Liquor: ಹೊಸ ವರ್ಷಕ್ಕೆ ಭರ್ಜರಿ ಮದ್ಯ ಮಾರಾಟ: ಅಬಕಾರಿ ಇಲಾಖೆ ಬೊಕ್ಕಸಕ್ಕೆ ಹರಿದು ಬಂತು 657 ಕೋಟಿ ರೂ. ಆದಾಯ
ಹೊಸ ವರ್ಷದ ಆರಂಭದಲ್ಲಿ ಭರ್ಜರಿ ಎಣ್ಣೆ ಮಾರಾಟ ಮಾಡುವ ಮೂಲಕ ಅಬಕಾರಿ ಇಲಾಖೆ ಬಂಪರ್ ಬೆಳೆ ಬೆಳೆದಿದೆ.
ಬೆಂಗಳೂರು: ಕೊರೊನಾದಿಂದಾಗಿ ಕಳೆದ ಮೂರು ವರ್ಷದಿಂದ ಹೊಸ ವರ್ಷ (New Year) ವನ್ನು ಸಂಭ್ರಮಿಸಲಾಗಿರಲಿಲ್ಲ. ಈ ಬಾರಿ ಹೊಸ ವರ್ಷಾಚರಣೆಗೆ ಅವಕಾಶ ಸಿಕ್ಕಿತ್ತು. ಹಾಗಾಗಿ ಇಡೀ ರಾಜ್ಯದ ಜನರು ರಾತ್ರಿಯಲ್ಲ ಕಣಿದು ಕುಪ್ಪಳಿಸುವ ಮೂಲಕ ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಿದರು. ಇಡೀ ಜಗತ್ತು 2022ಗೆ ಗುಡ್ ಬಾಯ್ ಹೇಳಿ 2023 ಬರಮಾಡಿಕೊಂಡಿದೆ. ಇನ್ನು ಹೊಸ ವರ್ಷವೆಂದ ಮೇಲೆ ಗುಂಡು ತುಂಡು ಇರಲೇಬೇಕು. ಹೊಸ ವರ್ಷದ ಆರಂಭದಲ್ಲಿ ಭರ್ಜರಿ ಎಣ್ಣೆ (liquor) ಮಾರಾಟ ಮಾಡುವ ಮೂಲಕ ಅಬಕಾರಿ ಇಲಾಖೆ ಬಂಪರ್ ಬೆಳೆ ಬೆಳೆದಿದೆ. ಹೊಸ ವರ್ಷಕ್ಕೆ ಲಕ್ಷ ಲಕ್ಷ ಲೀಟರ್ ಮದ್ಯವನ್ನ ಪಾನಪ್ರಿಯರು ಹೊಟ್ಟೆಗಿಳಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆ ಬೊಕ್ಕಸಕ್ಕೆ 657 ಕೋಟಿ ರೂ. ಆದಾಯ ಹರಿದು ಬಂದಿದೆ. ಕಳೆದ ಐದು ದಿನದಲ್ಲಿ ಅಬಕಾರಿ ಇಲಾಖೆ ಭರ್ಜರಿ ಮದ್ಯ ಮಾರಾಟ ಮಾಡಲಾಗಿದೆ.
ಇದನ್ನೂ ಓದಿ: New Year 2023: ಬೆಂಗಳೂರು ಪಬ್ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್, ಆದ್ರೂ ಹೌಸ್ ಫುಲ್
ಹಾಗಾದ್ರೆ ಯಾವ ಯಾವ ದಿನ ಎಷ್ಟೆಷ್ಟು ಮದ್ಯ ಮಾರಾಟವಾಗಿದೆ ಎಂಬ ಮಾಹಿತಿ ಇಲ್ಲಿದೆ.
- ಡಿ.27-3.57 ಲಕ್ಷ ಲೀಟರ್ ಮದ್ಯ, 2.41 ಲಕ್ಷ ಬಿಯರ್ ಮಾರಾಟ
- ಡಿ.28-2.31 ಲಕ್ಷ ಲೀಟರ್ ಮದ್ಯ, 1.67 ಲಕ್ಷ ಬಿಯರ್ ಮಾರಾಟ
- ಡಿ.29-2.31 ಲಕ್ಷ ಲೀಟರ್ ಮದ್ಯ, 1.93 ಲಕ್ಷ ಬಿಯರ್ ಮಾರಾಟ
- ಡಿ.30-2.93 ಲಕ್ಷ ಲೀಟರ್ ಮದ್ಯ, 2.59 ಲಕ್ಷ ಬಿಯರ್ ಮಾರಾಟ
- ಡಿ.31ರಂದು 3 ಲಕ್ಷ ಲೀಟರ್ ಮದ್ಯ, 2.41 ಲಕ್ಷ ಬಿಯರ್ ಮಾರಾಟ
- ಡಿ. 31ರಂದು ಒಂದೇ ದಿನ 181 ಕೋಟಿ ಮೌಲ್ಯದ ಮದ್ಯ ಮಾರಾಟ
- ಡಿ.23ರಿಂದ ಡಿ.31ರವರೆಗೆ 1,262 ಕೋಟಿ ಮೌಲ್ಯದ ಮದ್ಯ ಮಾರಾಟ
- ಡಿ.23ರಿಂದ 31ರವರೆಗೆ 20.66 ಲಕ್ಷ ಲೀಟರ್ ಐಎಂಎಲ್ ಮದ್ಯ ಮಾರಾಟ
- ಡಿಸೆಂಬರ್ 23ರಿಂದ 31ರವರೆಗೆ 15.04 ಲಕ್ಷ ಲೀಟರ್ ಬಿಯರ್ ಮಾರಾಟ
ಇದನ್ನೂ ಓದಿ: Bengaluru New Year: ಪಾರ್ಟಿ ಮೂಡ್ನಲ್ಲಿ ಟೆರೆಸ್ ಮೇಲೆ ಹೋಗುವಂತಿಲ್ಲ, ಪೊಲೀಸರ ಮತ್ತೊಂದು ಸೂಚನೆ
ದುಪ್ಪಟ್ಟು ಚಾರ್ಚ್ ನಡುವೆಯೂ ಪಬ್ಗಳು ಹೌಸ್ ಫುಲ್
ಹೊಸವರ್ಷ ಸಂಬಂಧ ಚರ್ಚ್ ಸ್ಟ್ರೀಟ್ಪಬ್ಗಳಿಗೆ ಫುಲ್ ಡಿಮ್ಯಾಂಡ್ ಇತ್ತು. ಕೊರೊನಾ ನಂತರ ಅದ್ಧೂರಿಯಾಗಿ ಹೊಸ ವರ್ಷಾಚರಣೆ (New Year) ಆಚರಿಸುತ್ತಿದ್ದು, ಪಬ್ ಮಾಲೀಕರು ಹೊಸ ವರ್ಷದ ಪಾರ್ಟಿಗೆ ಪ್ರತಿ ಬಾರಿಗಿಂತ ಇಂದು ಶೇ.50 ರಷ್ಟು ಬೆಲೆ ಏರಿಕೆ ಮಾಡಿದ್ದರು. ದುಪ್ಪಟ್ಟು ಚಾರ್ಚ್ ನಡುವೆಯೂ ಪಬ್ಗಳು ಹೌಸ್ ಫುಲ್ ಆಗಿದ್ದವು. ಪಾರ್ಟಿ ಪ್ರಿಯರು ದುಪ್ಪಟ್ಟು ಹಣ ಕೊಟ್ಟು ಮುಂಗಡ ಬುಕ್ಕಿಂಗ್ ಮಾಡಿದ್ದರು. ಪಬ್ಗಳಲ್ಲಿ ಮೋಜು ಮಸ್ತಿ ಮಾಡೋರಿಗೆ ಸ್ಪೆಷಲ್ ಪ್ಯಾಕೇಜ್ ಕೊಡಲಾಗಿತ್ತು. ಪಾರ್ಟಿ ಪ್ರಿಯರನ್ನು ಅಟ್ರ್ಯಾಕ್ಟ್ ಮಾಡಲು ಅನ್ ಲಿಮಿಟೆಡ್ ಆಫರ್ ವ್ಯವಸ್ಥೆ ನೀಡಲಾಗಿತ್ತು. ಕಪಲ್ಸ್, ಫ್ಯಾಮಿಲಿ, ಸಿಂಗಲ್ಸ್ಗಳಿಗೆ ಪ್ರತ್ಯೇಕ ಚಾರ್ಜ್ ಫಿಕ್ಸ್ ಮಾಡಲಾಗಿತ್ತು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:08 am, Sun, 1 January 23