New Year 2023: ಬೆಂಗಳೂರು ಪಬ್​ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​, ಆದ್ರೂ ಹೌಸ್​ ಫುಲ್​​

ಚರ್ಚ್ ಸ್ಟ್ರೀಟ್​ಪಬ್​ಗಳಿಗೆ ಫುಲ್​​ ಡಿಮ್ಯಾಂಡ್ ಬಂದಿದ್ದು, ಮಾಲೀಕರು ಹೊಸ ವರ್ಷದ ಪಾರ್ಟಿಗೆ ಪ್ರತಿ ಬಾರಿಗಿಂತ ಇಂದು ಶೇ.50 ರಷ್ಟು ಬೆಲೆ ಏರಿಕೆ ಮಾಡಿದ್ದಾರೆ.

New Year 2023: ಬೆಂಗಳೂರು ಪಬ್​ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​, ಆದ್ರೂ ಹೌಸ್​ ಫುಲ್​​
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Dec 31, 2022 | 9:19 PM

ಬೆಂಗಳೂರು: 2022ಕ್ಕೆ ಟಾಟಾ ಹೇಳಿ 2023ಕ್ಕೆ ಹಾಯ್​ ಹೇಳಲು ಕೆಲವೆ ಗಂಟೆಗಳು ಬಾಕಿ ಇವೆ. ದೇಶದ ಐಟಿ ನಗರ ಬೆಂಗಳೂರಿನಲ್ಲಿ 2023ಕ್ಕೆ ವೆಲ್​ಕಮ್​ ಮಾಡಿಕೊಳ್ಳಲು ಜನರು ಸಕಲ ಸಿದ್ದತೆಯಲ್ಲಿದ್ದಾರೆ. ಜನರು ಈಗಾಗಲೇ ಪಾರ್ಟಿಗಳಲ್ಲಿ ತೊಡಗಿದ್ದು ಕೆಲವರು ನಶೆ ಸಿ ಚಡ್ ಗಾಯಿ ಎನ್ನುತ್ತಿದ್ದಾರೆ. ಈ ಸಂಬಂಧ ಚರ್ಚ್ ಸ್ಟ್ರೀಟ್​ಪಬ್​ಗಳಿಗೆ (PUB) ಫುಲ್​​ ಡಿಮ್ಯಾಂಡ್ ಬಂದಿದೆ. ಹೌದು ಕೊರೊನಾ ನಂತರ ಅದ್ಧೂರಿಯಾಗಿ ಹೊಸ ವರ್ಷಾಚರಣೆ (New Year) ಆಚರಿಸುತ್ತಿದ್ದು, ಪಬ್ ಮಾಲೀಕರು ಹೊಸ ವರ್ಷದ ಪಾರ್ಟಿಗೆ ಪ್ರತಿ ಬಾರಿಗಿಂತ ಇಂದು ಶೇ.50 ರಷ್ಟು ಬೆಲೆ ಏರಿಕೆ ಮಾಡಿದ್ದಾರೆ. ದುಪ್ಪಟ್ಟು ಚಾರ್ಚ್ ನಡುವೆಯೂ ಪಬ್​ಗಳು ಹೌಸ್ ಫುಲ್ ಆಗಿವೆ.

ಇದನ್ನೂ ಓದಿ: ಐಎಎಸ್ ಅಧಿಕಾರಿಗಳ ಬೆನ್ನಲ್ಲೇ 53 ಐಪಿಎಸ್​ ಅಧಿಕಾರಿಗಳಿಗೆ ನ್ಯೂ ಇಯರ್​ ಗಿಫ್ಟ್​​ ನೀಡಿದ ರಾಜ್ಯ ಸರ್ಕಾರ

ಪಾರ್ಟಿ ಪ್ರಿಯರು ಈಗಾಗಲೆ ದುಪ್ಪಟ್ಟು ಹಣ ಕೊಟ್ಟು ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಪಬ್​ಗಳಲ್ಲಿ ಮೋಜು ಮಸ್ತಿ ಮಾಡೋರಿಗೆ ಸ್ಪೆಷಲ್ ಪ್ಯಾಕೇಜ್ ಕೊಡಲಾಗಿದೆ. ಪಾರ್ಟಿ ಪ್ರಿಯರನ್ನು ಅಟ್ರ್ಯಾಕ್ಟ್ ಮಾಡಲು ಅನ್ ಲಿಮಿಟೆಡ್ ಆಫರ್ ವ್ಯವಸ್ಥೆ ಮಾಡಲಾಗಿದೆ. ಕಪಲ್ಸ್, ಫ್ಯಾಮಿಲಿ, ಸಿಂಗಲ್ಸ್​ಗಳಿಗೆ ಪ್ರತ್ಯೇಕ ಚಾರ್ಜ್ ಫಿಕ್ಸ್​ ಮಾಡಲಾಗಿದೆ.

ಇದನ್ನೂ ಓದಿ: ದಿನದ ಪ್ರಮುಖ ಸುದ್ದಿಯ ರೌಂಡಪ್; BSFನ ಹೆಚ್ಚುವರಿ ಮಹಾನಿರ್ದೇಶಕರ ನೇಮಕ, ಅಪಘಾತದಲ್ಲಿ ಮೃತಪಟ್ಟ KSRTC ಚಾಲಕನ ಕುಟುಂಬಕ್ಕೆ 1 ಕೋಟಿ ಪರಿಹಾರದವರೆಗೆ

ದುಪ್ಪಟ್ಟು ಚಾರ್ಚ್ ನಡುವೆಯೂ ಪಾರ್ಟಿ ಪ್ರಿಯರು ಪಬ್​ಗಳತ್ತ ಆಗಮಿಸುತ್ತಿದ್ದಾರೆ. ಸಿಲಿಕಾನ್ ಸಿಟಿ ಮಂದಿ ಆನ್​ಲೈನ್ ಮೂಲಕ ಈಗಾಗ್ಲೇ ಪಬ್ ಬುಕ್ ಮಾಡಿದ್ದಾರೆ.

ಏರ್​​​ಪೋರ್ಟ್​​ ರಸ್ತೆಯಲ್ಲಿ ಹೆಚ್ಚಿದ ವಾಹನಗಳ ಸಂಚಾರ ದಟ್ಟಣೆ

ಕೆಂಪೆಗೌಡ ಅಂತರಾಷ್ಟ್ರೀಯ ಏರ್​​​ಪೋರ್ಟ್​​ ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಿದೆ. ಜನರು ನ್ಯೂ ಇಯರ್​ ಸೆಲೆಬ್ರೇಷನ್​ಗೆ ಬೆಂಗಳೂರಿನತ್ತ ಹೊರಟಿದ್ದಾರೆ. ಮತ್ತೆ ಕೆಲವರು ಬೆಂಗಳೂರು ನಗರದಿಂದ ರೆಸಾರ್ಟ್​​ಗಳತ್ತ ಹೊರಟಿದ್ದಾರೆ.

ಪಾರ್ಟಿ ಮೂಡ್​​ನಲ್ಲಿ ಟೆರೆಸ್ ಮೇಲೆ ಹೋಗುವಂತಿಲ್ಲ, ಪೊಲೀಸರ ಮತ್ತೊಂದು ಸೂಚನೆ

ಪಬ್, ರೆಸ್ಟೊರೆಂಟ್ ವಿಚಾರದಲ್ಲಿ ಬೆಂಗಳೂರು ಪೊಲೀಸರು ಮತ್ತೊಂದು ಸೂಚನೆ ಹೊರಡಿಸಿದ್ದಾರೆ. ಪಾರ್ಟಿ ಮೂಡ್​​ನಲ್ಲಿ ಟೆರೆಸ್ ಮೇಲೆ ಹೋಗುವಂತಿಲ್ಲ ಎಂದು ಪೊಲೀಸರು ಕಡ್ಡಾಯ ಸೂಚನೆಯನ್ನು ಹೊರಡಿಸಿದ್ದಾರೆ. ಹೊಸ ವರ್ಷಾಚರಣೆ ವೇಳೆ ಮದ್ಯ ಸೇವನೆ ಮಾಡಿ ಟೆರೆಸ್ ಹತ್ತಿ ಆಯಾ ತಪ್ಪಿ‌ ಬೀಳುವ ಸಾಧ್ಯತೆ ಹಿನ್ನಲೆ ಓಪನ್ ಟೆರೆಸ್​​ಗಳ ಕಡೆ ಯಾರು ಹೋಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಟೆರೆಸ್ ಮೇಲೆ ಹೋಗುವ ಬಾಗಿಲುಗಳನ್ನ ಕಡ್ಡಾಯವಾಗಿ ಮುಚ್ಚುವಂತೆ ಪಬ್, ರೆಸ್ಟೋರೆಂಟ್ ಮಾಲೀಕರಿಗೆ ಸೂಚನೆ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:12 pm, Sat, 31 December 22