ಪರಪ್ಪನ ಅಗ್ರಹಾರ ಜೈಲಿನಲ್ಲಿ ದುಡ್ಡಿದ್ದವರದ್ದೇ ದುನಿಯಾ: ಬಿಸಿ ನೀರು, ಎಣ್ಣೆ, ಸಿಗರೇಟು, ಊಟಕ್ಕೆ ಒಂದೊಂದು ರೇಟ್

|

Updated on: Aug 26, 2024 | 5:26 PM

ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರದಲ್ಲಿನ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ದರ್ಶನ್​ ರಾಜಾತಿಥ್ಯದ ಫೋಟೋ ವೈರಲ್​ ಬೆನ್ನಲ್ಲೇ ಟಿವಿ9 ಅಲ್ಲಿ ಅವ್ಯವಸ್ಥೆ ಕುರಿತು ನಿರಂತರವಾಗಿ ವರದಿ ಪ್ರಸಾರ ಮಾಡಿತ್ತು. ಇದರ ನಡುವೆ ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಎಕ್ಸ್​ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ದುಡ್ಡಿದ್ದವರದ್ದೇ ದುನಿಯಾ: ಬಿಸಿ ನೀರು, ಎಣ್ಣೆ, ಸಿಗರೇಟು, ಊಟಕ್ಕೆ ಒಂದೊಂದು ರೇಟ್
ಪರಪ್ಪನ ಅಗ್ರಹಾರ ಜೈಲ್​
Follow us on

ಬೆಂಗಳೂರು, (ಆಗಸ್ಟ್ 26): ಪರಪ್ಪನ ಅಗ್ರಹಾರ ಜೈಲಿನಲ್ಲೂ ದುಡ್ಡಿದ್ದವರದ್ದೇ ದುನಿಯಾ ಎನ್ನುವಂತಿದೆ. ಟಿವಿ9ಗೆ ಸಿಕ್ಕಿರುವ ಮತ್ತೊಂದು ಎಕ್ಸ್​ಕ್ಲೂಸಿವ್​ ಮಾಹಿತಿ ಏನಂದ್ರೆ, ಇಲ್ಲಿ ದರ್ಶನ್​ ಮಾತ್ರವಲ್ಲ ಪ್ರತಿ ಕೈದಿಗಳಿಗೂ ಸಿಗುತ್ತಂತೆ ಸವಲತ್ತು. ಸವಲತ್ತು ಬೇಕಾದ್ರೆ ಸಾವಿರಾರು ರೂಪಾಯಿ ದುಡ್ಡು ಕೊಡಬೇಕಂತೆ. ಹೌದು..ಬಿಸಿ ನೀರು, ಎಣ್ಣೆ, ಸಿಗರೇಟು, ಸ್ಪೆಷನ್​ ಊಟಕ್ಕೆ ಒಂದೊಂದು ರೇಟ್ ಫಿಕ್ಸ್ ಮಾಡಲಾಗಿದೆ. ಇನ್ನು ಪ್ರಮುಖವಾಗಿ ಜೈಲಿನಲ್ಲಿ ವಸ್ತುಗಳ ಸಪ್ಲೈ ಮಾಡಲು ಒಂದು ಪ್ರತ್ಯೇಕ ಸಿಂಡಿಕೇಟ್ ಇದೆ. ಹೌದು..ಸಿನಿಮಾಗಳಂತೆ ಪರಪ್ಪನ ಅಗ್ರಹಾರ ಜೈಲಿನಲ್ಲೂ ಕೈದಿಗಳದ್ದೇ ದರ್ಬಾರ್. 10 ವರ್ಷಕ್ಕಿಂತ ಹೆಚ್ಚು ಕಾಲ ಇರುವ ಕೈದಿಗಳೇ ಈ ಸಿಂಡಿಕೇಟ್​ನ ಸದಸ್ಯರು. ಯಾವ ಕೈದಿಗಳು ಯಾವ ಯಾವ ಸೆಲ್​​ನಲ್ಲಿ ಇರಬೇಕು? ಎಷ್ಟು ಹಣಕ್ಕೆ ಯಾವ ಸೌಲಭ್ಯ ಕೊಡಬೇಕೆಂದು ಡಿಸೈಡ್ ಮಾಡುತ್ತಾರೆ. ಈ ಎಲ್ಲಾ ಸ್ಫೋಟಕ ಅಂಶಗಳನ್ನು ಖುದ್ದು ಜೈಲಿನಿಂದ ಬಿಡುಗಡೆಯಾಗಿರುವ ವ್ಯಕ್ತಿಯೋರ್ವ ಬಿಚ್ಚಿಟ್ಟಿದ್ದಾರೆ.

ಜೈಲಿನಲ್ಲಿ ವಸ್ತುಗಳ ಸಪ್ಲೈಗಿದೆ ಒಂದು ಪ್ರತ್ಯೇಕ ಸಿಂಡಿಕೇಟ್

ಜೈಲಿನಲ್ಲಿ ವಸ್ತುಗಳ ಸಪ್ಲೈಗೆ ಒಂದು ಪ್ರತ್ಯೇಕ ಸಿಂಡಿಕೇಟ್ ಇದ್ಯಂತೆ. 10 ವರ್ಷಕ್ಕಿಂತ ಹೆಚ್ಚು ಕಾಲ ಇರುವ ಕೈದಿಗಳೇ ಈ ಸಿಂಡಿಕೇಟ್​ಗೆ ಸದಸ್ಯರಾಗಿದ್ದಾರಂತೆ. ಕೈದಿಗಳಿಗೆ ಏನು ನೀಡಬೇಕೆಂದು ಕೈದಿಗಳಿಂದಲೇ ನಿರ್ಧಾರ ಮಾಡ್ತಾರಂತೆ. ಸಿಂಡಿಕೇಟ್ ಸೇರುವ ಸ್ವಯಂಸೇವಕ ಸೀನಿಯರ್ ಕೈದಿಗಳಾಗಿದ್ದು, ಹಣ ಕೊಡುವ ಕೈದಿಗಳಿಗೆ ಈ ‘ಸ್ವಯಂಸೇವಕರ’ ಸವಲತ್ತು ಸಿಗಲಿದೆ. ಯಾವ ಕೈದಿಗಳು ಯಾವ ಯಾವ ಸೆಲ್​​ನಲ್ಲಿ ಇರಬೇಕು?. ಎಷ್ಟು ಹಣಕ್ಕೆ ಯಾವ ಸೌಲಭ್ಯ ಕೊಡಬೇಕೆಂದು ಡಿಸೈಡ್ ಮಾಡಲಾಗುತ್ತೆ.

ಬಿಸಿ ನೀರಿಗೆ ಒಂದು ರೇಟ್, ಸಿಗರೇಟಿಗೆ ಒಂದು ರೇಟ್, ಊಟಕ್ಕೆ ಒಂದು ರೇಟ್, ಎಣ್ಣೆಗೆ ಒಂದು ರೇಟ್, ಫೋನ್, ಬೆಡ್, ಮಸಾಜ್ ಸೇರಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಮಾಡಲಾಗುತ್ತಂತೆ. ಕೈದಿಗಳಿಂದ ವ್ಯವಸ್ಥಿತವಾಗಿ ಹಣ ಸಂಗ್ರಹಿಸುವ ಸ್ವಯಂಸೇವಕರು, ಕೈದಿಗಳ ಭೇಟಿಗೆ ಆಗಮಿಸ್ತಿದ್ದವರಿಂದ ಹಣ ಪಡೆಯುತ್ತಾರಂತೆ. ಫೋನ್ ಪೇ, ಗೂಗಲ್ ಪೇ, ಬ್ಯಾಂಕ್ ಗಳಿಂದ ಹಣ ವರ್ಗಾವಣೆ ಮಾಡಿಸಿಕೊಂಡು, ಕೈದಿಗಳಿಂದ ಸಿಂಡಿಕೇಟ್ ಸದಸ್ಯರಿಗೆ ಹಣ ನೀಡಲಾಗುತ್ತಂತೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ನಡೆದಿರವುದು ತಿಳಿದಿದೆ: ಸತ್ಯ ಒಪ್ಪಿಕೊಂಡ ಗೃಹ ಸಚಿವ

ಹುಡುಗಿಯನ್ನೂ ಕಳುಹಿಸುತ್ತಾರೆ

ಈ ಆರೋಪಗಳಿಗೆ ಪುಷ್ಠಿ ನೀಡುವಂತೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿದ್ದ ಕೈದಿಯೊಬ್ಬರು ಸ್ಫೋಟಕ ಆರೋಪ ಮಾಡಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಆ ವ್ಯಕ್ತಿ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಲ್ಲಾ ಕೈದಿಗಳ ಬಳಿ ಮೊಬೈಲ್​ ಇದ್ದು, ಜೈಲಿನಲ್ಲಿ ಹಣ ಕೊಟ್ಟರೆ ಏನು ಬೇಕಾದ್ರೂ ಸಿಗುತ್ತೆ. ಹೊರಗಿನಿಂದ ಚಿಕನ್​, ಮಟನ್​ ತರಿಸಿಕೊಂಡು ಅಡುಗೆ ಮಾಡಿಕೊಳ್ತಾರೆ. ನನಗೂ ಕೂಡ ಪ್ರತಿಯೊಂದು ವಸ್ತು ಹೊರಗಡೆಯಿಂದಲೇ ಬರುತ್ತಿತ್ತು. ನಾನು ಸೌಲಭ್ಯ ಪಡೆಯಲು ಸುಮಾರು 1.30 ಲಕ್ಷ ಹಣ ಖರ್ಚು ಮಾಡಿದ್ದೆ. ಸೆಂಟ್ರಲ್ ಜೈಲಿನ ದಂಧೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಡ್ಡಿ ದಂಧೆ ನಡೆಯುತ್ತೆ ಅಂದರೆ ಏನರ್ಥ? 35 ಸಾವಿರ ರೂ. ಕೊಟ್ಟರೆ ಹುಡುಗಿಯನ್ನೂ ಸಹ ಕಳುಹಿಸುತ್ತಾರೆ. ಪರಪ್ಪನ ಅಗ್ರಹಾರ ಜೈಲಿನ ಒಳಗಡೆ ಪ್ರತಿಯೊಂದು ವಸ್ತು ಸಿಗುತ್ತದೆ ಎಂದು ಸ್ಫೋಟಕ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.

ಅದೇನೇ ಹೇಳಿ ಪರಪ್ಪನ ಅಗ್ರಹಾರದಲ್ಲಿ ಕರ್ಮಕಾಂಡದ ಗಿಡ ಹೆಮ್ಮರವಾಗಿ ಬೆಳೆದಿದೆ ಎನ್ನುವದಕ್ಕೆ ಇನ್​​ಸೈಡ್​ ಆಗಿ ಸಿಗುತ್ತಿರುವ ಮಾಹಿತಿ ಬಿಡುಗಡೆ ಆದ ಕೈದಿಗಳಿಂದ ಗೊತ್ತಾಗ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:07 pm, Mon, 26 August 24