AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರ್ಸಿಂಗ್ ಕೌನ್ಸಿಲ್‌ಗೆ ಸಂಬಂಧ ದಿವ್ಯಾ ಹಾಗರಗಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

ಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಸದ್ಯ ಜೈಲಿನಲ್ಲಿದ್ದು ನರ್ಸಿಂಗ್ ಕೌನ್ಸಿಲ್ ವಿಶೇಷಾಧಿಕಾರಿ ನೇಮಕ ಪ್ರಶ್ನಿಸಿ ಪಿಐಎಲ್ ಸಲ್ಲಿಸಿದ್ದರು. ಆದ್ರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರಳೇ ಜೈಲಿನಲ್ಲಿರುವ ಹಿನ್ನೆಲೆ ಪಿಐಎಲ್ ವಜಾಗೊಳಿಸಲಾಗಿದೆ.

ನರ್ಸಿಂಗ್ ಕೌನ್ಸಿಲ್‌ಗೆ ಸಂಬಂಧ ದಿವ್ಯಾ ಹಾಗರಗಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್
ಕರ್ನಾಟಕ್​ ಹೈಕೋರ್ಟ್​
TV9 Web
| Edited By: |

Updated on:Aug 02, 2022 | 6:40 PM

Share

ಬೆಂಗಳೂರು: ನರ್ಸಿಂಗ್ ಕೌನ್ಸಿಲ್‌ಗೆ ಸಂಬಂಧಿಸಿದಂತೆ ದಿವ್ಯಾ ಹಾಗರಗಿ(Divya Hagargi) ಪಿಐಎಲ್(PIL) ಸಲ್ಲಿಸಿದ್ದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರಳೇ ಜೈಲಿನಲ್ಲಿರುವ ಹಿನ್ನೆಲೆ ದಿವ್ಯಾ ಹಾಗರಗಿ ಪಿಐಎಲ್ ಹೈಕೋರ್ಟ್(High Court) ವಜಾಗೊಳಿಸಿದೆ. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಸದ್ಯ ಜೈಲಿನಲ್ಲಿದ್ದು ನರ್ಸಿಂಗ್ ಕೌನ್ಸಿಲ್ ವಿಶೇಷಾಧಿಕಾರಿ ನೇಮಕ ಪ್ರಶ್ನಿಸಿ ಪಿಐಎಲ್ ಸಲ್ಲಿಸಿದ್ದರು. ಆದ್ರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರಳೇ ಜೈಲಿನಲ್ಲಿರುವ ಹಿನ್ನೆಲೆ ಪಿಐಎಲ್ ವಜಾಗೊಳಿಸಲಾಗಿದೆ.

ದಿವ್ಯಾ ಹಾಗರಗಿ ಡಾ.ರಾಮಕೃಷ್ಣಾರೆಡ್ಡಿ ನೇಮಕ ಪ್ರಶ್ನಿಸಿ ಪಿಐಎಲ್ ಸಲ್ಲಿಸಿದ್ದರು. ಯಾವ ಕಾರಣಕ್ಕೆ ದಿವ್ಯಾ ಹಾಗರಗಿ ಜೈಲಿನಲ್ಲಿದ್ದಾರೆ. ಯಾವ ಸಾರ್ವಜನಿಕ ಹೋರಾಟ ನಡೆಸಿ ದಿವ್ಯಾ ಜೈಲಿನಲ್ಲಿದ್ದಾರೆ. ತಮ್ಮ ಸಾಮಾಜಿಕ ಕಾರ್ಯದಿಂದಾಗಿ ಜೈಲಿನಲ್ಲಿದ್ದಾರೆಯೇ? ಎಂದು ದಿವ್ಯಾ ಹಾಗರಗಿ ಪರ ವಕೀಲರಿಗೆ ಹೈಕೋರ್ಟ್ ಪ್ರಶ್ನಿಸಿದೆ. ಈ ವೇಳೆ ದಿವ್ಯಾ ಪರ ವಕೀಲರು ಪಿಎಸ್ಐ ಹಗರಣ ಸಂಬಂಧ ದಿವ್ಯಾ ಜೈಲಿನಲ್ಲಿರುವುದಾಗಿ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ದಿವ್ಯಾ ಹಾಗರಗಿ ಪಿಐಎಲ್ ವಜಾಗೊಳಿಸಿ ಹೈಕೋರ್ಟ್ ಆದೇಶಿಸಿದೆ.

ಪುಣೆಗೆ ಪೊಲೀಸರು ಬಂದಿದ್ದಾರೆಂದು ತಿಳಿದಾದ ಸಾಕ್ಷ್ಯ ನಾಶಮಾಡಲು ದಿವ್ಯಾ ಹಾಗರಗಿ ತನ್ನ ಮೊಬೈಲ್​ನ ಏನು ಮಾಡಿದ್ದರು ಗೊತ್ತಾ?

ಕಲಬುರಗಿ (ಏಪ್ರಿಲ್ 30): 545 ಪಿಎಸ್ಐ ಹುದ್ದೆಗಳಿಗೆ (PSI Recruitment) ನೇಮಕಾತಿಯಲ್ಲಿ ನಡೆದ ಅಕ್ರಮ ವಿಚಾರಕ್ಕೆ ಸಂಬಂಧಿಸಿ ನಿನ್ನೆ (ಏಪ್ರಿಲ್ 29) ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು (Divya Hagargi) ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ದಿವ್ಯಾ ಹಾಗರಗಿ ಬಂಧನಕ್ಕೆ ಒಳಗಾಗಿದ್ದರು. ಪೊಲೀಸರು ಬಂದಿದ್ದಾರೆಂದು ತಿಳಿದಾಗ ದಿವ್ಯಾ ಮೊಬೈಲ್ ಒಡೆದು ಹಾಕಿದ್ದರಂತೆ. ಈ ಮೂಲಕ ಮೊಬೈಲ್​ನಲ್ಲಿರುವ ಸಾಕ್ಷ್ಯ ನಾಶಮಾಡಲು ಯತ್ನಿಸಿದ್ದಾರೆ. ಒಡೆದುಹಾಕಿದ್ದ ಮೊಬೈಲ್​ನ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಐವರ ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳ ಮೊಬೈಲ್​ನಲ್ಲಿ ಏನಾದ್ರೂ ಇದೆಯಾ ಎಂದು ತಪಾಸಣೆ ಮಾಡುತ್ತಿದ್ದಾರೆ. ಈ ವೇಳೆ 6 ಆರೋಪಿಗಳು ಮೊಬೈಲ್​ನಲ್ಲಿರುವ ಡಾಟಾವನ್ನು ಡಿಲೀಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ತಡರಾತ್ರಿವರೆಗೂ ಪರದಾಡಿದ ದಿವ್ಯಾ: ಇನ್ನು ಬಂಧನಕ್ಕೊಳಗಾಗಿರುವ ದಿವ್ಯಾ ಕಲಬುರಗಿಯ ಆಳಂದ ರಸ್ತೆಯಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ತಡರಾತ್ರಿವರೆಗೂ ಪರದಾಡಿದ್ದಾರೆ. ಮಹಿಳಾ ಸಾಂತ್ವನ ಕೇಂದ್ರದಲ್ಲಿ ನಿದ್ದೆ ಬಾರದೆ ಒದ್ದಾಡಿದ್ದಾರೆ. ಎಸಿ ರೂಮ್​ನಲ್ಲಿ ಮಲಗುತ್ತಿದ್ದ ದಿವ್ಯಾ ಫ್ಯಾನ್​ ಕೆಳಗೆ ಮಲಗುವ ಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ಮಧ್ಯಾಹ್ನ ಊಟ ನಿರಾಕರಿಸಿದ್ದರು. ಮಹಿಳಾ ಸಾಂತ್ವನ ಕೇಂದ್ರದಲ್ಲಿ ರಾತ್ರಿ ಸ್ವಲ್ಪ ಊಟ ಮಾಡಿದ್ದರು. ಕೋಟಿ ಕೋಟಿ ಸಂಪತ್ತಿದ್ದರೂ ಅಕ್ರಮ ಜಾಲದಲ್ಲಿ ಸಿಲುಕಿ ಪಶ್ಚಾತ್ತಾಪ ಪಡುವಂತಾಗಿದೆ. ತನ್ನನ್ನು ಭೇಟಿಯಾದವರ ಬಳಿ ಪಶ್ಚಾತ್ತಾಪದ ಮಾತಾಡಿದ್ದಾರೆ.

Published On - 6:38 pm, Tue, 2 August 22