Gold Rate Today: ಶುಭ ಶುಕ್ರವಾರದಂದು ಆಭರಣ ಖರೀದಿಸುವುದಾದರೆ ಚಿನ್ನ, ಬೆಳ್ಳಿ ದರ ವಿವರ ಹೀಗಿದೆ

Gold Silver Price Today: ಚಿನ್ನ, ಬೆಳ್ಳಿ ದರ ಏರಿಳಿತ ಕಾಣುವುದು ಸರ್ವೇ ಸಾಮಾನ್ಯ. ನೀವು ಸಂಗ್ರಹಿಸಿದ ಹಣಕ್ಕೆ ಆಭರಣ ಖರೀದಿಸಬೇಕು ಎಂದೆನಿಸಿದರೆ ದರ ವಿವರ ಪರಿಶೀಲಿಸಿ. ಸರಿಹೊಂದುವುದಾದರೆ ಆಭರಣ ಕೊಳ್ಳುವತ್ತ ಯೋಚಿಸಬಹುದು.

Gold Rate Today: ಶುಭ ಶುಕ್ರವಾರದಂದು ಆಭರಣ ಖರೀದಿಸುವುದಾದರೆ ಚಿನ್ನ, ಬೆಳ್ಳಿ ದರ ವಿವರ ಹೀಗಿದೆ
ಸಾಂದರ್ಭಿಕ ಚಿತ್ರ
Edited By:

Updated on: Jul 02, 2021 | 8:35 AM

Gold Silver Rate Today| ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು (ಜುಲೈ 2, ಶುಕ್ರವಾರ) ಏರಿಕೆಯಾಗಿದೆ. ನಿನ್ನೆ ಜುಲೈ ತಿಂಗಳ ಆರಂಭದಲ್ಲಿಯೇ ದರ ಇಳಿಕೆ ಕಂಡು ಬಂದಿರುವುದು ಆಭರಣದ ಪ್ರಿಯರಿಗೆ ಖುಷಿ ನೀಡಿತ್ತು. ಆದರೆ ಇಂದು ಆಭರಣಗಳ ಬೆಲೆ ಏರಿಕೆ ಆಗಿರುವುದು ಕೊಂಚ ಬೇಸರ ತರಬಹುದು. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,000 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,40,000 ರೂಪಾಯಿಗೆ ಏರಿದೆ. ಸರಿಸುಮಾರು 2,500 ರೂಪಾಯಿ ಏರಿಕೆ ಆಗಿದೆ.

ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,000 ರೂಪಾಯಿಗೆ ಏರಿಕೆ ಆಗಿದೆ. 100 ಗ್ರಾಂ ಚಿನ್ನದ ದರ 4,80,000 ರೂಪಾಯಿಗೆ ಏರಿದೆ. ಸರಿಸುಮಾರು 2,700 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಬೆಳ್ಳಿ ರದಲ್ಲಿಯೂ ಸಹ ಕೊಂಚ ಏರಿಕೆ ಕಂಡು ಬಂದಿದ್ದು ಕೆಜಿ ಬೆಳ್ಳಿಗೆ 68,700 ರೂಪಾಯಿ ಆಗಿದೆ.

ಚಿನ್ನ, ಬೆಳ್ಳಿ ದರ ಏರಿಳಿತ ಕಾಣುವುದು ಸರ್ವೇ ಸಾಮಾನ್ಯ. ನೀವು ಸಂಗ್ರಹಿಸಿದ ಹಣಕ್ಕೆ ಆಭರಣ ಖರೀದಿಸಬೇಕು ಎಂದೆನಿಸಿದರೆ ದರ ವಿವರ ಪರಿಶೀಲಿಸಿ. ಸರಿಹೊಂದುವುದಾದರೆ ಆಭರಣ ಕೊಳ್ಳುವತ್ತ ಯೋಚಿಸಬಹುದು. ಕೇವಲ ಆಭರಣಗಳನ್ನು ತೊಟ್ಟು ಸಂತೋಷ ಪಡುವುದೊಂದೇ ಅಲ್ಲದೇ ಹೂಡಿಕೆಯ ದೃಷ್ಟಿಯಿಂದ ಚಿನ್ನವನ್ನು ಖರೀದಿಸುವುದುಂಟು. ಹಾಗಾಗಿ ಚಿನ್ನದ ಮಾರುಕಟ್ಟೆಯ ಕುರಿತಾಗಿ ಕುತೂಹಲ ಇದ್ದೇ ಇರುತ್ತದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,430 ರೂಪಾಯಿಗೆ ಏರಿಕೆ ಆಗಿದೆ. 100 ಗ್ರಾಂ ಚಿನ್ನದ ದರ 4,44,300 ರೂಪಾಯಿ ಏರಿಕೆ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,470 ರೂಪಾಯಿಗೆ ಏರಿಕೆ ಆಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ 4,84,700 ರೂಪಾಯಿಗೆ ಏರಿದೆ. ಸರಿಸುಮಾರು 3,700 ರೂಪಾಯಿ ಹೆಚ್ಚಳವಾಗಿರುವುದು ಕಂಡು ಬಂದಿದೆ. ಬೆಳ್ಳಿ ದರವೂ ಸಹ ಏರಿಕೆ ಆಗಿದ್ದು ಕೆಜಿ ಬೆಳ್ಳಿ ಬೆಲೆ 74,100 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,200 ರೂಪಾಯಿ ಏರಿಕೆಯಾಗಿದೆ.

ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,150 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,61,500 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,150 ರೂಪಾಯಿ ಇದೆ. 100 ಗ್ರಾ ಚಿನ್ನದ ದರ 5,01,500 ರೂಪಾಯಿಗೆ ಏರಿಕೆಯಾಗಿದೆ. ಕೆಜಿ ಬೆಳ್ಳಿ ಬೆಲೆ 68,700 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಗಮನಿಸಿದಾಗ ಒಟ್ಟಾರೆಯಾಗಿ ಎಲ್ಲಾ ಪ್ರಮುಖ ನಗರಗಳಲ್ಲಿಯೂ ಸಹ ಚಿನ್ನದ ದರ ಏರಿಕೆ ಕಂಡು ಬಂದಿದೆ. ಅದೇ ರೀತಿ ಬೆಳ್ಳಿ ದರವೂ ಸಹ ಏರಿಕೆಯಾಗಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,190 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,61,900 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,190 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,71,900 ರೂಪಾಯಿಗೆ ಏರಿಕೆಯಾಗಿದೆ. ಸರಿಸುಮಾರು 4,500 ರೂಪಾಯಿಗೆ ಏರಿಕೆಯಾಗಿದೆ. ಇಂದು ಕೆಜಿ ಬೆಳ್ಳಿಗೆ 68,700 ರೂಪಾಯಿ ನಿಗದಿ ಮಾಡಲಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.

ಇದನ್ನೂ ಓದಿ:

Gold Rate Today: ವಿವಿಧ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನ ದರ ಭಾರೀ ಇಳಿಕೆ; ಹೀಗಿದೆ ಬೆಲೆ

Gold Rate Today: ಅಮ್ಮನಿಗೆ ಚಿನ್ನದ ಸರವನ್ನು ಗಿಫ್ಟ್​ ಕೊಡಬೇಕೆಂದಿದ್ದೀರಾ? ಇಳಿಕೆಯಲ್ಲಿದೆ ಚಿನ್ನದ ದರ ಗಮನಿಸಿ