AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ 20ಕ್ಕೂ ಹೆಚ್ಚು ಬಿಲ್ಡರ್​ಗಳ‌ ಮನೆ, ಕಚೇರಿಗಳ ಮೇಲೆ ಐಟಿ ದಾಳಿ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ವಾರ ಬೆಂಗಳೂರಿನ ಮೇಘನಾ ಫುಡ್ಸ್​ ಗ್ರೂಪ್ ಕಂಪನಿಗೆ ಸೇರಿದ 10ಕ್ಕೂ ಹೆಚ್ಚು ಕಡೆ ದಾಳಿ ಮಾಡಿದ್ದರು. ಇದೀಗ ಬೆಂಗಳೂರಿನಲ್ಲಿರುವ 20ಕ್ಕೂ ಹೆಚ್ಚು ಬಿಲ್ಡರ್​​ಗಳ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬೆಂಗಳೂರಿನ 20ಕ್ಕೂ ಹೆಚ್ಚು ಬಿಲ್ಡರ್​ಗಳ‌ ಮನೆ, ಕಚೇರಿಗಳ ಮೇಲೆ ಐಟಿ ದಾಳಿ
ಆದಾಯ ತೆರಿಗೆ ಇಲಾಖೆ
Jagadisha B
| Edited By: |

Updated on:Mar 30, 2024 | 12:41 PM

Share

ಬೆಂಗಳೂರು, ಮಾರ್ಚ್​ 30: ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳು ಶನಿವಾರ (ಮಾರ್ಚ್​. 30) ಬೆಳಿಗ್ಗೆ ಬೆಂಗಳೂರಿನಲ್ಲಿರುವ (Bengaluru) 20ಕ್ಕೂ ಹೆಚ್ಚು ಬಿಲ್ಡರ್​​ಗಳ (Builders) ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ.

ಮೇಘನಾ ಫುಡ್ಸ್​ ಗ್ರೂಪ್ ಕಂಪನಿ ಮೇಲೆ ದಾಳಿ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ವಾರ ಬೆಂಗಳೂರಿನ ಮೇಘನಾ ಫುಡ್ಸ್​ ಗ್ರೂಪ್ ಕಂಪನಿಗೆ ಸೇರಿದ 10ಕ್ಕೂ ಹೆಚ್ಚು ಕಡೆ ದಾಳಿ ಮಾಡಿದ್ದರು. ಮೇಘನಾ ಫುಡ್ಸ್ ಕಂಪನಿ ಹೋಟೆಲ್ ಮತ್ತು ರೆಸ್ಟೋರೆಂಟ್​ಗಳನ್ನು ನಡೆಸುತ್ತಿದ್ದು, ಇದರ ಕೋರಮಂಗಲ, ಇಂದಿರಾನಗರ, ಜಯನಗರದಲ್ಲಿರುವ ಶಾಖೆಗಳಿವೆ. ಆದಾಯ ತೆರಿಗೆ ಪಾವತಿಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು.

ಇದನ್ನೂ ಓದಿ: ಕಾಂಗ್ರೆಸ್​ಗೆ ಐಟಿ ನೋಟಿಸ್​ ಬಿಜೆಪಿಯವರ ತೆರಿಗೆ ಭಯೋತ್ಪಾದನೆ ಎಂದ ಪ್ರಿಯಾಂಕ್​ ಖರ್ಗೆ

ಏನಿದು ಐಟಿ ರೇಡ್?

ಆದಾಯ ತೆರಿಗೆ ಇಲಾಖೆ ಒಂದು ಸ್ಥಳದಲ್ಲಿ ನಡೆಸುವ ಶೋಧ ಮತ್ತು ಸರ್ವೇಕ್ಷಣೆ ಕಾರ್ಯಾಚರಣೆಯನ್ನೇ ರೇಡ್ ಎನ್ನುವುದು. ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಅಕ್ರಮವಾಗಿ ಹಣ ಇಟ್ಟುಕೊಂಡಿದ್ದು ಗೊತ್ತಾದರೆ ಅಥವಾ ಅನುಮಾನ ಬಂದರೆ ಐಟಿ ಇಲಾಖೆ ರೇಡ್ ಮಾಡುತ್ತದೆ.

ಕಪ್ಪು ಹಣ ಸಂಗ್ರಹವನ್ನು ನಿಗ್ರಹಿಸಲು ಸಾಮಾನ್ಯವಾಗಿ ಈ ರೇಡ್ ನಡೆಸಲಾಗುತ್ತದೆ. ತೆರಿಗೆ ಪಾವತಿಯಾಗದ ಹಣವನ್ನು ಕಪ್ಪು ಹಣ ಎಂದು ಭಾವಿಸಲಾಗುತ್ತದೆ. ಹೀಗಾಗಿ, ಅನ್​ಅಕೌಂಟೆಡ್ ಆಗಿರುವ ಹಣ, ಅಂದರೆ ದಾಖಲೆ ಇಲ್ಲದ ಮತ್ತು ತೆರಿಗೆ ಕಟ್ಟದೇ ಇರುವ ಹಣ ಕಪ್ಪು ಹಣ. ಒಡವೆಯೂ ಒಳಗೊಂಡಂತೆ ಯಾವುದೇ ಲೆಕ್ಕವಿಲ್ಲದ ಆಸ್ತಿಗಳು ಇದರಲ್ಲಿ ಒಳಗೊಳ್ಳುತ್ತವೆ.

ಆದಾಯ ತೆರಿಗೆ ಇಲಾಖೆ ದೇಶದ ಹಣಕಾಸು ಬೆಳವಣಿಗೆ ಬಗ್ಗೆ ಸದಾ ಜಾಗೃತವಾಗಿರುತ್ತದೆ. ಯಾವ ಬಿಸಿನೆಸ್ ಎಷ್ಟು ಲಾಭ ಮಾಡಿದೆ ಇತ್ಯಾದಿ ಎಲ್ಲವನ್ನೂ ಗಮನಿಸುತ್ತಾ ಇರುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:54 am, Sat, 30 March 24