಿಂದ ಹಂಪಿಯ ಸುತ್ತಮುತ್ತ ಎಲ್ಲೆಡೆ ಸಿಸಿ ಕ್ಯಾಮಾರಾಗಳ ಅಳವಡಿಸಿಲಾಗಿದ್ದು, ವಿಶ್ವ ವಿಖ್ಯಾತ ಹಂಪಿ ಜಿ-20 ಶೃಂಗಸಭೆಯಲ್ಲಿ ನವವಧುವಿನಂತೆ ಶೃಂಗಾರಗೊಂಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:31 pm, Mon, 14 August 23



