AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡನಿಗೆ ಏಡ್ಸ್​​ -ಹೆಂಡತಿಗೆ ಸರ್ಕಾರಿ ಕೆಲಸ ನಿರಾಕರಣೆ: ಒಂಬುಡ್ಸ್‌ಮನ್​​ಗೆ ಮೊರೆ ಹೋಗಿ ಮರಳಿ ಕೆಲಸ ಪಡೆದ ಮಹಿಳೆ

ಕರ್ನಾಟಕ ಸರ್ಕಾರಿ ಇಲಾಖೆಯಲ್ಲಿ ಹೌಸ್​​ ಕೀಪಿಂಗ್​​ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯ ಗಂಡನಿಗೆ ಎಚ್‌ಐವಿ/ಏಡ್ಸ್ ಬಂದಿದ್ದು ಮೂರು ತಿಂಗಳ ಸಂಬಳ ನೀಡಿ ಕೆಲಸದಿಂದ ತೆಗೆದು ಹಾಕಲಾಗಿತ್ತು. ಸದ್ಯ ಒಂಬುಡ್ಸ್‌ಮನ್‌ ಮಧ್ಯಸ್ಥಿಕೆಯಿಂದಾಗಿ ಆ ಕೆಲಸ ಮತ್ತೆ ಸಿಕ್ಕಿದೆ.

ಗಂಡನಿಗೆ ಏಡ್ಸ್​​ -ಹೆಂಡತಿಗೆ ಸರ್ಕಾರಿ ಕೆಲಸ ನಿರಾಕರಣೆ: ಒಂಬುಡ್ಸ್‌ಮನ್​​ಗೆ ಮೊರೆ ಹೋಗಿ ಮರಳಿ ಕೆಲಸ ಪಡೆದ ಮಹಿಳೆ
ಏಡ್ಸ್​
ಆಯೇಷಾ ಬಾನು
|

Updated on: Jul 31, 2024 | 12:01 PM

Share

ರಾಜ್ಯದ ಸರ್ಕಾರಿ ಇಲಾಖೆಯೊಂದರಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಅವರ ಪತಿ ಏಡ್ಸ್‌ಗೆ (AIDS) ತುತ್ತಾಗಿದ್ದಾರೆಂಬ ಕಾರಣಕ್ಕೆ ಮೂರು ತಿಂಗಳ ಸಂಬಳದೊಂದಿಗೆ ಕಡ್ಡಾಯವಾಗಿ ಮನೆಗೆ ಕಳುಹಿಸಲಾಗಿತ್ತು. ಪ್ರಕರಣದಲ್ಲಿ ಇದೀಗ ಕರ್ನಾಟಕ ಸರ್ಕಾರ (Karnataka Government) ಆ ಮಹಿಳೆಯನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತಾಗಿದೆ. ಹೌಸ್​​ ಕೀಪಿಂಗ್​​ (House Keeping) ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಎಚ್‌ಐವಿ/ಏಡ್ಸ್ ಒಂಬುಡ್ಸ್‌ಮನ್‌ ಮಧ್ಯಸ್ಥಿಕೆಯಿಂದಾಗಿ ಆ ಕೆಲಸ ಮತ್ತೆ ಸಿಕ್ಕಿದೆ.

ಮೂರು ವರ್ಷಗಳ ಹಿಂದೆ ಇಲಾಖೆಗೆ ಸೇರಿದ್ದ ಮಹಿಳೆಯು ಹೌಸ್​​ ಕೀಪಿಂಗ್​​ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮಹಿಳೆಗೆ ತಿಂಗಳಿಗೆ 7,500 ರೂಪಾಯಿ ಸಂಬಳ ನೀಡಲಾಗುತ್ತಿತ್ತು. ಸದರಿ ಮಹಿಳೆಯು ಬಾಡಿಗೆ ಮನೆಯಲ್ಲಿ ತನ್ನ ಗಂಡ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಳು.

ಇದನ್ನೂ ಓದಿ: Viral Video: ಮಹಿಳೆಯನ್ನು ಹತ್ಯೆಗೈದು ಮೃತದೇಹ ಗಂಗಾ ನದಿಗೆ ಎಸೆದ ದುಷ್ಕರ್ಮಿಗಳು; ವಿಡಿಯೋ ಇಲ್ಲಿದೆ ನೋಡಿ

ಎರಡು ವರ್ಷಗಳ ಹಿಂದೆ ಆಕೆಯ ಗಂಡನಿಗೆ ಏಡ್ಸ್‌ ಪರೀಕ್ಷೆ ಮಾಡಿಸಲಾಗಿದ್ದು, ಪಾಸಿಟೀವ್​​ ಎಂದು ದೃಢಪಟ್ಟಿತ್ತು. ತನ್ನ ಗಂಡನಿಗೆ ಏಡ್ಸ್​ ಇರುವುದು ಖಾತರಿಯಾಗಿದೆ ಎಂದು ಮಹಿಳೆಯು ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡಾಗ, ಆಕೆಯನ್ನು ನೇಮಿಸಿಕೊಂಡ ಸಂಸ್ಥೆಯು ಮೂರು ತಿಂಗಳ ಸಂಬಳದೊಂದಿಗೆ ಕಡ್ಡಾಯ ರಜೆ ಮೇಲೆ ಮನೆಗೆ ಕಳುಹಿಸಿತು. ಮುಂದೆ ಹಲವಾರು ಮನವಿಗಳ ಹೊರತಾಗಿಯೂ, ಸರ್ಕಾರವು ಆಕೆಗೆ ಉದ್ಯೋಗವನ್ನು ನಿರಾಕರಿಸಿತ್ತು.

ಕೊನೆಗೆ ಬಾಧಿತ ಮಹಿಳೆಯು ಎಚ್‌ಐವಿ/ಏಡ್ಸ್ ಒಂಬುಡ್ಸ್‌ಮನ್ ಶಿವಕುಮಾರ್ ವೀರಯ್ಯ ಅವರನ್ನು ಸಂಪರ್ಕಿಸಿದರು. ಸದರಿ ಅಧಿಕಾರಿಯು ಸಕಾಲದಲ್ಲಿ ಇದೀಗ ಪ್ರಕರಣವನ್ನು ವಿಲೇವಾರಿ ಮಾಡಿದ್ದಾರೆ. ಅದೇ ಹುದ್ದೆಗೆ ಮಹಿಳೆಯನ್ನು ತಕ್ಷಣವೇ ನೇಮಿಸಿಕೊಳ್ಳುವಂತೆ ಸರ್ಕಾರಿ ಏಜೆನ್ಸಿಗೆ ಸೂಚಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಮಹಿಳೆ ಕೆಲಸಕ್ಕೆ ಹೋಗುತ್ತಿದ್ದು, ಸಂಬಳ ಪಡೆಯುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ