ರಂಗು ರಂಗಿನ ಬಣ್ಣದೋಕಳಿಗೆ ಸಿಲಿಕಾನ್​ ಸಿಟಿ ಸಜ್ಜು: ಬಣ್ಣವಾಡುವುದಕ್ಕೂ ಮುಂಚೆ ವೈದ್ಯರ ಸಲಹೆ ತಿಳಿಯಿರಿ

ಹೋಳಿ ಹಬ್ಬದ ಸಮಯದಲ್ಲಿ ಮಾರುಕಟ್ಟೆಯಲ್ಲಿ ಕೆಮಿಕಲ್ ಮಿಶ್ರಿತ ಹಾನಿಕಾರಕ ಬಣ್ಣಗಳ ಮಾರಾಟ ಹೆಚ್ಚಾಗಿವೆ. ಇವು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ವೈದ್ಯರು ಚರ್ಮದ ರಕ್ಷಣೆಗೆ ಸನ್‌ಸ್ಕ್ರೀನ್, ಮಾಯಿಶ್ಚರೈಸರ್ ಬಳಸಲು ಸಲಹೆ ನೀಡಿದ್ದಾರೆ. ಕೃತಕ ಬಣ್ಣಗಳ ಬಳಕೆಯನ್ನು ಕಡಿಮೆ ಮಾಡಿ, ಸುರಕ್ಷಿತ ಹಬ್ಬ ಆಚರಿಸಿ ಎಂದು ವೈದ್ಯರು ತಿಳಿಸಿದ್ದಾರೆ.

ರಂಗು ರಂಗಿನ ಬಣ್ಣದೋಕಳಿಗೆ ಸಿಲಿಕಾನ್​ ಸಿಟಿ ಸಜ್ಜು: ಬಣ್ಣವಾಡುವುದಕ್ಕೂ ಮುಂಚೆ ವೈದ್ಯರ ಸಲಹೆ ತಿಳಿಯಿರಿ
ರಂಗು ರಂಗಿನ ಬಣ್ಣದೋಕಳಿಗೆ ಸಿಲಿಕಾನ್​ ಸಿಟಿ ಸಜ್ಜು: ಬಣ್ಣವಾಡುವುದಕ್ಕೂ ಮುಂಚೆ ವೈದ್ಯರ ಸಲಹೆ ತಿಳಿಯಿರಿ
Edited By:

Updated on: Mar 13, 2025 | 9:48 PM

ಬೆಂಗಳೂರು, ಮಾರ್ಚ್​ 13: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದ್ದಂತೆ ಕರ್ನಾಟಕದ ಎಲ್ಲಡೆ ನಾಳೆ ರಂಗು ರಂಗಿನ ಹೋಳಿ (holi) ಹಬ್ಬ ಆಚರಣೆ ಮಾಡಲಾಗುತ್ತಿದೆ. ಇನ್ನು ಈ ವರ್ಷ ಹೋಳಿ ಹಬ್ಬ ವೀಕೆಂಡ್ ಬಂದಿರುವ ಹಿನ್ನಲೆ ಮತಷ್ಟು ರಂಗೇರಲಿದೆ. ಆದರೆ ಈ ನಡುವೆ ಮಾರಕಟ್ಟೆಗೆ ಚರ್ಮಕ್ಕೆ ಹಾನಿಕಾರಕ ಕೆಮಿಕಲ್ ಯುಕ್ತ ಬಣ್ಣಗಳು (colors) ಲಗ್ಗೆ ಇಟ್ಟಿವೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು ವೈದ್ಯರು ಹೋಳಿ ಪ್ರಿಯರಿಗೆ ಎಚ್ಚರಿಕೆ ನೀಡಿದ್ದಾರೆ.

ಹೋಳಿ ಹಬ್ಬ ಬಂತಂದರೆ ಸಾಕು ಅಂಗಡಿಗಳಲ್ಲಿ ತರಾವರಿ ಬಣ್ಣ ಸಿಗತ್ತೆ. ಆದರೆ ಇತ್ತೀಚೆಗೆ ಮಾರುಕಟ್ಟೆಗಳಿಗೆ ಬರುವ ಈ ಬಣ್ಣಗಳಲ್ಲಿ ಕೆಮಿಕಲ್ ಮಿಕ್ಸ್ ಕೂಡ ಮಾಡಲಾಗಿರುತ್ತದೆ. ಈ ಹಾನಿಕಾರಕ ರಾಸಾಯನಿಕಯುಕ್ತ ಬಣ್ಣ ಸ್ಕಿನ್‌ಗೆ ಡೇಂಜರ್ ಅದರಲ್ಲೂ ಈಗ ಬೇಸಿಗೆ ಬಿಸಿಲು ಇರೋದ್ರಿಂದ ರಾಸಾಯನಿಕ ಬಣ್ಣ ಚರ್ಮಕ್ಕೆ ಇನ್ನಷ್ಟು ಹಾನಿ ಹಿನ್ನಲೆ ಆರೋಗ್ಯದ ದೃಷ್ಟಿಕೋನದಿಂದ ಕೆಮಿಕಲ್ ಅಳವಡಿಸಿದ ಬಣ್ಣದ ಬಗ್ಗೆ ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಹೋಳಿ ಹಬ್ಬಕ್ಕೆ ಕೌಂಟ್​ಡೌನ್: ಕೆಮಿಕಲ್ ಮಿಶ್ರಿತ ಬಣ್ಣ, ಆಹಾರ ಪದಾರ್ಥಗಳ ಮಾರಟಕ್ಕೆ ಬ್ರೇಕ್ ಹಾಕುವಂತೆ ಎಚ್ಚರಿಕೆ

ಇದನ್ನೂ ಓದಿ
ಹೋಳಿ ಹಬ್ಬಕ್ಕೆ ಬಜೆಟ್ ಫ್ರೆಂಡ್ಲಿ ಅಲಂಕಾರಿಕ ಐಡಿಯಾಗಳು ಇಲ್ಲಿವೆ
ಅನ್ಯರ ನಿಂದನೆಗೇ ಇರುವ ಹಬ್ಬ ಹೋಳಿ ಹುಣ್ಣಿಮೆ!
ಹೋಳಿ ಹಬ್ಬಕ್ಕೆ ಕೌಂಟ್​ಡೌನ್: ಕೆಮಿಕಲ್ ಬಣ್ಣದ ಬಗ್ಗೆ ಆಹಾರ ಇಲಾಖೆ ಎಚ್ಚರಕೆ
ಹೋಳಿ ಆಡುವ ಮುನ್ನ ಹಾಗೂ ನಂತರ ತ್ವಚೆಯ ಆರೈಕೆ ಹೀಗೆ ಮಾಡಿ

ಹಾನಿಕಾರಕ ಬಣ್ಣಗಳ ಬಳಕಯಿಂದ ಹಾಗೂ ಇತರೆ ಅಪಾಯಕಾರಿಗಳ ಬಣ್ಣಗಳನ್ನ ಬಳಕೆ ಮಾಡುವುದರಿಂದ ಚರ್ಮದ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಸ್ಕಿನ್ ಹಾಳಾಗಿ ತೊಂದರೆಯಾಗುವ ಅಪಾಯದ ಎಚ್ಚರಿಕೆಯನ್ನ ವೈದ್ಯರು ನೀಡಿದ್ದಾರೆ.

ಇನ್ನು ಹೋಳಿ ಎಂದರೆ ಬಣ್ಣದೋಕುಳಿಯ ಹಬ್ಬ. ರಂಗು ರಂಗಿನ ಬಣ್ಣ ಎರುಚುವುದರೊಂದಿಗೆ ಸ್ನೇಹಿತರು ಬಂಧು ಬಾಂಧವರು ನೆರೆ ಹೋರೆಯವರು ಪ್ರೀತಿ ಬೆಸೆಯುವ ಹಬ್ಬವಾಗಿದೆ. ಒಂದಡೆ ಹಬ್ಬದ ಸಂಭ್ರಮವಾದರೆ ಮತ್ತೊಂದಡೆ ಹೋಳಿಯಲ್ಲಿ ಇತ್ತೀಚೆಗೆ ಸಹಜ ಬಣ್ಣಗಳ ಬಳಕೆಯ ಬದಲಾಗಿ ಹೆಚ್ಚು ಕೆಮಿಕಲ್ ಯುಕ್ತ ಸಿಂಥೆಟಿಕ್ ಬಣ್ಣಗಳ ಬಳಕೆಯಾಗುತ್ತಿದೆ. ಇದರಿಂದ ಚರ್ಮದ ಸಮಸ್ಯೆ ಅಲರ್ಜಿ, ಮೊಡುವೆ ಹಾಗೂ ಕೂದುಲು ಸಮಸ್ಯೆ, ತುರಿಕೆ, ಸುಟ್ಟಂತಹ ಅನುಭವ, ಇನ್ನು ಕೆಲವರಿಗೆ ಚರ್ಮ ಕೆಂಪಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಕೊಂಚ ಎಚ್ಚರಿಕೆವಹಿಸುವಂತೆ ಕೆ.ಸಿ ಜನರಲ್ ಆಸ್ಪತ್ರೆ ಚರ್ಮ ತಜ್ಞ ಡಾ ಧ್ಯಾನೇಶ್​ ಹೇಳಿದ್ದಾರೆ.

ಹೋಳಿಗೆ ಮುನ್ನೆಚ್ಚರಿಕೆ ಕ್ರಮಗಳು ಏನು?

  • ತ್ವಚ್ಛೆ ಕೈ ಕಾಲುಗಳಿಗೆ ಮಾಯಿಶ್ಚರೈಯಿಸ್ ಮಾಡಬೇಕು.
  • ಸನ್ ಸ್ಕ್ರಿನ್ ಬಳಸಬೇಕು
  • ಕೂದಲಿಗೆ ಎಣ್ಣೆ ಹಚ್ಚುವುದು ಉತ್ತಮ
  • ಕೈ ಕಾಲು ಉಗುರು ಟ್ರೀಮ್ ಮಾಡಬೇಕು.
  • ಕೈ ಕಾಲು ಉಗುರಿನ ಕೆಳಗಡೆ ಬಣ್ಣ ಇರದ್ದಂತೆ ಸ್ವಚ ಮಾಡುವುದು
  • ಲಿಪ್ ಬಾಮ್ ಬಳಕೆ ಮಾಡಬೇಕು.
  • ಹೋಳಿಗೂ ಮೊದಲು ನಂತರ ಯಾವುದೇ ಥ್ರೆಡಿಂಗ್, ಬ್ಲೀಚಿಂಗ್ ಲೇಸರ್ ಚಿಕಿತ್ಸೆ ಮಾಡಬಾರದು.

ಒಟ್ಟಿನಲ್ಲಿ ಆಹಾರ ಇಲಾಖೆ ಹಬ್ಬದ ನಡುವೆ ಕಳಪೆ ಹಾಗೂ ಕಲಬೆರಕೆ ಆಹಾರಗಳ ವಿರುದ್ಧ ಸಮರ ಸಾರಿದೆ. ಇನ್ನೊಂದಡೆ ಜನರು ಹೋಳಿ ಹಬ್ಬವನ್ನ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಆಚರಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.