AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶ ವಿಸರ್ಜನೆ ಸ್ಥಳ ನಿಗದಿ ಮಾಡಿದ ಬಿಬಿಎಂಪಿ: ಕಲ್ಯಾಣಿ, ಸಂಚಾರಿ ಟ್ಯಾಂಕ್‌ಗಳ ವಿವರ ಇಲ್ಲಿದೆ

ಬೆಂಗಳೂರಿನಲ್ಲಿ 2025ರ ಗಣೇಶ ಚತುರ್ಥಿ ಹಬ್ಬಕ್ಕೆ ಬಿಬಿಎಂಪಿ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. 41 ತಾತ್ಕಾಲಿಕ ಕಲ್ಯಾಣಿಗಳು ಮತ್ತು 489 ಸಂಚಾರಿ ಟ್ಯಾಂಕ್‌ಗಳನ್ನು ಮೂರ್ತಿ ವಿಸರ್ಜನೆಗಾಗಿ ಏರ್ಪಡಿಸಲಾಗಿದೆ. ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು 75 ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ.

ಗಣೇಶ ವಿಸರ್ಜನೆ ಸ್ಥಳ ನಿಗದಿ ಮಾಡಿದ ಬಿಬಿಎಂಪಿ: ಕಲ್ಯಾಣಿ, ಸಂಚಾರಿ ಟ್ಯಾಂಕ್‌ಗಳ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on:Aug 23, 2025 | 10:31 PM

Share

ಬೆಂಗಳೂರು, ಆಗಸ್ಟ್​ 23: ಗಣೇಶ ಚತುರ್ಥಿಗೆ (Ganesh Chaturthi 2025) ಇನ್ನೇನು ಕೆಲವೇ ದಿನಗಳಿದ್ದು, ಬೆಂಗಳೂರಿನಲ್ಲಿ (Bengaluru) ಹಬ್ಬದ ಆಚರಣೆಗೆ ಸಾರ್ವಜನಿಕ ಗಣೇಶ ಮಂಡಳಿಗಳು ಮತ್ತು ಮನೆಯಲ್ಲಿ ಸಿದ್ಧತೆ ಬರದಿಂದ ಸಾಗುತ್ತಿದೆ. ಬೃಹತ್ ಬೆಂಗಳೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆಯದ್ದೇ ತಲೆನೋವಾಗಿ ಪರಿಣಮಿಸುತ್ತದೆ. ಹೀಗಾಗಿ, ಬಿಬಿಎಂಪಿಯು (BBMP) ಗಣೇಶ ಮೂರ್ತಿ ವಿಸರ್ಜನೆಗೆ ಸಕಲ ತಯಾರಿ ಮಾಡಿಕೊಂಡಿದೆ. 41 ಕೆರೆ ಅಂಗಳದಲ್ಲಿ ತಾತ್ಕಾಲಿಕ ಕಲ್ಯಾಣಿಗಳು ಹಾಗೂ 489 ಸಂಚಾರಿ ಟ್ಯಾಂಕ್‌ಗಳನ್ನು ತಯಾರು ಮಾಡಿದೆ.

ಜೊತೆಗೆ, ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು 75 ಏಕಗವಾಕ್ಷಿ ಕೇಂದ್ರಗಳನ್ನು ತೆರೆದಿದೆ. ಮೇಲ್ವಿಚಾರಣೆಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನೋಡಲ್‌ ಅಧಿಕಾರಿಗಳ ನಿಯೋಜನೆ ಮಾಡಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ https://apps.bbmpgov.in/ganesh2025/ ವೆಬ್‌ಸೈಟ್​ಗೆ ಭೇಟಿ ನೀಡಿ.

41 ತಾತ್ಕಾಲಿಕ ಕಲ್ಯಾಣಿಗಳು

ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 2025ನೇ ಸಾಲಿನಲ್ಲಿ ವಲಯವಾರು ಕೆರೆ ಅಂಗಳದ ಕಲ್ಯಾಣಿ/ತಾತ್ಕಾಲಿಕ ಕಲ್ಯಾಣಿಗಳ ಸ್ಥಳಗಳ ವಿವರಗಳು

  1. ಬೆಂಗಳೂರು ದಕ್ಷಿಣ: ಮೇಪಾಳ್ಯ ಕಲ್ಯಾಣಿ, ಕೋರಮಂಗಲ, ಯಡಿಯೂರು ಕೆರೆ ಕಲ್ಯಾಣಿ, ಕೆಂಪಾಬುವಿ ಕೆರೆ ಕಲ್ಯಾಣಿ, ಗಿರಿನಗರದ ಸ್ವಾಮಿ ವಿವೇಕಾನಂದ ಉದ್ಯಾನವನ ಕಲ್ಯಾಣಿ
  2. ಬೆಂಗಳೂರು ಪಶ್ಚಿಮ: ಸ್ಯಾಂಕಿ ಕೆರೆ ಕಲ್ಯಾಣಿ
  3. ಬೆಂಗಳೂರು ಪೂರ್ವ: ಹಲಸೂರು ಕೆರೆ ಕಲ್ಯಾಣಿ
  4. ಮಹದೇವಪುರ: ಚೇಳಕೆರೆ ಕಲ್ಯಾಣಿ, ಹೊರಮಾವು ಅಗರ ಕಲ್ಯಾಣಿ, ಕಲ್ಕೆರೆ ಕಲ್ಯಾಣಿ, ಬಿ. ನಾರಾಯಣಪುರಕೆರೆ ಕೆರೆ ಕಲ್ಯಾಣಿ, ವಿಭೂತಿಪುರಕೆರೆ ಕಲ್ಯಾಣಿ, ಸಾದರಮಂಗಲ ಕೆರೆ ಕಲ್ಯಾಣಿ, ದೊಡ್ಡನೆಕ್ಕುಂದಿ ಕೆರೆ ಕಲ್ಯಾಣಿ, ಮುನ್ನೇಕೋಳಾಲ ಕೆರೆ ಕಲ್ಯಾಣಿ, ಕಾಡಗೋಡಿ ಕಲ್ಯಾಣಿ (ಕಾಶಿವಿಶ್ವನಾಥ ದೇವಸ್ಥಾನದ ಹತ್ತಿರ), ವರ್ತೂರು ಕೋಡಿ ಹತ್ತಿರದ ಕಲ್ಯಾಣಿ, ಅಯ್ಯಪ್ಪ ದೇವಸ್ಥಾನದ ಹತ್ತಿರ ಕಲ್ಯಾಣಿ, ವಾಗ್ದೇವಿ ವಿಲಾಸ್ ರಸ್ತೆಯ ಪಕ್ಕದ ಶಾಶ್ವತ ಕಲ್ಯಾಣಿ, ವಾಗ್ದೇವಿ ಶಾಲೆಯ ಹತ್ತಿರದ ಕಲ್ಯಾಣಿ ಮತ್ತು ದೇವರಬೀಸನಹಳ್ಳಿ ಕಲ್ಯಾಣಿ
  5. ದಾಸರಹಳ್ಳಿ: ದಾಸರಹಳ್ಳಿ ಕೆರೆಯ ಹತ್ತಿರದ ಕಲ್ಯಾಣಿ
  6. ಬೊಮ್ಮನಹಳ್ಳಿ: ಅಗರ ಕೆರೆ ಕಲ್ಯಾಣಿ, ಸಿಂಗಸಂದ್ರ ಕೆರೆ ಕಲ್ಯಾಣಿ, ಅರಕೆರೆ ಕೆರೆ ಕಲ್ಯಾಣಿ, ಕೊತ್ತನೂರು ಕಲ್ಯಾಣಿ, ಕೂಡ್ಲು ಕಲ್ಯಾಣಿ
  7. ರಾಜರಾಜೇಶ್ವರಿ ನಗರ: ದುಬಾಸಿಪಾಳ್ಯ ಕೆರೆ, ಕೋನಸಂದ್ರ ಕೆರೆ, ಜೆಪಿ ಪಾರ್ಕ್ ಕಲ್ಯಾಣಿ, ಮಲ್ಲತ್ತಹಳ್ಳಿ ಕೆರೆ
  8. ಯಲಹಂಕ ಕೆರೆ: ಅಟ್ಟೂರು ಕೆರೆ, ಅಳ್ಳಾಸಂದ್ರ ಕೆರೆ, ಕೋಗಿಲು ಕೆರೆಯ ಹತ್ತಿರ ಇರುವ ಕಲ್ಯಾಣಿ, ಜಕ್ಕೂರು ಕೆರೆಯ ಹತ್ತಿರ ಇರುವ ಕಲ್ಯಾಣಿ, ರಾಚೇನಹಳ್ಳಿ ಕೆರೆಯ ಹತ್ತಿರ ಇರುವ ಕಲ್ಯಾಣಿ, ಹೆಬ್ಬಾಳ ಕೆರೆ ಕಲ್ಯಾಣಿ, ದೊಡ್ಡಬೊಮ್ಮಸಂದ್ರ ಕೆರೆ ಕಲ್ಯಾಣಿ, ನರಸೀಪುರ ಕೆರೆ ಹತ್ತಿರ ಮತ್ತು ಕುವೆಂಪುನಗರ ಸಿಂಗಾಪುರ ಕೆರೆಯ ಹತ್ತಿರ ಕಲ್ಯಾಣಿ ನಿರ್ಮಿಸಲಾಗಿದೆ.

ಇದನ್ನೂ ಓದಿ: ಪಿಒಪಿ ಗಣೇಶ ಬಳಸುವುದಿಲ್ಲ ಅಂತ ಸಮಿತಿಗಳಿಂದ ಮುಚ್ಚಳಿಕೆ ಬರೆಸಿಕೊಂಡು ಪೆಂಡಾಲ್​ಗೆ ಅನುಮತಿ ನೀಡಿ: ಖಂಡ್ರೆ

489 ಸಂಚಾರಿ ಟ್ಯಾಂಕ್‌ಗಳು

ಬಿಟಿಎಂ ಲೇಔಟ್, ಪದ್ಮನಾಭಗರ, ಜಯನಗರ, ಬಸವನಗುಡಿ, ಚಿಕ್ಕಪೇಟೆ, ವಿಜಯನಗರ, ಮಹಾಲಕ್ಷ್ಮೀಪುರ, ರಾಜಾಜಿನಗರ, ಗೋವಿಂದರಾಜನಗರ, ಚಾಮರಾಜಪೇಟೆ, ಮಲ್ಲೇಶ್ವರಂ, ಗಾಂಧಿನಗರ, ಸರ್ವಜ್ಞನಗರ, ಸರ್​. ಸಿವಿ ರಾಮಾನ್​ ನಗರ, ಪುಲಿಕೇಶಿನಗರ, ಹೆಬ್ಬಾಳ, ಶಿವಾಜಿನಗರ, ಶಾಂತಿನಗರ ​ವಿಧಾನಸಭಾಕ್ಷೇತ್ರ ಸಂಚಾರಿ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಈ ವಿಧಾನಸಭಾಕ್ಷೇತ್ರಗಳಲ್ಲಿ ಯಾವ್ಯಾವ ನಗರಗಳಲ್ಲಿ ಸಂಚಾರಿ ಟ್ಯಾಂಕ್​ಗಳು ನಿಲ್ಲಿಸಲಾಗುತ್ತದೆ ಎಂಬ ಮಾಹಿತಿ ಈ ಲಿಂಕ್​ನಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:37 pm, Sat, 23 August 25