Bengaluru News: ಟ್ರಾಫಿಕ್​ ಸಮಸ್ಸೆ​, ಆಕ್ಸಿಡೆಂಟ್​ಗೂ ಕೂಡ ಕರೆ ಮಾಡಿ 112ಗೆ

ಕಳ್ಳತನ, ಕೊಲೆ, ಕಿರುಕುಳ ಹಾಗೂ ರೋಡ್ ರೋಮಿಯೋಗಳು ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸೈಬರ್ ಅಪರಾಧ ಕೃತ್ಯಗಳಿಗೆ 112 ಕರೆ ಮಾಡುವ ಅವಕಾಶ ಇತ್ತು. ಇದೀಗ ಟ್ರಾಫಿಕ್​ ಸಮಸ್ಸೆಗಳಿಗೂ 112ಗೆ ಕರೆ ಮಾಡಿ.

Bengaluru News: ಟ್ರಾಫಿಕ್​ ಸಮಸ್ಸೆ​, ಆಕ್ಸಿಡೆಂಟ್​ಗೂ ಕೂಡ ಕರೆ ಮಾಡಿ 112ಗೆ
ಸಾಂದರ್ಭಿಕ ಚಿತ್ರ
Edited By: ವಿವೇಕ ಬಿರಾದಾರ

Updated on: Jul 22, 2023 | 9:05 AM

ಬೆಂಗಳೂರು: ಇದುವರೆಗೆ ಕಳ್ಳತನ, ಕೊಲೆ, ಕಿರುಕುಳ ಹಾಗೂ ರೋಡ್ ರೋಮಿಯೋಗಳು ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸೈಬರ್ ಅಪರಾಧ (Crime) ಕೃತ್ಯಗಳಿಗೆ ಸಂಬಂಧಿಸಿದಂತೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡುವ ಅವಕಾಶ ಇತ್ತು. ಇನ್ಮುಂದೆ ಸಂಚಾರ ಸಮಸ್ಯೆಗಳಿಗೂ (Traffic Problem) ಸಹ ನಿಯಂತ್ರಣ ಕೊಠಡಿಗೆ ಕರೆ ಮಾಡಬಹುದಾಗಿದೆ. ಹೌದು ಟ್ರಾಫಿಕ್​​ಜಾಮ್​, ಒನ್​ವೇ ಡ್ರೈವಿಂಗ್, ನೋ ಪಾರ್ಕಿಂಗ್ ಹಾಗೂ ಸಿಗ್ನಲ್​​ಗಳಲ್ಲಿ ಏನೇ ಗಲಾಟೆಗಳಾದರು 112ಗೆ ಕರೆ ಮಾಡಿ ತಿಳಿಸಬಹುದು.

ನೀವು ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ‘ಕೋಬ್ರಾ’ ಸಿಬ್ಬಂದಿ ಸ್ಥಳಕ್ಕೆ ಆಗಮಿಸುತ್ತಾರೆ. ಇನ್ಮುಂದೆ ಸಂಚಾರ ಸಮಸ್ಯೆಗಳಿಗೂ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:  Bengaluru News: ವಾಹನ ಚಾಲಕರೇ ಎಚ್ಚರ! ಟ್ರಾಫಿಕ್​ ರೂಲ್ಸ್​ ಬ್ರೇಕ್​​ ಮಾಡಿದ್ರೆ ಬೀಳುತ್ತೆ ಕ್ರಿಮಿನಲ್ ಕೇಸ್

ಇತ್ತೀಚಿಗೆ ಮಲ್ಲೇಶ್ವರದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ನಾಗರಿಕರೊಬ್ಬರು ಸೂಚಿಸಿದಂತೆ ಈಗ ಸಂಚಾರ ವಿಭಾಗದ ಸಮಸ್ಯೆಗಳನ್ನು ಕೂಡ ನಮ್ಮ 112 ಸೌಲಭ್ಯ ಮೂಲಕ ದಾಖಲಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಅನುವು ಮಾಡಲಾಗಿದೆ. ಈ ರೀತಿಯ ಸಂಚಾರ ಸಮಸ್ಯೆಗಳನ್ನು ಹೊಯ್ಸಳ ಬದಲಾಗಿ ದ್ವಿಚಕ್ರ ವಾಹನ ಮೇಲಿನ ಸಂಚಾರ ವಿಭಾಗದ ಸಿಬ್ಬಂದಿ (ಕೋಬ್ರಾ) ನಿರ್ವಹಿಸಲಿದ್ದಾರೆ. ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:05 am, Sat, 22 July 23

Rachappaji Naik S

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Follow Us