ಬೆಂಗಳೂರು: ಗಾಯಾಳು ನೆರವಿಗೆ ಧಾವಿಸದ ಪೊಲೀಸ್ರ ವಿರುದ್ದ ಇಲಾಖಾ ತನಿಖೆಗೆ ಆದೇಶ
ಬೆಂಗಳೂರಿನ ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿ ಜು.15 ರ ತಡರಾತ್ರಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಗಾಯಗೊಂಡು ರಸ್ತೆ ಮೇಲೆ ಗೋಳಾಡುತ್ತಿದ್ದ ವ್ಯಕ್ತಿಯನ್ನು ಹೊಯ್ಸಳ ವಾಹನ ಇದ್ದರೂ ಆಸ್ಪತ್ರೆಗೆ ಸಾಗಿಸದೆ, ಪೊಲೀಸರು ನೋಡುತ್ತಾ ನಿಂತುಕೊಂಡಿದ್ದರು. ಇದೀಗ ನಿರ್ಲಕ್ಷ್ಯ ತೋರಿರುವ ಪೊಲೀಸ್ ಸಿಬ್ಬಂದಿ ವಿರುದ್ಧ ಇಲಾಖಾ ತನಿಖೆಗೆ ಸೂಚಿಸಲಾಗಿದೆ.
ಬೆಂಗಳೂರು, ಜುಲೈ.18: ಯಶವಂತಪುರ(Yeswanthpur) ಠಾಣಾ ವ್ಯಾಪ್ತಿಯಲ್ಲಿ ಬೈಕ್ನಿಂದ ಬಿದ್ದು ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸದೆ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನಲೆ ಹೊಯ್ಸಳ ಸಿಬ್ಬಂದಿ ವಿರುದ್ಧ ಇಲಾಖಾ ತನಿಖೆಗೆ ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ಆದೇಶಿಸಿದ್ದಾರೆ. ಇದೇ ಜು.15 ರಂದು ಅಪಘಾತವಾಗಿ ವ್ಯಕ್ತಿಯೋರ್ವ ರಸ್ತೆಯಲ್ಲಿ ಬಿದ್ದಿದ್ದ. ಈ ವೇಳೆ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಇದ್ದು, ಆತನ ಸಹಾಯಕ್ಕೆ ಮುಂದಾಗಿರಲಿಲ್ಲ. ಈ ಹಿನ್ನಲೆ ತನಿಖೆಗೆ ಆದೇಶಿಸಲಾಗಿದೆ.
ಪೊಲೀಸರ ನಿರ್ಲಕ್ಷ್ಯತನದ ವಿಡಿಯೋ ಮಾಡಿದ್ದ ಸ್ಥಳೀಯರು
ಇನ್ನು ಘಟನೆ ಬಳಿಕ ಸ್ಥಳೀಯರು ಹೇಳಿದರೂ ಹೊಯ್ಸಳ ವಾಹನದಲ್ಲಿ ಸಾಗಿಸದೆ ಪೊಲೀಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದರು. ಈ ಪೊಲೀಸರ ನಿರ್ಲಕ್ಷ್ಯವನ್ನ ಅಲ್ಲಿದ್ದವರು ವಿಡಿಯೋ ಮಾಡಿಕೊಂಡಿದ್ದರು. ನಂತರ ಖಾಸಗಿ ವ್ಯಕ್ತಿಯ ಕಾರಿನಲ್ಲಿ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ನಡೆದಿದೆ. ಸದ್ಯ ನಿರ್ಲಕ್ಷ್ಯ ತೋರಿರೋ ಪೊಲೀಸ್ ಸಿಬ್ಬಂದಿ ವಿರುದ್ಧ ಇಲಾಖಾ ತನಿಖೆಗೆ ಸೂಚಿಸಲಾಗಿದೆ.
ಇದನ್ನೂ ಓದಿ:ಗಾಯಾಳು ನೆರವಿಗೆ ಧಾವಿಸದ ಪೊಲೀಸ್ರು, ಮೂಕ ಪ್ರೇಕ್ಷಕರಂತೆ ನೋಡಿಕೊಂಡು ನಿಂತ್ರು
ಮೂಕ ಪ್ರೇಕ್ಷಕರಂತೆ ನೋಡಿಕೊಂಡ ನಿಂತಿದ್ದ ಪೊಲೀಸ್
ಬೆಂಗಳೂರಿನ ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿ ಜು.15 ರ ತಡರಾತ್ರಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಗಾಯಗೊಂಡು ರಸ್ತೆ ಮೇಲೆ ಗೋಳಾಡುತ್ತಿದ್ದ ವ್ಯಕ್ತಿಯನ್ನು ಹೊಯ್ಸಳ ವಾಹನ ಇದ್ದರೂ ಆಸ್ಪತ್ರೆಗೆ ಸಾಗಿಸದೆ, ಪೊಲೀಸರು ನೋಡುತ್ತಾ ನಿಂತುಕೊಂಡಿದ್ದರು. ಈ ವೇಳೆ ಜನರು ಗಾಯಾಳುವನ್ನು ನಿಮ್ಮ ಹೊಯ್ಸಳ ವಾಹನದಲ್ಲಿ ಕರೆದುಕೊಂಡಿ ಹೋಗಿ ಎಂದಿದ್ದಕ್ಕೆ , ಕಿಡಿಕಾರಿದ್ದ ಪೊಲೀಸರು,‘ಹೊಯ್ಸಳ ಕಾರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಇರುವುದಲ್ಲ. ಯಾವುದಾದರೂ ಆಟೋ ಬಂದರೆ ಕಳಿಸಿಕೊಡ್ತೇವೆ ನೀವೇ ಆಸ್ಪತ್ರೆಗೆ ಸೇರಿಸಿ ಎಂದು ಹೇಳಿ, ಬೇಜವಾಬ್ದಾರಿ ಮೆರೆದಿದ್ದರು. ಅದನ್ನು ಸ್ಥಳೀಯರು ವಿಡಿಯೋ ಮಾಡಿಕೊಂಡು ಬಳಿಕ ಆತನನ್ನ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಹಿರಿಯ ಪೊಲೀಸ್ ಅಧಿಕಾರಿಗಳು, ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ವಿರುದ್ದ ಕ್ರಮಕೈಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ