AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ಮಹತ್ವದ ಮಾಹಿತಿ ಬಿಚ್ಚಿಟ್ಟ ಗೃಹ ಸಚಿವ ಪರಮೇಶ್ವರ

ರಾಜ್ಯದಲ್ಲಿ ಹಾಸನ‌ ಜಿಲ್ಲೆಯಲ್ಲಿ ನಡೆದ ಲೈಂಗಿಕ ಪ್ರಕರಣ ಸದ್ದು ಮಾಡುತ್ತಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, ‘ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗಿದ್ದಾರೆ. ಅವರನ್ನು​ ಕರೆತರಲು ಈಗಾಗಲೇ ಎಸ್​ಐಟಿ ತಂಡ ಸಿಬಿಐ ನೆರವು ಕೋರಿದ್ದು, ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದೆ. ಪ್ರಜ್ವಲ್​ ವಾಪಸ್​ ಬರೋವರೆಗೂ ತ್ವರಿತಗತಿ ವಿಚಾರಣೆ ಕಷ್ಟ ಎಂದಿದ್ದಾರೆ.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ಮಹತ್ವದ ಮಾಹಿತಿ ಬಿಚ್ಚಿಟ್ಟ ಗೃಹ ಸಚಿವ ಪರಮೇಶ್ವರ
ಗೃಹ ಸಚಿವ ಪರಮೇಶ್ವರ
TV9 Web
| Edited By: |

Updated on: May 08, 2024 | 4:54 PM

Share

ಬೆಂಗಳೂರು, ಮೇ.08: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ(G Parameshwara), ‘ಈ ಪ್ರಕರಣವನ್ನು ಎಸ್​​ಐಟಿ(SIT) ಗಂಭೀರವಾಗಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗಿದ್ದಾರೆ. ಅವರನ್ನು​ ಕರೆತರಲು ಈಗಾಗಲೇ ಎಸ್​ಐಟಿ ತಂಡ ಸಿಬಿಐ ನೆರವು ಕೋರಿದ್ದು, ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದೆ. ಪ್ರಜ್ವಲ್​ ವಾಪಸ್​ ಬರೋವರೆಗೂ ತ್ವರಿತಗತಿ ವಿಚಾರಣೆ ಕಷ್ಟ ಎಂದಿದ್ದಾರೆ.

ಪ್ರಜ್ವಲ್ ರೇವಣ್ಣ ಪ್ರಕರಣವನ್ನ ಸಿಬಿಐಗೆ ವಹಿಸುವ ಅವಶ್ಯಕತೆ ಬರೋದಿಲ್ಲ

ಇನ್ನು ಮಹಿಳೆ ಅಪಹರಣ ಪ್ರಕರಣ ಸಂಬಂಧ ರೇವಣ್ಣನನ್ನು ಬಂಧಿಸಲಾಗಿದೆ. ಜೊತೆಗೆ ದೂರು ನೀಡಿದವರಿಂದ ಮಾಹಿತಿ ಕೂಡ ಸಂಗ್ರಹ ಮಾಡಲಾಗುತ್ತಿದ್ದು, ಈ ಪ್ರಕರಣದ ಕುರಿತು ಎಸ್​ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ರೇವಣ್ಣ, ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡುವಂತೆ HD ಕುಮಾರಸ್ವಾಮಿ ಆಗ್ರಹ ವಿಚಾರ, ‘ ಪ್ರಕರಣವನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಬರುವುದಿಲ್ಲ. ಎಸ್​ಐಟಿ ತನಿಖೆ ಬಗ್ಗೆ ವಿಶ್ವಾಸ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಕುಮಾರಸ್ವಾಮಿಗೆ ಎಸ್​ಐಟಿ ಬಗ್ಗೆ ಗೊತ್ತಿದೆ. ಎಸ್​ಐಟಿ ತಂಡ ಸಮರ್ಥವಾಗಿಯೇ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ನಾನಾಗಲಿ, ಸಿಎಂ, ಡಿಸಿಎಂ ಯಾರೂ ಹಸ್ತಕ್ಷೇಪ ಮಾಡಲ್ಲ. ಜೊತೆಗೆ ಹೆಚ್​ಡಿಕೆ ಅವಧಿಯಲ್ಲೂ ಯಾವುದೇ ಪ್ರಕರಣ ಸಿಬಿಐಗೆ ನೀಡಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಹಿಂದೆ ರಾಜ್ಯ ಬಿಜೆಪಿ ನಾಯಕರಿದ್ದಾರೆ: ರವಿಕುಮಾರ್ ಗಣಿಗ, ಶಾಸಕ

ಡಿಕೆ ಶಿವಕುಮಾರ್​ ವಿರುದ್ಧ ದೂರು ವಿಚಾರ, ‘ಅವರಿಗೆ ನೋಟೀಸ್ ಕೊಡೋ ಬಗ್ಗೆ ಎಸ್​ಐಟಿ ತೀರ್ಮಾನ ಮಾಡುತ್ತದೆ. ಅವರ ಮೇಲೆ ನಮಗೆ ವಿಶ್ವಾಸ ಇದೆ. ವರದಿ ಕೊಡಲಿ ನೊಡೋಣ ಎಂದರು. ಬಳಿಕ ಸಿಎಂ ಎಸ್​ಐಟಿ ಸಭೆ, ‘ನಾನು ಡಿಸ್ ಕ್ಲೋಸ್ ಮಾಡಲ್ಲ. ಆದ್ರೆ, ಸಿಎಂ ಹಾಗೂ ಗೃಹ ಸಚಿವರಿಗೆ ಮಾಹಿತಿ ಇರಬೇಕಲ್ವಾ.?, ಹಾಗಾಗಿ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೀತೀವಿ. ಇದೇ ವೇಳೆ ಡಿಸಿಎಂ ಡಿಕೆಶಿ ದೇವರಾಜೇಗೌಡ ಜೊತೆ ಮಾತಾಡಿರೋ ಆಡಿಯೋ ರಿಲೀಸ್ ಕುರಿತು, ‘SIT ಅದನ್ನೂ ಗಮನಿಸುತ್ತೆ. ಡಿಕೆಶಿ  ಡಿಸಿಎಂ ಇದ್ದಾರೆ. ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದಾರೆ. ಅವರಿಗೆ ಶಿಕ್ಷೆ ಆಗಬಾರದು ಎಂದು ಏನಿಲ್ಲ.

ಪರಮೇಶ್ವರಗೆ ಬೆನ್ನು ಮೂಳೆ ಇದೆಯಾ ಎಂದ ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿದ ಪರಮೇಶ್ವರ ಅವರು, ‘ನಮ್ಮನ್ನ ಆರಿಸಿ ಜನ ಕಳಿಸಿದ್ದಾರೆ. ಅವರು ಅಧಿಕಾರ ಹಿಡಿದಿಲ್ಲ. ಅವರು ಖುಷಿ ಪಡಬೇಕು ನಾವಾಗಿದ್ದೇವೆ ಅಂತ. ಅದು ಬಿಟ್ಟು ಬೆನ್ನು ಮೂಳೆ ಅಂತೆಲ್ಲಾ ಮಾತಾಡಬಾರದು. ಬಳಿಕ ಇಂಟಲಿಜೆನ್ಸ್ ಫೇಲ್ಯೂರ್ ವಿಚಾರ, ಇಮಿಗ್ರೇಷನ್ ಯಾರ ಬಳಿ ಇದೆ. ಬ್ಲೇಮ್ ಗೇಮ್ ಮಾಡೋದಾದ್ರೆ ಮಾವೂ ಅವರ ಮೇಲೆ ಹೇಳಬಹುದು. ಕೇಂದ್ರ ನಮಗೆ ಸಹಕಾರ ನೀಡಲಿ, ಯಾರೂ ಕೂಡ ಪ್ರಭಾವ ಬೀರಲು ಸಾಧ್ಯವಿಲ್ಲ. ನಾವ್ಯಾರೂ ಹೀಗೆ ಮಾಡಿ ಎಂದು ಇನ್ಸ್‌ಸ್ಟ್ರಕ್ಷನ್ ಕೊಟ್ಟಿಲ್ಲ. ಈ ಕುರಿತು SIT ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ