ಬೆಂಗಳೂರು: ಅರಣ್ಯ ಇಲಾಖೆಯ ಭರ್ಜರಿ ಕಾರ್ಯಾಚರಣೆ; ಆನೆ ದಂತ ಚೋರರ ಬಂಧನ

|

Updated on: Aug 17, 2024 | 7:04 PM

ಅರಣ್ಯ ಅಧಿಕಾರಿಗಳು ಇಂದು(ಶನಿವಾರ) ಭರ್ಜರಿ ಕಾರ್ಯಾಚರಣೆ ಮಾಡಿದ್ದು, ಬೆಂಗಳೂರಿನ ರಾಜನುಕುಂಟೆ ಏರ್ಪೋಟ್ ರಸ್ತೆ ಸಾದರಹಳ್ಳಿ ಬಳಿ ಇಬ್ಬರು ಆನೆ ದಂತ ಚೋರರನ್ನು ಬಂಧಿಸಿದ್ದಾರೆ. ಬಂಧಿತರಿಂದ ಬೆಲೆ ಬಾಳುವ 8.5 ಮತ್ತು 9 ಕೆ.ಜಿ ಎರಡು ಆನೆ ದಂತವನ್ನು ಜಪ್ತಿ ಮಾಡಲಾಗಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು: ಅರಣ್ಯ ಇಲಾಖೆಯ ಭರ್ಜರಿ ಕಾರ್ಯಾಚರಣೆ; ಆನೆ ದಂತ ಚೋರರ ಬಂಧನ
ಬೆಂಗಳೂರಿನಲ್ಲಿ ಆನೆ ದಂತ ಚೋರರ ಬಂಧನ
Follow us on

ಬೆಂಗಳೂರು, ಆ.17: ಅರಣ್ಯ ಇಲಾಖೆ(Forest Department)ಯ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿ ಇಬ್ಬರು ಆನೆ ದಂತ ಚೋರರನ್ನು ಬಂಧಿಸಿದ್ದಾರೆ. ರಾಜನುಕುಂಟೆ ಏರ್ಪೋಟ್ ರಸ್ತೆ ಸಾದರಹಳ್ಳಿ(Sadarahalli) ಬಳಿ ಆರೋಪಿಗಳಾದ ಮೋಹನ್, ಆನಂದ್ ಹಾಗೂ ವಿನೋದ್​ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಬೆಲೆ ಬಾಳುವ 8.5 ಮತ್ತು 9 ಕೆ.ಜಿ ಎರಡು ಆನೆ ದಂತವನ್ನು ಜೊತೆಗೆ ಕೃತ್ಯಕ್ಕೆ ಬಳಸಲಾದ ಕಾರೊಂದನ್ನು ವಶಕ್ಕೆ ಪಡೆಯಲಾಗಿದೆ.

ಘಟನೆ ವಿವರ

ಇಂದು(ಶನಿವಾರ) ಬೆಳಗ್ಗೆ 10 ಗಂಟೆಯ ಸುಮಾರಿಗೆ ಬೆಂಗಳೂರಿಗೆ KA-53-D-9181 ವಾಹನ ಸಂಖ್ಯೆಯ ಕಾರೊಂದರಲ್ಲಿ ಅತ್ಯಂತ ಬೆಲೆ-ಬಾಳುವ ಎರಡು ಆನೆಯ ದಂತಗಳನ್ನು ಮಾರಾಟಕ್ಕಾಗಿ ತೆಗೆದುಕೊಂಡು ಹೋಗುತ್ತಿರುವ ಕುರಿತು ಬೆಂಗಳೂರು ನಗರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಖಚಿತ ಮಾಹಿತಿ ಬರುತ್ತದೆ. ಕೂಡಲೇ ಕಾರ್ಯಪ್ರವೃತ್ತರಾಗಿ, ಬೆಂಗಳೂರು ಮತ್ತು ಯಲಹಂಕ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಕಾಯುತ್ತಿದ್ದ ಸಮಯದಲ್ಲಿ ಬೆಂಗಳೂರು ವಲಯ ವ್ಯಾಪ್ತಿಯಲ್ಲಿ ವಾಹನವನ್ನ ತಡೆದು, ಪರೀಕ್ಷಿಸಲಾಗುತ್ತದೆ. ಈ ವೇಳೆ ವಾಹನದಲ್ಲಿ ಎರಡು ಆನೆ ದಂತಗಳು ಕಂಡುಬರುತ್ತವೆ. ಕೂಡಲೇ ಕೃತ್ಯದಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳಾದ ಮೋಹನ್​, ಆನಂದ್​ ಹಾಗೂ ವಿನೋದ್​ ಎಂಬುವವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ಪೊಲೀಸರಿಗೆ ಸವಾಲ್ ಹಾಕಿ ಕಳ್ಳತನ ಮಾಡುತ್ತಿದ್ದವ ಅರೆಸ್ಟ್: ಕಾಡಿನ ಬಂಡೆ ಕೆಳಗೆ ಚಿನ್ನಾಭರಣ ಹೂತಿಟ್ಟಿದ್ದ ಚಿನ್ನ ವಶಕ್ಕೆ

ವರಮಹಾಲಕ್ಷ್ಮಿ ಹಬ್ಬದ ದಿನ ರಾತ್ರಿಯೇ ದೇವಿ ಗುಡಿಗೆ ಕನ್ನ

ಕೊಡಗು: ವರಮಹಾಲಕ್ಷ್ಮಿ ಹಬ್ಬದ ದಿನ ರಾತ್ರಿಯೇ ದೇವಿ ಗುಡಿಗೆ ಕಳ್ಳತನ ಮಾಡಿದ್ದಾರೆ. ಮಡಿಕೇರಿಯ ಕೋಟೆ ಮಾರಿಯಮ್ಮ ದೇವಾಲಯದ ಬಾಗಿಲು ಮುರಿದು ಒಳನುಗ್ಗಿದ ಚೋರರು, ದೇವಸ್ಥಾನವು ಸಿಸಿ ಕ್ಯಾಮರ ತಿರುಗಿಸಿ, ಮೂರು ಲಕ್ಷ ರೂ. ಗೂ ಅಧಿಕ ಮೌಲ್ಯದ ದೇವರ ಕೀರಿಟ, ಚಿನ್ನಾಭರಣ, ಭಂಡಾರ ಹೊತ್ತೊಯ್ದಿದ್ದಾರೆ. ಸ್ಥಳಕ್ಕೆ ಮಡಿಕೇರಿ ನಗರ ಠಾಣೆ ಪೊಲೀಸರು, ಬೆರಳಚ್ಚು, ಶ್ವಾನದಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:58 pm, Sat, 17 August 24