ಬೆಂಗಳೂರಿನಲ್ಲಿ ವಾಯುಪಡೆಯ ಕೆಡಿಟ್ ಟ್ರೈನಿ ಸಾವಿನ ಬಗ್ಗೆ ಆಂತರಿಕ ವಿಚಾರಣೆಗೆ ಆದೇಶ

ಸೆಪ್ಟೆಂಬರ್ 21 ರಂದು ಬೆಂಗಳೂರಿನ ಏರ್ ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ ಅಂಡರ್ ಟ್ರೈನಿ ಫ್ಲೈಯಿಂಗ್ ಆಫೀಸರ್ ಅಂಕಿತ್ ಕುಮಾರ್ ಝಾ ಸಾವಿನ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳಿವೆ. ಮೃತ ಯುಟಿಎಫ್‌ಒ ಕಳೆದ ವರ್ಷ ಫೆಬ್ರವರಿಯಲ್ಲಿ...

ಬೆಂಗಳೂರಿನಲ್ಲಿ ವಾಯುಪಡೆಯ ಕೆಡಿಟ್ ಟ್ರೈನಿ ಸಾವಿನ ಬಗ್ಗೆ ಆಂತರಿಕ ವಿಚಾರಣೆಗೆ ಆದೇಶ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Digi Tech Desk

Updated on:Sep 26, 2022 | 2:29 PM

ಬೆಂಗಳೂರಿನಲ್ಲಿ ಟ್ರೈನಿ ಫ್ಲೈಯಿಂಗ್ ಆಫೀಸರ್ ಸಾವಿನ ಕುರಿತು ಆಂತರಿಕ ತನಿಖೆಗೆ ಆದೇಶಿಸಿರುವುದಾಗಿ ಭಾರತೀಯ ವಾಯುಪಡೆ (IAF) ಭಾನುವಾರ ತಿಳಿಸಿದೆ. ಈ ಪ್ರಕರಣದಲ್ಲಿ ಆರು ಐಎಎಫ್ ಅಧಿಕಾರಿಗಳ ಮೇಲೆ ಪೊಲೀಸರು ಕೊಲೆ ಆರೋಪ ಹೊರಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅಂಕಿತ್ ಕುಮಾರ್ ಝಾ ಎಂಬ ಟ್ರೈನಿಯ ಮೃತದೇಹ ಏರ್ ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ (ಎಎಫ್‌ಟಿಸಿ) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಝಾ ಅವರ ಸಹೋದರನ ದೂರಿನ ಮೇರೆಗೆ ಐಎಎಫ್ ಅಧಿಕಾರಿಗಳ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಸೆಪ್ಟೆಂಬರ್ 21 ರಂದು ಬೆಂಗಳೂರಿನ ಏರ್ ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ (AFTC) ಅಂಡರ್ ಟ್ರೈನಿ ಫ್ಲೈಯಿಂಗ್ ಆಫೀಸರ್ (UTFO) ಅಂಕಿತ್ ಕುಮಾರ್ ಝಾ ಸಾವಿನ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳಿವೆ. ಮೃತ ಯುಟಿಎಫ್‌ಒ ಕಳೆದ ವರ್ಷ ಫೆಬ್ರವರಿಯಲ್ಲಿ ಐಎಎಫ್‌ಗೆ ಸೇರಿದ್ದರು ಮತ್ತು ಎಎಫ್‌ಟಿಸಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಅವರ ತಂದೆಗೆ ತಿಳಿಸಿದ ನಂತರ ಸೆಪ್ಟೆಂಬರ್ 20 ರಂದು ಅವರ ತರಬೇತಿಯನ್ನು ಕೊನೆಗೊಳಿಸಲಾಯಿತು” ಎಂದು ಐಎಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಜೂನ್ 30 ರಂದು ಯುಟಿಎಫ್‌ಒ ವಿರುದ್ಧ ಸಹ ಮಹಿಳಾ ಟ್ರೈನಿ ಅಧಿಕಾರಿಯ ದೂರಿನ ನಂತರ ಸ್ಥಾಪಿಸಲಾದ ಆಂತರಿಕ ವಿಚಾರಣೆ (COI) ಮಾಡಿದ ಶಿಫಾರಸುಗಳ ಪರಿಣಾಮವಾಗಿ ತರಬೇತಿಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಐಎಎಫ್ ತಿಳಿಸಿದೆ.

ಯುಟಿಎಫ್‌ಒ ಕೆಲವು ದುರ್ನಡತೆಯ ಕೃತ್ಯಗಳನ್ನು ಮಾಡಿರುವುದು ಎಂದು ದೃಢಪಟ್ಟಿದೆ. ಈ ವಿಷಯದ ಬಗ್ಗೆ ಸ್ಥಾಪಿತ ಕಾರ್ಯವಿಧಾನದ ಪ್ರಕಾರ, ವಾಯುಪಡೆಯ ಪ್ರಧಾನ ಕಚೇರಿಯಲ್ಲಿ ಅನುಮೋದಿಸುವ ಮೊದಲು ವಿಚಾರಣೆಯ ಪ್ರಕ್ರಿಯೆಗಳನ್ನು ಅನೇಕ ಹಂತಗಳಲ್ಲಿ ಸರಿಯಾಗಿ ಪರಿಶೀಲಿಸಲಾಗಿದೆ  ಎಂದು ವಾಯುಪಡೆ ಹೇಳಿದೆ.

ಅಸ್ತಿತ್ವದಲ್ಲಿರುವ ನಿಯಮ ಪ್ರಕಾರ, ಅಂಕಿತ್ ಝಾ ಅವರ ಪೋಷಕರಿಗೆ ಈ ದುರದೃಷ್ಟಕರ ಘಟನೆಯ ಸುದ್ದಿಯನ್ನು ನವದೆಹಲಿಯಲ್ಲಿ ತಿಳಿಸಲು ಐಎಎಫ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಸೆಪ್ಟೆಂಬರ್ 23ರಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಯುಟಿಎಫ್‌ಒ ನ ಸಾವಿಗೆ ಕಾರಣ ಬಗ್ಗೆ ವಾಯುಪಡೆಯಿಂದ ಆಂತರಿಕ ವಿಚಾರಣೆ ನಡೆಯುತ್ತಿದೆ ಎಂದು ಅದು ಹೇಳಿದೆ. ಸೆಪ್ಟೆಂಬರ್ 24 ರಂದು, ಅವರ ಸಂಬಂಧಿಕರು ಎಎಫ್‌ಟಿಸಿ ಗೆ ಭೇಟಿ ನೀಡಿದರು. ಘಟನೆಯ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು.

ಭಾರತೀಯ ವಾಯುಪಡೆಯು ದುರದೃಷ್ಟಕರ ಜೀವಹಾನಿಗೆ ಸಂತಾಪ ವ್ಯಕ್ತಪಡಿಸುತ್ತದೆ. ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ಶಕ್ತಿಯನ್ನು ನೀಡುವಂತೆ ಪ್ರಾರ್ಥಿಸುತ್ತದೆ. ಈ ಬಗ್ಗೆ ಪೊಲೀಸರು ನಡೆಸುತ್ತಿರುವ ತನಿಖೆಗೆ ಐಎಎಫ್ ಸಹಕಾರ ನೀಡುತ್ತಿದೆ.

ಆತನ ಸಹೋದರ ಅಮನ್ ಝಾ ಅವರ ದೂರಿನ ಆಧಾರದ ಮೇಲೆ ಅಂಕಿತ್ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಆರು ಐಎಎಫ್ ಅಧಿಕಾರಿಗಳ ವಿರುದ್ಧ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

Published On - 2:13 pm, Mon, 26 September 22

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ