ಬೆಂಗಳೂರು ಮಹಾನಗರದ ಹಲವೆಡೆ ವರ್ಷಧಾರೆ: ರಾಜ್ಯದಲ್ಲಿ ಸೆ 8 ರವರೆಗೆ ಮಳೆ ಸಾಧ್ಯತೆ

ಎರಡು ದಿನದ ಬಳಿಕ ತಣ್ಣಗಿದ್ದ ಮಳೆರಾಯ ಇಂದು ಮತ್ತೆ ಗುಡುಗಿದ್ದು, ಪರಿಣಾಮ ಟೌನ್ ಹಾಲ್, ಕಾರ್ಪೊರೇಷನ್, ಕೆಆರ್ ಮಾರ್ಕೆಟ್, ಶಾಂತಿನಗರ, ಮೆಜೆಸ್ಟಿಕ್ ಸೇರಿ ಹಲವೆಡೆ ಜೋರು ಮಳೆ ಆಗಿದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬೆಂಗಳೂರು ಮಹಾನಗರದ ಹಲವೆಡೆ ವರ್ಷಧಾರೆ: ರಾಜ್ಯದಲ್ಲಿ ಸೆ 8 ರವರೆಗೆ ಮಳೆ ಸಾಧ್ಯತೆ
ಪ್ರಾತಿನಿಧಿಕ ಚಿತ್ರ
Follow us
Prajwal Kumar NY
| Updated By: ಗಂಗಾಧರ​ ಬ. ಸಾಬೋಜಿ

Updated on: Sep 07, 2023 | 7:42 PM

ಬೆಂಗಳೂರು, ಸೆಪ್ಟೆಂಬರ್​ 7: ಮಂಗಳವಾರ ರಾತ್ರಿ ಸುರಿದ ಮಹಾ ಮಳೆಗೆ ಬೆಂಗಳೂರಿನ (Bengaluru) ಜನ ಅಕ್ಷರಶಃ ನಲುಗಿ ಹೋಗಿದ್ದರು. ಬೆಂಗಳೂರು-ಬನ್ನೇರುಘಟ್ಟ ಮುಖ್ಯರಸ್ತೆಯ ಕಾಳೇನ ಅಗ್ರಹಾರದ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡು ವಾಹನ ಸವಾರರು ಪರದಾಡಿದ್ದರು. ಎರಡು ದಿನದ ಬಳಿಕ ತಣ್ಣಗಿದ್ದ ಮಳೆರಾಯ ಇಂದು ಮತ್ತೆ ಗುಡುಗಿದ್ದು, ಪರಿಣಾಮ ಟೌನ್ ಹಾಲ್, ಕಾರ್ಪೊರೇಷನ್, ಕೆಆರ್ ಮಾರ್ಕೆಟ್, ಶಾಂತಿನಗರ, ಮೆಜೆಸ್ಟಿಕ್ ಸೇರಿ ಹಲವೆಡೆ ಜೋರು ಮಳೆ ಆಗಿದೆ. ವಾಹನ ಸವಾರರು, ಬೀದಿ ಬದಿ ವ್ಯಾಪಾರಿಗಳು  ಪರದಾಡಿದ್ದಾರೆ. ಬೆಂಗಳೂರು ಮಾತ್ರವಲ್ಲದೇ ಕೆಲ ದಿನಗಳಿಂದ ರಾಜ್ಯ ಹಲವೆಡೆ ಭಾರೀ ಮಳೆ ಆಗುತ್ತಿದೆ.

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ 8 ರವರೆಗೆ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 48 ಗಂಟೆಗಳಲ್ಲಿ ಉತ್ತರ ಒಳನಾಡು, ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಬೆಂಗಳೂರು-ಬನ್ನೇರುಘಟ್ಟ ರಸ್ತೆ ಜಲಾವೃತ; ಜೆಸಿಬಿ ಮೂಲಕ ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.

ಮಳಯಿಂದಾಗಿ ಭಾಷಣ ಮೊಟಕುಗೊಳಿಸಿದ ಸಚಿವ ಕೆಹೆಚ್ ಮುನಿಯಪ್ಪ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಭಾರತ್ ಜೋಡೋ ವರ್ಷದ ಸಂಭ್ರಮಾಚರಣೆ ಮೆರವಣಿಗೂ ಮಳೆರಾಯನ ಅಡ್ಡಿ ಪಡಿಸಿದ್ದಾನೆ.  ಮಳೆಯಿಂದಾಗಿ ಆರಂಭದಲ್ಲೇ ಸಚಿವ ಕೆಹೆಚ್ ಮುನಿಯಪ್ಪ ಭಾಷಣ ಮೊಟಕುಗೊಳಿಸಿದರು. ಮಳೆ ಬರುತ್ತಿದ್ದಂತೆ ಕಾರ್ಯಕರ್ತರು ಚೆಲ್ಲಾಪಿಲ್ಲಿಯಾಗಿ ಹೋಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯ ಅಬ್ಬರ; ಇಲ್ಲಿದೆ ಮಾಹಿತಿ

ಮೈಸೂರು ರಸ್ತೆಯ, ದೀಪಾಂಜಲಿ‌ ಮೇಟ್ರೋ‌ ಸ್ಟೇಷನ್ ಬಳಿ‌ ಕೇವಲ‌ 20 ನಿಮಿಷ ಸುರಿದ ಮಳೆಗೆ ರಸ್ತೆ ಮೇಲೆಲ್ಲಾ ನೀರು ನಿಂತ್ತಿದ್ದು, ಪಾದಚಾರಿಗಳು ಪರದಾಡುವಂತಾಗಿದೆ. ಮಳೆ‌ ಹಿನ್ನಲೆ‌ ಕಬ್ಬನ್ ಪಾರ್ಕ್ ಸುತ್ತಮುತ್ತ ವಾಹನ ಸವಾರರು ಟ್ರಾಫಿಕ್‌ ಕಿರಿಕಿರಿ ಅನುಭವಿಸುವಂತ್ತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.