ರಾಜ್ಯ ವಿಧಾನಸಭೆಯಲ್ಲಿ ಹಿಂದೂಗಳಿಗೆ ಕನಿಷ್ಠ 25 ಕ್ಷೇತ್ರ ಮೀಸಲಿಡಿ -ಹಿಂದೂ ಸಂಘಟನೆಯಿಂದ ವಿನೂತನ ಬೇಡಿಕೆ
ಮಹಿಳೆಯರು, ಪದವೀಧರರು, ಕಲಾಕಾರರು, ಸಾಹಿತಿಗಳು, ಅಲ್ಪಸಂಖ್ಯಾತರಿಗೆ ವಿಧಾನಸಭೆಯಲ್ಲಿ ಮೀಸಲಿಡಲಾಗಿದೆ. ಅದೇ ರೀತಿ ಹಿಂದೂಗಳಿಗೆ ಕನಿಷ್ಠ 25 ಕ್ಷೇತ್ರ ಮೀಸಲಿಡಬೇಕು ಎಂದು ಮಠಾಧಿಪತಿಗಳು, ಹಿಂದೂ ಸಂಘಟನೆಗಳ ಒಕ್ಕೂಟ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.
ಬೆಂಗಳೂರು: ಸರ್ವ ಧರ್ಮ ಸಮನ್ವಯ ಎಂಬ ಸಂದೇಶವನ್ನು ಸಾರಿದ್ದ ನಾಡಿನಲ್ಲೇ ಧರ್ಮ ಸಂಘರ್ಷಗಳಾಗುತ್ತಿವೆ. ಯಾವುದೇ ವಿವಾದ ಹುಟ್ಟಿಕೊಂಡರೂ ಅದು ಕೊನೆಗೆ ಧರ್ಮ ಸಂಕಷ್ಟದಲ್ಲೇ ಸಿಲುಕಿಕೊಳ್ಳುತ್ತಿದೆ. ಸದ್ಯ ಈಗ ರಾಜ್ಯದಲ್ಲಿ ಮತ್ತೊಂದು ಹೊಸ ಕೂಗು ಎದ್ದಿದೆ. ರಾಜ್ಯದಲ್ಲಿ ಹಿಂದೂ ಸಂಘಟನೆಗಳು(Hindu Activist) ವಿನೂತನ ಬೇಡಿಕೆಯನ್ನು ಮುಂಡಿಟ್ಟಿದ್ದಾರೆ. ವಿಧಾನಸಭೆಯಲ್ಲಿ 25 ಸ್ಥಾನ ಹಿಂದೂ ಸಂಘಟನೆಗಳಿಗೆ ಮೀಸಲಿಡಿ ಎಂದು ಬೇಡಿಕೆ ಇಟ್ಟಿದ್ದಾರೆ.
ವಿಧಾನಸಭೆಯಲ್ಲಿ ಕನಿಷ್ಠ 25 ಸೀಟು ಹಿಂದೂ ಸಂಘಟನೆ ಹಾಗೂ ಹಿಂದೂ ಹೋರಾಟಗಾರರಿಗೆ ಮೀಸಲಿಡಬೇಕು. ಮಹಿಳೆಯರು, ಪದವೀಧರರು, ಕಲಾಕಾರರು, ಸಾಹಿತಿಗಳು, ಅಲ್ಪಸಂಖ್ಯಾತರಿಗೆ ವಿಧಾನಸಭೆಯಲ್ಲಿ ಮೀಸಲಿಡಲಾಗಿದೆ. ಅದೇ ರೀತಿ ಹಿಂದೂಗಳಿಗೆ ಕನಿಷ್ಠ 25 ಕ್ಷೇತ್ರ ಮೀಸಲಿಡಬೇಕು ಎಂದು ಮಠಾಧಿಪತಿಗಳು, ಹಿಂದೂ ಸಂಘಟನೆಗಳ ಒಕ್ಕೂಟ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.
ಅಲ್ಲದೆ ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ನಾಯಕರಿಗೆ ಮನವಿ ಮಾಡಲು ನಿರ್ಧಾರ ಮಾಡಿದೆ. ಹಿಂದೂ ಸಂಘಟನೆಗಳು ಒಟ್ಟಾಗಿ ಒಕ್ಕೂಟ ಮಾಡಿಕೊಂಡು ಈ ನಿರ್ಣಯ ತೆಗೆದುಕೊಂಡಿವೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ಅಭಿನವ ಹಾಲಸ್ವಾಮಿ, ಧಾರವಾಡದ ಪರಮಾತ್ಮನಂದ ಸ್ವಾಮೀಜಿ, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಪ್ರಶಾಂತ್ ಸಂಬರಗಿ , ಮಂಡ್ಯ ಮಂಜು, ಭಜರಂಗ ಸೇನೆ, ಸನಾತನ ಪರಿಷತ್ತಿನ ಭಾಸ್ಕರನ್ ಭಾಗಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ರಾಜ್ಯದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಮೀಸಲಾತಿ ನೀಡುವಂತೆ ಹಿಂದೂ ಕಾರ್ಯಕರ್ತರಿಗೂ ಮೀಸಲಿಡಬೇಕು. ಹಿಂದೂಗಳಿಗೆ ಟಿಕೆಟ್ ಕೊಡ್ಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದ್ರು. ಹಿಂದೂ ಕಾರ್ಯಕರ್ತರು ಗೆದ್ದು ಬಂದ ಬಳಿಕ ವಿಧಾನಸೌಧದಲ್ಲಿ ಹಿಂದುತ್ವದ ಪರ ನಿಲ್ಲುತ್ತಾರೆ. ಆಜಾನ್, ಗೋಹತ್ಯೆ ವಿಚಾರದಲ್ಲೂ ಸರ್ಕಾರಕ್ಕೆ ಇನ್ನೂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಮತಾಂತರ ನಿಷೇಧ ಆದ್ರೂ ಈಗಲೂ ಮತಾಂತರ ಆಗ್ತಿದೆ. ಹಿಂದೂಗಳಿಗೆ ಅವಕಾಶ ಸಿಕ್ರೆ ಅಸಹಾಯಕ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಹಿಂದೂಗಳ ಪರ ಧ್ವನಿ ಎತ್ತುತ್ತಾರೆ. ಹೀಗಾಗೇ ಹಿಂದೂಪರ ಹೋರಾಟಗಾರರಿಗೆ ಟಿಕೆಟ್ ಸಿಗ್ಬೇಕು. ಸ್ವಾಮೀಜಿಗಳ ಹೋರಾಟಕ್ಕೆ ನಮ್ಮ ಬೆಂಬಲವಿದೆ. ನಾವು ಕುಡುಕ ಗಂಡನ್ನ (BJP) ಮದುವೆ ಆಗಿದಿವಿ. ಈಗ ಡಿವೋರ್ಸ್ ಕೊಡೋಕಾಗ್ತಿಲ್ಲ. ಹೀಗಾಗಿ ಬಿಜೆಪಿ 25 ಮಂದಿ ಪ್ರಕರ ಹಿಂದುತ್ವವಾದಿಗಳಿಗೆ ಟಿಕೆಟ್ ಕೊಡ್ಬೇಕು. ಯಾಕೆ ಪಿಎಫ್ ಐ ಬ್ಯಾನ್ ಮಾಡಿಲ್ಲ, ಎಸ್ ಡಿಪಿಐ ಬ್ಯಾನ್ ಮಾಡಿಲ್ಲ. ನೀವು ಅಧಿಕಾರಕ್ಕೆ ಬರೋವಾಗ ಒಂದು ಹೇಳ್ತಿರಿ. ಈಗ ಬೇರೆ ಮಾಡ್ತಿರಾ ? ಇದನ್ನ ತಪ್ಪಿಸಲೇ 25 ಪ್ರಕರ ಹಿಂದೂಗಳಿಗೆ ಟಿಕೆಟ್ ಕೊಡಿ. ನಾವು ಎಲ್ಲವನ್ನೂ ಸರಿಮಾಡಿ ತೋರಿಸ್ತಿವಿ. ಹೀಗಾಗಿ ವಿಜಯದಶಮಿವರೆಗೆ ಗಡುವು ನೀಡುತ್ತಿದ್ದೇವೆ.
ಮುಂದಿನ ನಡೆ ಯಾವರೀತಿ ಇರಲಿದೆ ಅನ್ನೋದನ್ನ ಕಾದು ನೋಡ್ತಿರಿ. ನಾವು ಭ್ರಷ್ಟರನ್ನೂ ಬಯಲಿಗೆಳೆಯುತ್ತೀವಿ. ನಮಗೆ ಒಂದು ಅವಕಾಶ ಕೊಡಿ. ಮೋದಿ ಹೇಳಿದಂತೆ ನಾವು ಕಾವೂಂಗ ನಾ ಕಾನೇದೂಂಗ ಅನ್ನೋದನ್ನ ಸಾಧಿಸುತ್ತೇವೆ. ಟೋಟಲ್ ಬಿಜೆಪಿ ಗದ್ದುಗೆ ಕುಸಿದು ಬೀಳೋ ಹಂತದಲ್ಲಿದೆ. ಹೀಗಾಗಿ ನಮ್ಮ 25 ಕ್ಷೇತ್ರದಲ್ಲಿ ಟಿಕೆಟ್ ಸಿಗೋ ವಿಶ್ವಾಸ ವಿದೆ. ಈ ವಿಚಾರದಲ್ಲಿ ನೋ ಕಾಂಪ್ರಮೈಸ್ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.