AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈವೆಂಟ್​ ಮ್ಯಾನೇಜ್ಮೆಂಟ್​​ ಹೆಸರಲ್ಲಿ ಹೈಟೆಕ್​ ವೇಶ್ಯಾವಾಟಿಕೆ ದಂಧೆ; ನಾಲ್ವರು ಯುವತಿಯರ ರಕ್ಷಣೆ, ದಂಪತಿ ಅರೆಸ್ಟ್

ಉತ್ತರ ಕರ್ನಾಟಕ ಭಾಗದ ಬಡ ಹೆಣ್ಣುಮಕ್ಕಳನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಕೆಲಸ ಕೊಡಿಸದೇ ಹಣದ ಆಮಿಷ ತೋರಿಸ್ತಿದ್ರು. ಬಳಿಕ ವೇಶ್ಯಾವಾಟಿಕೆ ಅಡ್ಡೆಗೆ ದೂಡುತ್ತಿದ್ದರು. ಸದ್ಯ ಆರೋಪಿ ಪ್ರಕಾಶ್, ಪಾರಿಜಾತ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪ್ರಕಾಶ್, ಪಾರಿಜಾತ ದಂಪತಿ ಪಟ್ಟೆಗಾರಪಾಳ್ಯ ನಿವಾಸಿಗಳು.

ಈವೆಂಟ್​ ಮ್ಯಾನೇಜ್ಮೆಂಟ್​​ ಹೆಸರಲ್ಲಿ ಹೈಟೆಕ್​ ವೇಶ್ಯಾವಾಟಿಕೆ ದಂಧೆ; ನಾಲ್ವರು ಯುವತಿಯರ ರಕ್ಷಣೆ, ದಂಪತಿ ಅರೆಸ್ಟ್
ರಾಕೇಶ್, ಪೂಜಾ
Shivaprasad B
| Edited By: |

Updated on:Oct 12, 2024 | 8:52 AM

Share

ಬೆಂಗಳೂರು, ಅ.12: ಈವೆಂಟ್​ ಮ್ಯಾನೇಜ್ಮೆಂಟ್​​ ಹೆಸರಿನಲ್ಲಿ ಹೈಟೆಕ್​ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ದಂಪತಿಯನ್ನು ಬೆಂಗಳೂರಿನಲ್ಲಿ (Bengaluru) ಸಿಸಿಬಿ‌ ಪೊಲೀಸರು (CCB Police) ಬಂಧಿಸಿದ್ದಾರೆ. ಬಂಧಿತ ಪ್ರಕಾಶ್, ಪಾರಿಜಾತ ದಂಪತಿ ಪಟ್ಟೆಗಾರಪಾಳ್ಯ ನಿವಾಸಿಗಳು. ಇವರು ರಾಕೇಶ್, ಪೂಜಾ ಎಂದು ಹೆಸರು ಬದಲಿಸಿಕೊಂಡು ದಂಧೆ ನಡೆಸ್ತಿದ್ರು. ಸದ್ಯ ಇಬ್ಬರನ್ನೂ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಆರೋಪಿಗಳು, ಉದ್ಯೋಗ ಕೊಡಿಸುವ ನೆಪದಲ್ಲಿ ಬಡ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾ​ಡುತ್ತಿದ್ದರು. ಉತ್ತರ ಕರ್ನಾಟಕ ಭಾಗದ ಬಡ ಹೆಣ್ಣುಮಕ್ಕಳನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಕೆಲಸ ಕೊಡಿಸದೇ ಹಣದ ಆಮಿಷ ತೋರಿಸ್ತಿದ್ರು. ಬಳಿಕ ವೇಶ್ಯಾವಾಟಿಕೆ ಅಡ್ಡೆಗೆ ದೂಡುತ್ತಿದ್ದರು. ಆರೋಪಿ ಪ್ರಕಾಶ್, ಪಾರಿಜಾತ ದಂಪತಿ ಕರ್ನಾಟಕದ ಹೆಣ್ಣುಮಕ್ಕಳನ್ನು ಕರೆದೊಯ್ದು ತಮಿಳುನಾಡು, ಪಾಂಡಿಚೇರಿ ರೆಸಾರ್ಟ್​ಗಳಲ್ಲಿ ದಂಧೆ ನಡೆಸ್ತಿದ್ದರು. ಮದುವೆ ಈವೆಂಟ್​ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ಪ್ರತಿ ವಾರಕ್ಕೊಮ್ಮೆ ಬೆಂಗಳೂರಿನಿಂದ ತಮಿಳುನಾಡಿಗೆ ಕರೆದೊಯ್ದು ದಂಧೆ ನಡೆಸುತ್ತಿದ್ದರು.

ಹೊರ ರಾಜ್ಯದ ಶ್ರೀಮಂತರು, ಉದ್ಯಮಿಗಳು, ರೆಸಾರ್ಟ್​ಗಳಿಗೆ ಭೇಟಿ ನೀಡ್ತಿದ್ದವರ ಬಳಿ ಈ ಅಮಾಯಕ ಹೆಣ್ಣುಮಕ್ಕಳನ್ನು ದೂಡುತ್ತಿದ್ದರು. ಅಷ್ಟೇ ಅಲ್ಲದೆ ಐಷಾರಾಮಿ ವೇಶ್ಯಾವಾಟಿಕೆ ಪಾರ್ಟಿಯಲ್ಲಿ ಈ ದಂಪತಿ ಮದ್ಯ ಒದಗಿಸುತ್ತಿದ್ದರು. ಪಾರ್ಟಿಗೆ ಬರುವ ಒಬ್ಬರಿಗೆ ತಲಾ 25,000 ದಿಂದ 50 ಸಾವಿರದವರೆಗೂ ನಿಗದಿ ಮಾಡಲಾಗುತ್ತಿತ್ತು. ಬೆಂಗಳೂರಿನಿಂದ ಯುವತಿಯರನ್ನು ಕರೆದೊಯ್ಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿದ್ದು ಸದ್ಯ ನಾಲ್ವರು ಯುವತಿಯರ ರಕ್ಷಣೆ ಮಾಡಲಾಗಿದೆ. ಹಾಗೂ ಆರೋಪಿ ದಂಪತಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ಬೆದರಿಕೆ ಆರೋಪ ಮಾಡಿ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್

ಕೈಕೊಟ್ಟ ಯುವತಿ.. ಖಾಸಗಿ ಫೋಟೋ ಹರಿಬಿಟ್ಟ ಕ್ರಿಮಿ

ಪ್ರೀತಿಸಿ ಕೈಕೊಟ್ಟ ಯುವತಿಯ ಜೋತೆಗಿದ್ದ ಖಾಸಗಿ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಹಾಕಿ ವಿಕೃತಿ ಮೆರೆಯಲಾಗಿದೆ. ಬೆಂಗಳೂರಿನ ಮಂಜುನಾಥನಗರದ ದರ್ಶನ್ ಎಂಬ ಐನಾತಿಯವ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫರ್ನಿಚರ್ಸ್ ಅಂಗಡಿಯಲ್ಲಿ ಸೇಲ್ಸ್ ಕೆಲಸ ಮಾಡ್ತಿದ್ದ ಯುವತಿಯನ್ನ ಪ್ರೀತಿಸ್ತಿದ್ದ ಮಂಜುನಾಥ ಆಕೆಯ ಖಾಸಗಿ ಫೋಟೋಗಳನ್ನ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:50 am, Sat, 12 October 24