AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಹೆಚ್ಚಾಯ್ತು ಒಮಿಕ್ರಾನ್ ಆತಂಕ! ಹೊಸ ಆರು ಸೋಂಕಿತರ ಹಿಸ್ಟರಿ ಇಲ್ಲಿದೆ

ಆರು ಜನರ ಪೈಕಿ 18 ವರ್ಷದ ಒಂದು ಹುಡುಗಿಗೆ ಒಮಿಕ್ರಾನ್ ಇರುವುದು ದೃಢವಾಗಿದೆ. ಇದೇ 10ಕ್ಕೆ ಯುಕೆ ಇಂದ ಬೆಂಗಳೂರಿಗೆ ಪ್ರಯಾಣ ಮಾಡಿದ್ದು, ಕೊರೊನಾ ಟೆಸ್ಟ್​ನಲ್ಲಿ ಪಾಸಿಟಿವ್ ಬಂದಿದೆ.

ಕರ್ನಾಟಕದಲ್ಲಿ ಹೆಚ್ಚಾಯ್ತು ಒಮಿಕ್ರಾನ್ ಆತಂಕ! ಹೊಸ ಆರು ಸೋಂಕಿತರ ಹಿಸ್ಟರಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Dec 19, 2021 | 9:00 AM

Share

ಬೆಂಗಳೂರು: ರಾಜ್ಯದಲ್ಲಿ ನಿನ್ನೆ (ಡಿ.19) ಒಂದೇ ದಿನ ಹೊಸ ಆರು ಜನರಿಗೆ ಕೊರೊನಾ ರೂಪಾಂತರಿ ಒಮಿಕ್ರಾನ್ (Omicron) ಕಾಣಿಸಿಕೊಂಡಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಮತ್ತೆ ಒಮಿಕ್ರಾನ್ ಆತಂಕ ಶುರುವಾಗಿದೆ. ಕರ್ನಾಟಕದಲ್ಲಿ ಸದ್ಯ ಒಮಿಕ್ರಾನ್ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐವರಿಗೆ ಒಮಿಕ್ರಾನ್ ಇರುವುದು ದೃಢಪಟ್ಟಿದೆ. ನಿನ್ನೆ ದೃಢಪಟ್ಟಿದ ಆರು ಹೊಸ ಒಮಿಕ್ರಾನ್ ಸೋಂಕಿತರ ಹಿಸ್ಟರಿ ಇಲ್ಲಿದೆ.

ಆರು ಜನರ ಪೈಕಿ 18 ವರ್ಷದ ಒಂದು ಹುಡುಗಿಗೆ ಒಮಿಕ್ರಾನ್ ಇರುವುದು ದೃಢವಾಗಿದೆ. ಇದೇ 10ಕ್ಕೆ ಯುಕೆ ಇಂದ ಬೆಂಗಳೂರಿಗೆ ಪ್ರಯಾಣ ಮಾಡಿದ್ದು, ಕೊರೊನಾ ಟೆಸ್ಟ್​ನಲ್ಲಿ ಪಾಸಿಟಿವ್ ಬಂದಿದೆ. ಪಾಸಿಟಿವ್ ಬಂದ ಕೂಡಲೆ ಆ್ಯಂಬುಲೆನ್ಸ್ ಮೂಲಕ ಏರ್ಪೋರ್ಟ್ ಹಾಸ್ಪಿಟಲ್​ಗೆ ಶಿಫ್ಟ್ ಮಾಡಲಾಗಿದೆ. 18 ವರ್ಷದ ಹುಡುಗಿಗೆ ಪ್ರಾಥಮಿಕ ಸಂಪರ್ಕದಲ್ಲಿ 3, ಸೆಕೆಂಡರಿ ಕಾಂಟ್ಯಾಕ್ಟ್​ನಲ್ಲಿ 16 ಜನ ಇದ್ದಾರೆ ಎಂದು ತಿಳಿದುಬಂದಿದೆ.

19 ವರ್ಷದ ಯುವತಿಗೆ ಪಾಸಿಟಿವ್ ಆಗಿದೆ. ಪತ್ತೆಯಾಗದ ವಿದೇಶಿ ಪ್ರಯಾಣಿಕನ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಡಿ.9 ರಂದು ಕೊರೊನಾ ಟೆಸ್ಟ್​ನಲ್ಲಿ ಪಾಸಿಟಿವ್ ಇರುವುದು ತಿಳಿದುಬಂದಿದೆ. ಯುವತಿ ಮಂಗಳೂರು ಮೂಲದ ಕಾಲೇಜಿನ ವಿದ್ಯಾರ್ಥಿನಿ. ಯುವತಿಯ ಪ್ರಾಥಮಿಕ ಸಂಪರ್ಕದಲ್ಲಿ 42, ಸೆಕೆಂಡರಿ ಕಾಂಟ್ಯಾಕ್ಟ್ನಲ್ಲಿ ಸುಮಾರು 293 ಜನ ಇದ್ದಾರೆ. ಈ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಲಾಗಿದ್ದು, 18 ಜನರಿಗೆ ಕೊರೊನಾ ಪತ್ತೆಯಾಗಿದೆ.

14 ವರ್ಷದ ಹುಡುಗಿಯಲ್ಲಿ ಒಮಿಕ್ರಾನ್ ಪತ್ತೆಯಾಗಿದ್ದು, ಯುವತಿಗೆ ವ್ಯಾಕ್ಸಿನೇಷನ್ ಆಗಿಲ್ಲ. ಯುವತಿ ಬಂಟ್ವಾಳದ ಕಾಲೇಜು ವಿದ್ಯಾರ್ಥಿನಿ. ಪ್ರೈಮರಿ ಕಾಂಟ್ಯಾಕ್ಟ್ 79, ಸೆಕೆಂಡರಿ ಕಾಂಟ್ಯಾಕ್ಟ್​ನಲ್ಲಿ 203 ಜನರಿದ್ದಾರೆ. ಈ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಲಾಗಿದ್ದು, 13 ಜನರಿಗೆ ಕೊರೊನಾ ಪತ್ತೆಯಾಗಿದೆ.

12ನೇ ಕೇಸ್ ಆಗಿ 13 ವರ್ಷದ ಹುಡುಗಿಯಲ್ಲಿ ಒಮಿಕ್ರಾನ್ ದೃಢಪಟ್ಟಿದೆ. ಇನ್ನು ಇಬ್ಬರು ವಿದ್ಯಾರ್ಥಿಗಳಿಗೆ ಒಮಿಕ್ರಾನ್ ಸೋಂಕು ಇರುವುದು ದೃಢವಾಗಿದೆ. 11, 12, 13, 14 ನೇ ಕೇಸ್ ಒಂದೇ ಹಿಸ್ಟರಿ. ವಯಸ್ಸು ಮಾತ್ರ ಬೇರೆಯಾಗಿದೆ. ಯುವತಿಯರು ಅಂತರಾಷ್ಟ್ರೀಯ ಪ್ರಯಾಣಿಕರ ಸಂಪರ್ಕ ಹೊಂದಿದ್ದಾರೆ. ಈ ಯುವತಿಯರಿಗೆ ವ್ಯಾಕ್ಸಿನೇಷನ್ ಆಗಿಲ್ಲ. ಬಂಟ್ವಾಳದ ಕಾಲೇಜು ವಿದ್ಯಾರ್ಥಿನಿಯರಿಗೆ ಪ್ರಾಥಮಿಕ ಸಂಪರ್ಕ 79, ಸೆಕೆಂಡರಿ ಕಾಂಟ್ಯಾಕ್ಟ್ 203 ಜನರಿದ್ದಾರೆ. ಈ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಲಾಗಿದ್ದು, 13 ಜನರಿಗೆ ಕೊರೊನಾ ಪತ್ತೆಯಾಗಿದೆ.

ರಾಜ್ಯಕ್ಕೆ ರೆಡ್ ಅಲರ್ಟ್ ನೀಡಿದ ತಜ್ಞರು ಎರಡರಿಂದ ಮೂರು ವಾರಗಳ ಕಾಲ ರಾಜ್ಯಕ್ಕೆ ತಜ್ಞರು ರೆಡ್ ಅಲರ್ಟ್ ನೀಡಿದ್ದಾರೆ. ಕೊರೊನಾ ಮೊದಲ ಹಾಗೂ ಎರಡನೇ ಅಲೆ ಕೂಡಾ ಡಿಸೆಂಬರ್​ನಲ್ಲಿಯೇ ಶುರುವಾಗಿತ್ತು. ಸದ್ಯ ಲಂಡನ್​ನಲ್ಲಿ ನಿತ್ಯ 90 ಸಾವಿರದಿಂದ 1 ಲಕ್ಷ ಜನರಿಗೆ ಸೋಂಕು ದೃಢಪಡುತ್ತಿದೆ. ಪ್ರತಿ ನಿತ್ಯ ನೂರು ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. ಕೊರೊನಾ ವಿಚಾರದಲ್ಲಿ ಲಂಡನ್​ ಹಾಗೂ ಭಾರತಕ್ಕೂ ಸಾಮ್ಯತೆ ಹೆಚ್ಚು. ರಾಜ್ಯದಲ್ಲಿ 2-3 ವಾರಗಳ ಕಾಲ ರಾಜ್ಯದ ಜನ ಹೆಚ್ಚು ಜಾಗೃತರಾಗಿರಬೇಕು ಅಂತ ಜಯದೇವ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್ ತಿಳಿಸಿದ್ದಾರೆ.

ಸಂಭ್ರಮಕ್ಕೆ ಕಡಿವಾಣ ಹಾಕಲೇಬೇಕು- ತಜ್ಞರು ಒಮಿಕ್ರಾನ್ ಟೆನ್ಷನ್ ಜೊತೆಗೆ ಕ್ರಿಸ್​ಮಸ್ ಮತ್ತು ನ್ಯೂ ಇಯರ್ ಸಂಭ್ರಮಕ್ಕೆ ಕಡಿವಾಣ ಹಾಕಲೇಬೇಕು ಅಂತ ತಜ್ಞರು ಹೇಳುತ್ತಿದ್ದಾರೆ. ಮೊಜು, ಮಸ್ತಿಗೆ ನಿರ್ಬಂಧಗಳು ಅವಶ್ಯಕವಾಗಿವೆ ಅಂತ ತಜ್ಞರು ಹೇಳುತ್ತಿದ್ದಾರೆ.

ಇದನ್ನೂ ಓದಿ

ನಿಮಗೆ ಡ್ರೈ ಫಿಶ್ ಇಷ್ಟನಾ? ಈ ರೆಸಿಪಿಯನ್ನು ಟ್ರೈ ಮಾಡಿದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತೆ

ಮೈಸೂರು: ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ; 100 ಕೋಟಿ ರೂ. ಮೌಲ್ಯದ 5.14 ಎಕರೆ ಒತ್ತುವರಿ ಜಾಗ ತೆರವು

Published On - 8:41 am, Sun, 19 December 21

ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು