ಬೆಂಗಳೂರು: ಶಿವಮೊಗ್ಗದಲ್ಲಿ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಆರ್. ಅಶೋಕ್(R Ashoka) ಪ್ರತಿಕ್ರಿಯೆ ನೀಡಿದ್ದಾರೆ. ಶಿವಮೊಗ್ಗ ಗಲಬೆ ಆಗಿರುವುದು ಅಲ್ಲಿನ ಮುಸ್ಲಿಂ(Muslim) ಗೂಂಡಾಗಿರಿಗೆ. ನಿರಂತರವಾಗಿ ಎಸ್ಡಿಪಿಐ(SDPI), ಪಿಎಫ್ಐ ಈ ತರದ ಸಂಘಟನೆಗಳು ಸಕ್ರೀಯವಾಗಿದೆ ಎನ್ನುವುದಕ್ಕೆ ಇದು ನಿದರ್ಶನ. ಹಿಜಾಬ್ ಗಲಾಟೆ ಶುರುವಾಯಿತು. ಈ ಗಲಭೆಗೆ ಹಿಜಾಬ್ ಕಾರಣ ಎನ್ನುವುದು ಗೊತ್ತಾಗುತ್ತಿದೆ.ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಈಗಾಗಲೇ ಹಲವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಿಜಾಬ್ ವಿಚಾರದಲ್ಲಿ ವಿದೇಶಿ ಶಕ್ತಿಗಳ ಕೈವಾಡ ಇದೆ
ಆರು ಜನ ಹೆಣ್ಣು ಮಕ್ಕಳ ಪ್ರತಿಭಟನೆ ವಿಚಾರ ಅಥವಾ ಹಿಜಾಬ್ ವಿಚಾರ ನಮ್ಮ ಮಾಧ್ಯಮಗಳ ಮೊದಲು, ವಿದೇಶಿ ಮಾಧ್ಯಮದಲ್ಲಿ ಬರುತ್ತಿದೆ. ಹೀಗಾಗಿ ಹಿಜಾಬ್ ವಿಚಾರದಲ್ಲಿ ವಿದೇಶಿ ಶಕ್ತಿಗಳ ಕೈವಾಡ ಇದೆ. ಯಾವುದೇ ದೇಶದ್ರೋಹಿಯನ್ನು ಬಿಡುವುದಿಲ್ಲ. ಮಟ್ಟ ಹಾಕುತ್ತೀವಿ. ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.
ಬಳಿಕ ಮಾತನಾಡಿದ ಅವರು, ಇನ್ನೂ ಬೆದರಿಕೆ ಇದೆ ಎನ್ನುವುದು ಸತ್ಯಾ ಸತ್ಯತೆ ತಿಳಿದುಬಂದಿದೆ. ಇದರಲ್ಲಿ ಪಿಎಫ್ಐ ಭಾಗಯಾಗಿದೆಯಾ ಎನ್ನುವುದು ತನೆಖೆಯಿಂದ ಗೊತ್ತಾಗಬೇಕಿದೆ. ಈ ಬಗ್ಗೆ ಸಿಎಂ ಜೊತೆ ಇಂದು ಚರ್ಚೆ ಮಾಡುತ್ತೀವಿ ಎಂದು ತಿಳಿಸಿದ್ದಾರೆ.
ಈಶ್ವರಪ್ಪ ಕೊಲೆ ಮಾಡಿಸಿದ್ದಾರೆ ಎನ್ನುವ ವಿಚಾರ
ನಾನು ಗೃಹ ಸಚಿವನಾಗಿ ಹಿಂದೆ ಕೆಲಸ ಮಾಡಿದ್ದೇನೆ. ಪೊಲೀಸ್ ಅನ್ನೋದು ಸ್ವತಂತ್ರ ಸಂಸ್ಥೆ. ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿಗಳ ಗಮನಕ್ಕೂ ಬಂದಿದೆ. ಹಲವಾರು ಜನ ಸಲಹೆ ಕೊಡುತ್ತಾರೆ. ಕೊಟ್ಟ ಸಲಹೆ ಗೌರವಯುತವಾಗಿ ತೆಗೆದುಕೊಳ್ಳುತ್ತೇವೆ. ಅಂತಿಮವಾಗಿ ಸಿಎಂ ಕ್ರಮ ಕೈಗೊಳ್ಳುತ್ತಾರೆ. ಡಿ.ಕೆ ಶಿವಕುಮಾರ್ ಹಾಗೂ ಈಶ್ವರಪ್ಪ ಅವರ ನಡುವೆ ವಯಕ್ತಿಕ ಜಗಳ ನಡೆದಿದೆ. ಅಧಿವೇಶನ ಕೂಡ ಇದೇ ವಿಚಾರಕ್ಕೆ ನಿಂತಿರುವುದು. ವಯಕ್ತಿಕ ಟೀಕೆಗೆ ಗುರಿಯಾಗಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಸ್ಪೀಕರ್ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಒಂದು ಹೇಳುತ್ತಿದ್ದಾರೆ. ಈಶ್ವರಪ್ಪ ಒಂದು ಹೇಳುತ್ತಿದ್ದಾರೆ. ಶಿವಮೊಗ್ಗ ಪ್ರಕರಣದಲ್ಲಿ ಕೂಡ ಹೀಗೆ ಮುಂದುವರೆದಿದೆ. ಜೆಡಿಎಸ್ ಕೂಡ ಸದನ ನಡೆಸಲು ಧರಣಿ ಮಾಡಿದೆ. ಚರ್ಚೆ ಮಾಡಿದರೆ ಈಶ್ವರಪ್ಪ ಅವರ ಮೇಲೆ ಆರೋಪ ಮಾಡಿರುವ ಬಗ್ಗೆ ಚರ್ಚೆ ಮಾಡಬಹುದಿತ್ತು. ಸ್ಪೀಕರ್ ಜೊತೆ, ಯಡಿಯೂರಪ್ಪ ಅವರ ಜೊತೆ ನಾನೂ ಹೋಗಿ ಸಂಧಾನ ಮಾಡಿದೆ. ಆದರೆ ಮೊಂಡಾಟ ಮಾಡುತ್ತಿದ್ದಾರೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಹರ್ಷ ಹತ್ಯೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ: ಶಾಸಕ ಎಂ.ಪಿ.ರೇಣುಕಾಚಾರ್ಯ
ಶಿವಮೊಗ್ಗದ ಹರ್ಷ ಕೊಲೆಯನ್ನ ನಾನು ಖಂಡಿಸುತ್ತೇನೆ. ಶಿವಮೊಗ್ಗದಲ್ಲಿ ಹರ್ಷ ಹತ್ಯೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಎನ್ಐಎ ತನಿಖೆ ನಡೆಸಲು ಸಿಎಂ ಬಳಿ ಮನವಿ ಮಾಡುತ್ತೇನೆ. ಕೊಲೆ ಮಾಡಿದವರನ್ನು ಎನ್ಕೌಂಟರ್ ಮಾಡಬೇಕು. ಅವರ ಕಷ್ಟ ನೋಡಿ ನನಗೆ ತುಂಬಾ ನೋವಾಗಿದೆ. ನನ್ನ ವೈಯಕ್ತಿಕವಾಗಿ ಆರು ಲಕ್ಷ ನೀಡುತ್ತೇನೆ. ಇದು ರಾಜಕೀಯ ಹೇಳಿಕೆ ಅಲ್ಲ. ನಮ್ಮ ರಾಜ್ಯದಲ್ಲಿ 15ಕ್ಕೂ ಹೆಚ್ಚು ಜನರ ಹತ್ಯೆಯಾಗಿದೆ. ನಮ್ಮಲ್ಲಿರುವ ಎಲ್ಲಾ ಮುಸಲ್ಮಾನರು ದೇಶದ್ರೋಹಿಗಳಲ್ಲ. ಪಾಕಿಸ್ತಾನ್ ಜಿಂದಾಬಾದ್ ಎನ್ನುವವರು ದೇಶದ್ರೋಹಿಗಳು. ಮಹಾತ್ಮ ಗಾಂಧಿಯಂತೆ ನಮ್ಮದು ಮೃದು ದೋರಣೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಅವರು ಡಿಕೆಶಿ ಕಾಂಗ್ರೆಸ್ ಆತ್ಮಾವಲೋಕನ ಮಾಡಬೇಕು.ಈಶ್ವರಪ್ಪ ಅಪ್ಪಟ ದೇಶಭಕ್ತ. ದೇಶದ್ರೋಹಿಗಳಿಂದ ಈ ಬರ್ಬರ ಹತ್ಯೆ ಆಗಿದೆ. ಮತ್ತೆ ಮರುಗಳಿಸಿದರೆ ನಾವು ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ. ನನಗೆ ಶಾಸಕ ಸ್ಥಾನ ಮುಖ್ಯ ಅಲ್ಲ ಹಿಂದೂತ್ವ ಮುಖ್ಯ. ಪೂರ್ವ ತನಿಖೆ ಆದ ಮೇಲೆ ಎಲ್ಲಾ ಹೊರ ಬರುತ್ತದೆ. ಹಿಂದು ಯುವಕರ ಮೇಲೆ ಸಂಚು ಮಾಡಲಾಗಿದೆ. ಭಾರತ ಮಾತೆ ಪೋಟೋ ಹಾಕಿದವರೇ ಮೇಲೆ ಈ ರೀತಿ ನಡೆಯುತ್ತದೆ. ತಾಕತ್ ಇದ್ದರೆ ದಾಳಿ ಮಾಡಿ ನಾವ್ ನೋಡ್ಕೋತ್ತೀವಿ. ಗುರುವಾರ ನಾನು ಸ್ಥಳಕ್ಕೆ ಭೇಟಿ ಕೊಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
ಶಿವಮೊಗ್ಗದಲ್ಲಿ ಹರ್ಷ ಕೊಲೆ ಪ್ರಕರಣ; ಹತ್ಯೆ ಖಂಡಿಸಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆ
ಬಜರಂಗದಳ ಕಾರ್ಯಕರ್ತ ಹರ್ಷನ ಕಗ್ಗೊಲೆ ಹೇಗಾಯ್ತು? ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ನಡೆದ ಕೊಲೆಯ ಕಂಪ್ಲೀಟ್ ಡಿಟೇಲ್ಸ್
Published On - 11:07 am, Tue, 22 February 22