ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಯಕ್ಷ ಸಂಕ್ರಾಂತಿ’ ವೈಭವ ಯಾವಾಗ? ಇಲ್ಲಿದೆ ನೋಡಿ ಮಾಹಿತಿ
ಯಕ್ಷಗಾನ ಕರಾವಳಿಯ ಸಂಸ್ಕೃತಿಯನ್ನು ಎತ್ತರಕ್ಕೆ ಏರಿಸಿದ ಅದ್ಭುತ ಕಲೆ. ದೇವರಕಲೆಯೆನಿಸಿಕೊಂಡಿರುವ ಯಕ್ಷಗಾನಕ್ಕೆ ದೊಡ್ಡ ಅಭಿಮಾನಿ ಬಳಗವೇ ಇದೆ. ಹೀಗಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸದಾ ಒಂದಲ್ಲ ಒಂದು ಯಕ್ಷಗಾನ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಆದರೆ ಇದೀಗ ಯಕ್ಷಸಂಕ್ರಾಂತಿ ಕಾರ್ಯಕ್ರಮದಲ್ಲಿ ಎಂಟು ಮೇಳಗಳ ಕಲಾವಿದರು ಮತ್ತು ಅತಿಥಿ ಕಲಾವಿದರ ಸಮಾಗಮವಾಗಲಿದ್ದು, ಈ ಕಾರ್ಯಕ್ರಮದಲ್ಲಿ ನೀವು ಭಾಗಿಯಾಗಲು ಅವಕಾಶವಿದೆ. ಹಾಗಾದ್ರೆ ಈ ಯಕ್ಷಸಂಕ್ರಾಂತಿದ ವಿಶೇಷವೇನು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರಾವಳಿಯ ಗಂಡು ಕಲೆ ಯಕ್ಷಗಾನವು ಲಿಂಗ ಭೇದವಿಲ್ಲದೆ ವಯಸ್ಸಿನ ಮಿತಿಯಿಲ್ಲದೆ ಮಕ್ಕಳು, ಯುವಕ, ಯುವತಿಯರು ಹಾಗೂ ವಯೋವೃದ್ಧರು ಹೀಗೆ ಎಲ್ಲರನ್ನು ಆವರಿಸಿಕೊಂಡು ಬಿಟ್ಟಿದೆ. ಸಾಮಾನ್ಯವಾಗಿ ಮಳೆಗಾಲ ಮುಗಿಯುತ್ತಿದ್ದಂತೆ ಯಕ್ಷಗಾನ ಪ್ರದರ್ಶನಗಳು ಆರಂಭವಾಗುತ್ತದೆ. ಈ ಮೇ ತಿಂಗಳು ಮುಗಿಯುತ್ತಿದ್ದಂತೆ ಯಕ್ಷಗಾನ ಮೇಳಗಳಿಗೆ ಒಂದು ವಿರಾಮದ ಕಾಲ. ಆದರೆ ಬೆಂಗಳೂರಿನ ಯಕ್ಷಾಭಿಮಾನಿಗಳನ್ನು ರಂಜಿಸಲು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ
ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯಲ್ಲಿ ನಡೆಯುವ ಯಕ್ಷ ಸಂಕ್ರಾಂತಿಯಲ್ಲಿ ಶ್ರೀ ಕೃಷ್ಣ ಸಂಧಾನ, ಸುಧನ್ವ, ಧರ್ಮಾಂಗಧ ಹಾಗೂ ತ್ರಾಮ ಧ್ವಜ ಈ ನಾಲ್ಕು ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ. ಸೆಪ್ಟೆಂಬರ್ 21 ರಂದು ಶನಿವಾರದಂದು ಈ ಯಕ್ಷಸಂಕ್ರಾಂತಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಈ ಸಲದ ಯಕ್ಷಸಂಕ್ರಾಂತಿಯಲ್ಲಿ ಎಂಟು ಮೇಳಗಳ ಕಲಾವಿದರ ಜೊತೆಗೆ ಅತಿಥಿ ದಿಗ್ಗಜರಿದ್ದಾರೆ.
ಈ ತನಕ ಬೆಂಗಳೂರಿನಲ್ಲಿ ಆಗದೇ ಇರುವ ನಾಲ್ಕು ಪ್ರಸಂಗಗಳ ಮುಖಾಮುಖಿಗಳಿವೆ. ಈ ಯಕ್ಷಸಂಕ್ರಾಂತಿಯಲ್ಲಿ ಅತಿಥಿ ಕಲಾವಿದರಾದ ಸುರೇಶ್ ಶೆಟ್ಟಿ ಶಂಕರನಾರಾಯಣ, ಬಳ್ಕೂರು ಕೃಷ್ಣ ಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ತೋಟಿಮನೆ ಗಣಪತಿ ಹೆಗಡೆ, ನವೀನ್ ಶೆಟ್ಟಿ ಐರ್ಬೈಲ್ ರಂಗಸ್ಥಳದಲ್ಲಿ ಇರಲಿದ್ದಾರೆ.
ಅದಲ್ಲದೇ ಮಾರಣಕಟ್ಟೆ ಮೇಳದ ಕಲಾವಿದರಾದ ಐರ್ಬೈಲ್ ಆನಂದ ಶೆಟ್ಟಿ, ರವಿ ಶೆಟ್ಟಿ ವಾಟಾರ್, ಶ್ರೀನಿವಾಸ ಪ್ರಭು ಮಂದಾರ್ತಿ ಮೇಳದ ಕಲಾವಿದರಾದ ಆಜ್ರಿ ಗೋಪಾಲ ಗಾಣಿಗ, ಸಾಲಿಗ್ರಾಮ ಮೇಳದ ಕಲಾವಿದರಾದ ಚಂದ್ರಕಾಂತ್ ರಾವ್ ಮೂಡುಬೆಳ್ಳೆ, ಸೃಜನ್ ಗಣೇಶ್, ಪೇರ್ಡೂರು ಮೇಳದ ಕಲಾವಿದರಾದ ರಾಘವೇಂದ್ರ ಆಚಾರ್ಯ ಜನ್ಸಾಲೆ, ಉದಯ್ ಕಡಬಾಳ್, ಸುನಿಲ್ ಭಂಡಾರಿ ಕಡತೋಕ, ಸುಜನ್ ಹಾಲಾಡಿ, ಮೆಕ್ಕೆಕಟ್ಟು ಮೇಳದ ಕಲಾವಿದರಾದ ಜಲವಳ್ಳಿ ವಿದ್ಯಾದರ್ ರಾವ್, ರಮೇಶ್ ಭಂಡಾರಿ ಇರಲಿದ್ದಾರೆ.
ಅತಿಥಿ ಕಲಾವಿದರು:
ಸುರೇಶ್ ಶೆಟ್ಟಿ ಶಂಕರನಾರಾಯಣ
ಬಳ್ಕೂರು ಕೃಷ್ಣ ಯಾಜಿ
ಕೊಂಡದಕುಳಿ ರಾಮಚಂದ್ರ ಹೆಗಡೆ
ತೋಟಿಮನೆ ಗಣಪತಿ ಹೆಗಡೆ
ನವೀನ್ ಶೆಟ್ಟಿ ಐರ್ಬೈಲ್
ಮಾರಣಕಟ್ಟೆ ಮೇಳದ ಕಲಾವಿದರು:
ಐರ್ಬೈಲ್ ಆನಂದ ಶೆಟ್ಟಿ
ರವಿ ಶೆಟ್ಟಿ ವಾಟಾರ್
ಶ್ರೀನಿವಾಸ ಪ್ರಭು
ಮಂದಾರ್ತಿ ಮೇಳದ ಕಲಾವಿದರು:
ಆಜ್ರಿ ಗೋಪಾಲ ಗಾಣಿಗ
ಸಾಲಿಗ್ರಾಮ ಮೇಳದ ಕಲಾವಿದರು:
ಚಂದ್ರಕಾಂತ್ ರಾವ್ ಮೂಡುಬೆಳ್ಳೆ
ಸೃಜನ್ ಗಣೇಶ್
ಪೇರ್ಡೂರು ಮೇಳದ ಕಲಾವಿದರು:
ರಾಘವೇಂದ್ರ ಆಚಾರ್ಯ ಜನ್ಸಾಲೆ
ಉದಯ್ ಕಡಬಾಳ್
ಸುನಿಲ್ ಭಂಡಾರಿ ಕಡತೋಕ
ಸುಜನ್ ಹಾಲಾಡಿ
ಮೆಕ್ಕೆಕಟ್ಟು ಮೇಳದ ಕಲಾವಿದರು:
ಜಲವಳ್ಳಿ ವಿದ್ಯಾದರ್ ರಾವ್
ರಮೇಶ್ ಭಂಡಾರಿ
ಕಮಲಶಿಲೆ ಮೇಳದ ಕಲಾವಿದರು:
ವಿಶ್ವನಾಥ್ ಹೆನ್ನಾಬೈಲ್
ಸುನಿಲ್ ಹೊಲಾಡು
ಹಾಲಾಡಿ ಮೇಳದ ಕಲಾವಿದರು:
ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ
ಹಟ್ಟಿಯಂಗಡಿ ಮೇಳದ ಕಲಾವಿದರು:
ದ್ವಿತೇಶ್ ಕಾಮತ್
ಅದಲ್ಲದೇ, ಕಮಲಶಿಲೆ ಮೇಳದ ಕಲಾವಿದರಾದ ವಿಶ್ವನಾಥ್ ಹೆನ್ನಾಬೈಲ್, ಸುನಿಲ್ ಹೊಲಾಡು, ಹಾಲಾಡಿ ಮೇಳದ ಕಲಾವಿದರಾದ ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ, ಹಟ್ಟಿಯಂಗಡಿ ಮೇಳದ ಕಲಾವಿದರಾದ ದ್ವಿತೇಶ್ ಕಾಮತ್ ಸೇರಿದಂತೆ ಹಲವು ಕಲಾವಿದರು ರಂಗಸ್ಥಳದಲ್ಲಿ ಇರಲಿದ್ದು ಯಕ್ಷ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಎಂಟು ಮೇಳಗಳ ಕಲಾವಿದರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಯಸಿದರೆ ಮುಂದಿನ ಸೀಟುಗಳಿಗಾಗಿ ಮುಂಗಡವಾಗಿಯೇ ಆನ್‌ಲೈನ್ ಬುಕ್ಕಿಂಗ್ ಮಾಡಬಹುದಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:15 pm, Mon, 26 August 24