ನಾಳೆ ನಾರಾಯಣಗೌಡಗೆ ಜಾಮೀನು ಸಿಗುವ ನಿರೀಕ್ಷೆ: ಪರಪ್ಪನ ಅಗ್ರಹಾರ ಬಳಿ ಕರವೇ ಕಾರ್ಯಕರ್ತರ ಹರ್ಷ
ನಾಳೆ(ಜ.06) ಕರವೇ ನಾರಾಯಣ ಗೌಡ(Narayana Gowda)ರಿಗೆ ಜಾಮೀನು ಸಿಗುವ ನಿರೀಕ್ಷೆ ಹಿನ್ನೆಲೆ ಪರಪ್ಪನ ಅಗ್ರಹಾರ ಬಳಿ ಕರವೇ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸುತ್ತಿದ್ದು, ಕರವೇ(Karave) ರಾಜ್ಯ ಘಟಕದ ಮುಖಂಡರು ಘೋಷಣೆ ಕೂಗುತ್ತಿದ್ದಾರೆ.
ಬೆಂಗಳೂರು, ಜ.05: ನಾಳೆ(ಜ.06) ಕರವೇ ನಾರಾಯಣ ಗೌಡ(Narayana Gowda)ರಿಗೆ ಜಾಮೀನು ಸಿಗುವ ನಿರೀಕ್ಷೆ ಹಿನ್ನೆಲೆ ಪರಪ್ಪನ ಅಗ್ರಹಾರ ಬಳಿ ಕರವೇ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸುತ್ತಿದ್ದು, ಕರವೇ(Karave) ರಾಜ್ಯ ಘಟಕದ ಮುಖಂಡರು ಘೋಷಣೆ ಕೂಗುತ್ತಿದ್ದಾರೆ. ಈ ವೇಳೆ ಮಾತನಾಡಿದ ಕರವೇ ರಾಜ್ಯ ಉಪಾಧ್ಯಕ್ಷ ಸತೀಶ್ ಗೌಡ ‘ಈ ಸರ್ಕಾರ ಕನ್ನಡಿಗರ ವಿರೋಧಿಯಾಗಿದೆ. ಸಿದ್ದರಾಮಯ್ಯ ಕನ್ನಡ ರಾಮಯ್ಯ ಅಂತಾರೆ. ಆದರೆ, ಕನ್ನಡಿಗರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಸಿಎಂ ವಿರುದ್ದ ಕಿಡಿಕಾರಿದರು.
ನಾರಾಯಣಗೌಡ ಬಂಧನ ವಿರೋಧಿಸಿ ನಿರಂತರವಾಗಿ ಪ್ರತಿಭಟನೆ
ನಮ್ಮ ವಕೀಲರ ತಂಡ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ನಾರಾಯಣ ಗೌಡ ಬಂಧನ ವಿರೋಧಿಸಿ ನಿರಂತರವಾಗಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ನಾಳೆ(ಜ.06) ಅವರ ಬಿಡುಗಡೆ ಆಗದಿದ್ದರೆ ಉಗ್ರವಾದ ಹೋರಾಟ ಮಾಡುತ್ತೇವೆ. ಅನೇಕ ಸ್ವಾಮೀಜಿಗಳ ಜೊತೆ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಯಲಿದೆ. ನಾವು ಕರ್ನಾಟಕದಲ್ಲಿ ಕನ್ನಡ ನಾಮಫಲಕ ಹಾಕಿ ಎಂದು ಹೇಳುತ್ತಿರುವುದು. ನಾವು ತಮಿಳುನಾಡಿನಲ್ಲಿ ಅಥವಾ ಬೇರೆ ರಾಜ್ಯಕ್ಕೆ ಹೋಗಿ ಕೇಳಿದರೆ ತಪ್ಪಾಗುತ್ತಿತ್ತು.
ಇದನ್ನೂ ಓದಿ:ಕರವೇ ನಾರಾಯಾಣಗೌಡ ಬಂಧನ: ಸರ್ಕಾರದ ಧೋರಣೆಯನ್ನ ನಾವು ಖಂಡಿಸುತ್ತೇವೆ; ಸಾಹಿತಿ ದೊಡ್ಡರಂಗೇಗೌಡ
ಮಹಿಳಾ ಕಾರ್ಯಕರ್ತರ ಟಾರ್ಗೆಟ್
ಈಗ ಮಹಿಳಾ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದ್ದು, ಚಿಕ್ಕಜಾಲನಲ್ಲಿ ಮಹಿಳಾ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಕನ್ನಡ ಹೋರಾಟಗಾರ್ತಿಯರ ಮೇಲೆ ರೌಡಿಶೀಟರ್ ತೆರೆಯುತ್ತಿದ್ದಾರೆ. ಇದೆಲ್ಲವೂ ತಿಳಿದಿದ್ದರೂ ಗೃಹಮಂತ್ರಿ ಹಾಗೂ ಸಿದ್ರರಾಮಯ್ಯ ಸಂಪೂರ್ಣವಾಗಿ ಮೌನವಹಿಸಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕರವೇ ರಾಜ್ಯ ಉಪಾಧ್ಯಕ್ಷ ಸತೀಶ್ ಗೌಡ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ