AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವರ್ಷ ಸಂದರ್ಭದಲ್ಲಿ 67 ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಿದ ಸರ್ಕಾರ

ಕರ್ನಾಟಕ ಸರ್ಕಾರವು ಹಲವಾರು ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಿದೆ. ರಮಣ್ ಗುಪ್ತಾರನ್ನು ಗುಪ್ತಚರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರನ್ನಾಗಿ, ಚೇತನ್ ಸಿಂಗ್ ರಾಥೋಡ್ ರನ್ನು ಈಶಾನ್ಯ ವಲಯದ ಐಜಿಪಿಯನ್ನಾಗಿ ನೇಮಿಸಲಾಗಿದೆ. ಇತರ ಅನೇಕ ಅಧಿಕಾರಿಗಳಿಗೆ ಬಡ್ತಿ ಮತ್ತು ವರ್ಗಾವಣೆ ನೀಡಲಾಗಿದೆ.

ಹೊಸ ವರ್ಷ ಸಂದರ್ಭದಲ್ಲಿ 67 ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಿದ ಸರ್ಕಾರ
ಹೊಸ ವರ್ಷ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಿದ ಸರ್ಕಾರ
ರಾಚಪ್ಪಾಜಿ ನಾಯ್ಕ್
| Updated By: ಗಂಗಾಧರ​ ಬ. ಸಾಬೋಜಿ|

Updated on:Dec 31, 2024 | 9:55 PM

Share

ಬೆಂಗಳೂರು, ಡಿಸೆಂಬರ್​ 31: ಇತ್ತೀಚೆಗಷ್ಟೆ ಏಳು ಐಪಿಎಸ್ (IPS)​ ಅಧಿಕಾರಿಗಳ ವರ್ಗಾವಣೆ ಮಾಡಿದ್ದ ಸರ್ಕಾರ ಇದೀಗ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮತ್ತೆ ಕೆಲ ಐಪಿಎಸ್ ಅಧಿಕಾರಿಗಳಿಗೆ ಮತ್ತು 50 ಎಸ್​ಪಿಗಳಿಗೆ ಎಸ್​ಪಿಪಿಯಾಗಿ ಬಡ್ತಿ ನೀಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಆ ಮೂಲಕ ಕರ್ನಾಟಕ ಸರ್ಕಾರ ಆಡಳಿತ ವಿಭಾಗದಲ್ಲಿ ಮೇಜರ್​ ಸರ್ಜರಿ ಮಾಡಿದೆ.

67 ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2025ರ ಜನವರಿ 1ರಿಂದಲೇ ಅನ್ವಯವಾಗುವಂತೆ ಐಎಎಸ್ ಅಧಿಕಾರಿಗಳಿಗೆ ವಿವಿಧ ಶ್ರೇಣಿಗೆ ಬಡ್ತಿ ನೀಡಿ ಸರ್ಕಾರ ಆದೇಶಿಸಿದೆ.

ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ

  • ರಮಣ ಗುಪ್ತಾ: ಹೆಚ್ಚುವರಿ ಪೊಲೀಸ್ ಆಯುಕ್ತ, ಗುಪ್ತಚರ ವಿಭಾಗ
  • ಚೇತನ್ ಸಿಂಗ್ ರಾಥೋಡ್: ಐಜಿಪಿ, ಈಶಾನ್ಯ ವಲಯ (ಬೆಳಗಾವಿ)
  • ವಿಕಾಸ್ ಕುಮಾರ್: ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ಪಶ್ಚಿಮ
  • ಅಮಿತ್ ಸಿಂಗ್: ಐಜಿಪಿ, ಪಶ್ಚಿಮ ವಲಯ(ಮಂಗಳೂರು)
  • ವಂಶಿಕೃಷ್ಣ: ಡಿಐಜಿ, ಪೊಲೀಸ್ ನೇಮಕಾತಿ ವಿಭಾಗ, ಬೆಂಗಳೂರು
  • ಕಾರ್ತಿಕ್ ರೆಡ್ಡಿ: ರಾಮನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮುಂದುವರಿಕೆ
  • ಕುಲದೀಪ್ ಕುಮಾರ್ ಜೈನ್: ಡಿಐಜಿ, ಆಡಳಿತ ವಿಭಾಗದ ಜಂಟಿ ಪೊಲೀಸ್ ಆಯುಕ್ತ
  • ಸಂತೋಷ್ ಬಾಬು: ಡಿಐಜಿಯಾಗಿ ಬಡ್ತಿ, ಗುಪ್ತಚರ ಇಲಾಖೆ

ಇದನ್ನೂ ಓದಿ: ಇಬ್ಬರು ಐಎಎಸ್, ಇಬ್ಬರು ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

  • ಇಶಾ ಪಂತ್: ಡಿಐಜಿಯಾಗಿ ಬಡ್ತಿ, ಗುಪ್ತಚರ ಇಲಾಖೆ
  • ಜಿ.ಸಂಗೀತಾ: ಡಿಐಜಿ, ಸಿಐಡಿ ಅರಣ್ಯ ಘಟಕ
  • ಸೀಮಾ ಲಾಟ್ಕರ್: ಡಿಐಜಿ, ಮೈಸೂರು ಕಮಿಷನರ್ ಆಗಿ ಮುಂದುವರಿಕೆ
  • ರೇಣುಕಾ ಕೆ.ಸುಕುಮಾರ್: ಡಿಐಜಿಯಾಗಿ ಬಡ್ತಿ, ಡಿಸಿಆರ್​ಇ, ಬೆಂಗಳೂರು
  • ಡಾ.ಭೀಮಾಶಂಕರ ಗುಳೇದ್: ಬೆಳಗಾವಿ ಎಸ್​ಪಿಯಾಗಿ ಮುಂದುವರಿಕೆ ಮಾಡಲಾಗಿದೆ.
  • ಎನ್​ ಶಶಿ ಕುಮಾರ್: ಪೊಲೀಸ್ ಮಹಾನಿರೀಕ್ಷಕರಾಗಿ ಬಡ್ತಿ, ಹುಬ್ಬಳ್ಳಿ-ಧಾರವಾಡ ನಗರ
  • ಡಾ.ವೈ.ಎಸ್. ರವಿ ಕುಮಾರ್: ಇನ್‌ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್​ ಆಗಿ ಬಡ್ತಿ (ಇಂಟಲಿಜೆನ್ಸ್), ಬೆಂಗಳೂರು
  • 50 ಎಸ್​ಪಿಗಳಿಗೆ ಎಸ್​ಪಿಪಿಯಾಗಿ ಬಡ್ತಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:49 pm, Tue, 31 December 24