AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾನವಿ ಕೇಸ್​​: ಕೋರ್ಟ್​​ ಮೆಟ್ಟಿಲೇರಿದ ಸೂರಜ್​​ ಕುಟುಂಬ; ಕಾರಣ ಇಲ್ಲಿದೆ

ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣದಲ್ಲಿ ಪತಿ ಸೂರಜ್ ಕುಟುಂಬ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದೆ. ಗಾನವಿ ಹಿಂದೆ ಹರ್ಷ ಎಂಬಾತನನ್ನು ಪ್ರೀತಿಸುತ್ತಿದ್ದಳು, ಮದುವೆ ನಂತರ ಪ್ರೀತಿ ವಿಚಾರವನ್ನು ಆಕೆ ಸೂರಜ್‌ಗೆ ತಿಳಿಸಿದ್ದಳು. ಹೀಗಾಗಿಯೇ ಹನಿಮೂನ್​ನಿಂದ ಅವರು ಅರ್ಧಕ್ಕೇ ವಾಪಸ್​​ ಆಗಿದ್ದು, ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಕುಟುಂಬಸ್ಥರ ಆರೋಪಗಳಿಗೆ ನೊಂದು ಸೂರಜ್​​ ಕೂಡ ಪ್ರಾಣ ಬಿಟ್ಟಿದ್ದಾರೆ ಎಂದು ಕೋರ್ಟ್​​ಗೆ ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.

ಗಾನವಿ ಕೇಸ್​​: ಕೋರ್ಟ್​​ ಮೆಟ್ಟಿಲೇರಿದ ಸೂರಜ್​​ ಕುಟುಂಬ; ಕಾರಣ ಇಲ್ಲಿದೆ
ಗಾನವಿ ಮತ್ತು ಸೂರಜ್​​
Ramesha M
| Edited By: |

Updated on: Dec 29, 2025 | 5:23 PM

Share

ಬೆಂಗಳೂರು, ಡಿಸೆಂಬರ್​​ 29: ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಗಾನವಿ ಪತಿ ಸೂರಜ್​​ ಸಹೋದರ ಮತ್ತು ತಾಯಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿದಾರರಾದ ಸಂಜಯ್ ಮತ್ತು ಜಯಂತಿ ಪರ ವಕೀಲೆ ಡಾ.ವಂದನಾ ಪಿ.ಎಲ್ ಮನವಿ ಸಲ್ಲಿಸಿದ್ದಾರೆ.

ವರನ ಕಡೆಯಿಂದಲೇ 60 ಲಕ್ಷ ವೆಚ್ಚ ಮಾಡಿ ಮದುವೆ ಮಾಡಲಾಗಿತ್ತು. ಆರಂಭದ ಹೊಂದಾಣಿಕೆ ಕೊರತೆಯಿಂದಾಗಿ ದೈಹಿಕ ಸಂಬಂಧವಿರಲಿಲ್ಲ. ಡಿ.22ಕ್ಕೆ ತವರು ಮನೆಗೆ ತೆರಳಿದ್ದ ಗಾನವಿ ಡಿ.25ಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಗೆ ಸೂರಜ್​​ ಮನೆಯವರಿಂದ ಯಾವುದೇ ಕಿರುಕುಳವಾಗಿಲ್ಲ. ಮಾನಸಿಕ ವೈದ್ಯರೊಂದಿಗೆ ಸೂರಜ್ ಸಮಾಲೋಚನೆ ನಡೆಸಲಾಗಿದೆ. ಯಾವುದೇ ಮಾನಸಿಕ, ವೈದ್ಯಕೀಯ ಕಾರಣಗಳಿಲ್ಲ. ಹೀಗಿದ್ದರೂ ಅವರ ಕುಟುಂಬದ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ. ಅಪಮಾನ, ನಿಂದನೆ ತಡೆಯದೇ ಸೂರಜ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಅರ್ಜಿದಾರರ ಪರ ವಕೀಲರು ಕೋರ್ಟ್​​ಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಗಾನವಿ-ಸೂರಜ್ ಪ್ರಕರಣ; ಹನಿಮೂನ್‌ನಿಂದ ಅರ್ಧಕ್ಕೆ ಬಂದಿದ್ಯಾಕೆ? ಸ್ಫೋಟಕ ರಹಸ್ಯ ಬಯಲು

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ನಿನ್ನೆಯಷ್ಟೇ ಹೊಸ ಟ್ವಿಸ್ಟ್​​ ಸಿಕ್ಕಿತ್ತು. ಗಾನವಿ ಈ ಹಿಂದೆ ಹರ್ಷ ಎಂಬಾತನನ್ನ ಪ್ರೀತಿ ಮಾಡುತ್ತಿದ್ದಳು. ಆತನನ್ನೆ ಮದುವೆಯಾಗ್ಬೇಕು ಎಂದು ನಿರ್ಧರಿಸಿದ್ದಳು. ಆದರೆ ಮನೆಯವರ ಒತ್ತಾಯಕ್ಕೆ ಗಾನವಿ ಸೂರಜ್​​ನ ಮದುವೆಯಾಗಿದ್ದಳು. ಶ್ರೀಲಂಕಾಗೆ ಹನಿಮೂನ್​​ಗೆ ಹೋದಾಗ ಹರ್ಷ ಜೊತೆಗಿನ ಪ್ರೀತಿ ವಿಚಾರವನ್ನು ಆಕೆಯೇ ಸೂರಜ್​​ಗೆ ತಿಳಿಸಿದ್ದಳು. ಹೀಗಾಗಿಯೇ ಹನಿಮೂನ್​​ಗೆ ತೆರಳಿದ್ದ ಅವರು ಅರ್ಧಕ್ಕೇ ಬೆಂಗಳೂರಿಗೆ ಹಿಂದಿರುಗಿದ್ದರು. ನಂತರ ತವರಿಗೆ ತೆರಳಿದ್ದ ಆಕೆ ಅಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆದರೆ ಆರೋಪವನ್ನು ನಮ್ಮ ಕುಟುಂಬದ ವಿರುದ್ಧ ಹೊರಿಸಲಾಗಿದೆ ಎಂದು ಸೂರಜ್​​ ಭಾವ ರಾಜ್​​ಕುಮಾರ್​​ ವಿದ್ಯಾರಣ್ಯಪುರ ಪೊಲೀಸ್​​ ಠಾಣೆಗೆ ದೂರು ನೀಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಎಂಥ ಬೌಲಿಂಗ್​ಯ್ಯ ನಿಂದು... ಬೌಲರ್-ಬ್ಯಾಟರ್​ ನಡುವೆ ಮಾತಿನ ಚಕಮಕಿ
ಎಂಥ ಬೌಲಿಂಗ್​ಯ್ಯ ನಿಂದು... ಬೌಲರ್-ಬ್ಯಾಟರ್​ ನಡುವೆ ಮಾತಿನ ಚಕಮಕಿ
ಡಾ. ರಾಜ್​ಕುಮಾರ್ 20ನೇ ವರ್ಷದ ಪುಣ್ಯಸ್ಮರಣೆ: ಅಭಿಮಾನಿಗಳಿಗೆ ಅನ್ನದಾನ
ಡಾ. ರಾಜ್​ಕುಮಾರ್ 20ನೇ ವರ್ಷದ ಪುಣ್ಯಸ್ಮರಣೆ: ಅಭಿಮಾನಿಗಳಿಗೆ ಅನ್ನದಾನ
ಅಮೆರಿಕದಲ್ಲಿ ಸ್ವಾಮಿ ವಿವೇಕಾನಂದರ ಪೂರ್ಣ ಗಾತ್ರದ ಪ್ರತಿಮೆ ಅನಾವರಣ
ಅಮೆರಿಕದಲ್ಲಿ ಸ್ವಾಮಿ ವಿವೇಕಾನಂದರ ಪೂರ್ಣ ಗಾತ್ರದ ಪ್ರತಿಮೆ ಅನಾವರಣ
ಡಾ. ರಾಜ್​ಕುಮಾರ್ ಇಲ್ಲದೇ 20 ವರ್ಷ ಆಗಿದೆ ಅಂತ ನಂಬೋಕೆ ಆಗಲ್ಲ: ರಾಘಣ್ಣ
ಡಾ. ರಾಜ್​ಕುಮಾರ್ ಇಲ್ಲದೇ 20 ವರ್ಷ ಆಗಿದೆ ಅಂತ ನಂಬೋಕೆ ಆಗಲ್ಲ: ರಾಘಣ್ಣ
ಕಸದ ರಾಶಿಗೆ ರಸ್ತೆ, ಫುಟ್​ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ
ಕಸದ ರಾಶಿಗೆ ರಸ್ತೆ, ಫುಟ್​ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ
ಫೋನ್ ಎತ್ಕೊಂಡು ಹೋಗ್ಬಿಡು: ಟಿಮ್ ಡೇವಿಡ್ ವಿಡಿಯೋ ವೈರಲ್
ಫೋನ್ ಎತ್ಕೊಂಡು ಹೋಗ್ಬಿಡು: ಟಿಮ್ ಡೇವಿಡ್ ವಿಡಿಯೋ ವೈರಲ್
ನವಜಾತ ಶಿಶುವಿನ ಜತೆ ಹೈಕೋರ್ಟ್​ನ 5ನೇ ಮಹಡಿಯಿಂದ ಹಾರಲು ಮಹಿಳೆ ಯತ್ನ
ನವಜಾತ ಶಿಶುವಿನ ಜತೆ ಹೈಕೋರ್ಟ್​ನ 5ನೇ ಮಹಡಿಯಿಂದ ಹಾರಲು ಮಹಿಳೆ ಯತ್ನ
ಬಾಲಕಿ ಸಾವಿನ ಬಳಿಕವೂ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಪ್ರವಾಸಿಗರ ಹುಚ್ಚಾಟ
ಬಾಲಕಿ ಸಾವಿನ ಬಳಿಕವೂ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಪ್ರವಾಸಿಗರ ಹುಚ್ಚಾಟ
ಸ್ವಪಕ್ಷ ಸಚಿವರ ಕಾರ್ಯವೈಖರಿಗೆ ಶಾಸಕ ರವಿಕುಮಾರ್ ಗಣಿಗ ಗರಂ
ಸ್ವಪಕ್ಷ ಸಚಿವರ ಕಾರ್ಯವೈಖರಿಗೆ ಶಾಸಕ ರವಿಕುಮಾರ್ ಗಣಿಗ ಗರಂ
ತಂದೆಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಮಗಳು
ತಂದೆಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಮಗಳು